ಬೆಂಗಳೂರು,ಮಾರ್ಚ್,12,2026 (www.justkannada.in): ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಎಂಬ ವಿಚಾರ, ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಗೆ ಸಮಸ್ಯೆ ಇಲ್ಲ ಎಂದು ಆಹಾರ ಇಲಾಖೆ ಸಚಿವ ಕೆ.ಎಚ್ ಮುನಿಯಪ್ಪ ಸ್ಪಷ್ಟಪಡಿಸಿದರು.
ಇಂದು ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ, ಅತಿವೃಷ್ಠಿ, ಅನಾವೃಷ್ಠಿ ಸಮಸ್ಯೆಯಂತೆ ಇದು ಸಹ ಸಮಸ್ಯೆ ಅಂತಾ ತಿಳಿಯಬೇಕು. ಒಂದುವರ ಲಕ್ಷ ಕಮರ್ಷಿಯಲ್ ಗ್ಯಾಸ್ ಬೇಕು. ಮೂರುವರೆ ಲಕ್ಷ ಗೃಹಬಳಕೆ ಸಿಲಿಂಡರ್ ಬೇಕಾಗುತ್ತದೆ, ನಾವು ಶೇ. 75 ರಷ್ಟು ಹೊರದೇಶದ ಮೇಲೆ ಡಿಪೆಂಡ್ ಆಗಿದ್ದೇವೆ ಎಂದರು.
ಇನ್ನೆರಡು ದಿನದಲ್ಲಿ ಮುಂಬೈಗೆ ಗ್ಯಾಸ್ ಸಿಲಿಂಡರ್ ಬರಲಿದೆ. ಹಡಗು ಬರಲು ಬಿಟ್ಟಿರುವುದರಿಂದ ಸಮಸ್ಯೆ ಬಗೆಹರಿಯಲಿದೆ. ಎರಡು ದಿನದಲ್ಲಿ ಒಂದು ಹಡಗು 10 ದಿನದಲ್ಲಿ ಮತ್ತೊಂದು ಹಡಗು ಬರುತ್ತದೆ. ಡಿಸಿಗೂ ಸೂಚನೆ ನೀಡಲಾಗಿದೆ ಇದರಲ್ಲಿ ಗೊಂದಲ ಬೇಡ. ನಾನು ಸಾರ್ವಜನಿಕರಲ್ಲೂ ಮನವಿ ಮಾಡುತ್ತೇನೆ ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಗ್ಯಾಸ್ ಬುಕ್ ಮಾಡಿಕೊಳ್ಳಿ. ಹೋಟೆಲ್, ಆಸ್ಪತ್ರೆ, ಶಾಲೆಗಳಿಗೆ ಕರ್ಮಷಿಯಲ್ ಗ್ಯಾಸ್ ಬೇಕಾಗುತ್ತದೆ ಎಂದು ಸಚಿವ ಮುನಿಯಪ್ಪ ತಿಳಿಸಿದರು.
Key words: no problem, domestic, use, gas cylinders, Minister, KH Muniappa
The post ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಗೆ ಸಮಸ್ಯೆ ಇಲ್ಲ-ಸಚಿವ ಕೆ.ಎಚ್ ಮುನಿಯಪ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




