ಬೆಂಗಳೂರು,ಫೆಬ್ರವರಿ,27,2026 (www.justkannada.in): ಗ್ಯಾರಂಟಿಗಳು ಹೊರೆಯಾದರೂ ಅವುಗಳನ್ನ ಸ್ಥಗಿತಗೊಳಿಸುವುದಿಲ್ಲ.ಪರಿಷ್ಕರಣೆಯನ್ನೂ ಮಾಡಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
‘ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆಯಾಗುತ್ತಿವೆ’ ಎಂಬ ತಮ್ಮ ಹೇಳಿಕೆಗೆ ಟೀಕೆಗಳು ವ್ಯಕ್ತವಾದ ಬೆನ್ನಲ್ಲೆ ಈ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆಯಾಗುತ್ತಿದೆ ನಿಜ. ಆದರೆ ನಾವು ಯಾವುದೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ, ಪರಿಷ್ಕರಣೆಯನ್ನೂ ಮಾಡಲ್ಲ ಎಂದರು.
ಆರ್ಥಿಕ ಶಿಸ್ತು ತಪ್ಪುತ್ತಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಅಭಿವೃದ್ಧಿ ಕೆಲಸಗಳಿಗೆ ಹಣದ ಕೊರತೆಯಿಲ್ಲ ಮತ್ತು ಗ್ಯಾರಂಟಿಗಳ ಮೂಲಕ ಹಣ ನೇರವಾಗಿ ಜನರ ಕೈ ಸೇರುತ್ತಿರುವುದರಿಂದ ಆರ್ಥಿಕತೆಗೆ ಚೈತನ್ಯ ಸಿಗುತ್ತಿದೆ ಎಂದರು.
Key words: guarantee, burden, Not stopping, DCM, DK Shivakumar
The post ಗ್ಯಾರಂಟಿ ಹೊರೆಯಾದರೂ ಸ್ಥಗಿತವಿಲ್ಲ-ಡಿಸಿಎಂ ಡಿಕೆಶಿ ಸ್ಪಷ್ಟನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




