7
March, 2026

A News 365Times Venture

7
Saturday
March, 2026

A News 365Times Venture

ಜನರ ಆಶೀರ್ವಾದವಿದ್ದರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ- ಸಿಎಂ ಸಿದ್ದರಾಮಯ್ಯ

Date:

ಮೈಸೂರು, ಮಾರ್ಚ್,7,2026 (www.justkannada.in):  ಜನರ ಆಶೀರ್ವಾದವಿದ್ದರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ. ಸಮಾಜದ ಬಡವರು ಹಾಗೂ ಅಶಕ್ತರಿಗೆ ಶಕ್ತಿ ತುಂಬುವುದೇ ನನ್ನ ಕಾಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಪಿಲ್ಲಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಶ್ರೀ ಆದಿಶಕ್ತತ್ಮಕ ದಂಡಿಮಾರಮ್ಮ ದೇವಾಲಯದ ಪ್ರತಿಷ್ಠಾಪನೆ ಮಹೋತ್ಸವ ಹಾಗೂ ಕುಂಭಕಳಶದ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ  ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಚಾಮುಂಡೇಶ್ವರಿ ಹಾಗೂ ವರುಣಾ ಕ್ಷೇತ್ರದ ಜನರನ್ನು ಅಭಿನಂದಿಸಿದ ಸಿಎಂ

ದೇವರು  ದೇಗುಲಗಳಲ್ಲಿ ಇರುತ್ತಾರೆಂಬುದು ನಮ್ಮ ನಂಬಿಕೆ. ದೇವರ  ಆರಾಧನೆಯಿಂದ ಒಳಿತಾಗುತ್ತದೆ ಎಂಬ ನಂಬಿಕೆಯನ್ನು ನಾನು ವಿರೋಧಿಸುವುದಿಲ್ಲ. ಆದರೆ ದೇವರು ಎಲ್ಲೆಡೆಯೂ ಇದ್ದಾನೆ ಎಂದು ನಾನು ನಂಬುವವನು ಮತ್ತು ಆಚರಿಸುವವನು. 1978 ರಲ್ಲಿ ತಾಲ್ಲೂಕು ಅಭಿವೃದ್ಧಿ ಮಂಡಳಿಯ ಪ್ರಥಮ ಬಾರಿಗೆ ಚುನಾವಣೆಯಲ್ಲಿ ಸ್ಪರ್ದಿಸಿದಾಗ ಇಲ್ಲಿನ ಜನರ ಆಶೀರ್ವಾದ ನನಗೆ ದೊರೆತಿತ್ತು. ನಂತರ ವಿಧಾನಸಭಾ ಚುನಾವಣೆಯಲ್ಲಿ ಜನರ ಸಹಕಾರ ದೊರೆಯಿತು. ಮೈಸೂರು ತಾಲ್ಲೂಕಿನ ಚಾಮುಂಡೇಶ್ವರಿ ಹಾಗೂ ವರುಣಾ ಕ್ಷೇತ್ರದ ಜನರ ಆಶೀರ್ವಾದದಿಂದ ಈವರೆಗೆ 8 ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದು, ರಾಜ್ಯದ ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ.  ಜನರ ಆಶೀರ್ವಾದವಿದ್ದರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ. ಪಿಲ್ಲಹಳ್ಳಿ ಜನರ ಪ್ರೀತಿಯಿಂದಾಗಿ ಇಲ್ಲಿನ ದೇವಸ್ಥಾನದ ಉದ್ಘಾಟನೆಗೆ ಆಗಮಿಸಿದ್ದೇನೆ. 1978 ರಿಂದ ಇಂದಿನವರೆಗೂ ಹಾಗೂ ಮುಂದೆಯೂ ಈ ಭಾಗದ ಜನರ ಸಹಕಾರ ದೊರೆಯುವ ವಿಶ್ವಾಸವಿದೆ ಎಂದರು.

ಎಲ್ಲರಿಗೂ ಒಳಿತನ್ನು ಬಯಸುವುದೇ ಮುಖ್ಯ

ಶ್ರೀ ದಂಡಿಮಾರಮ್ಮ ದೇವಸ್ಥಾನಕ್ಕೆ ಬಾಲ್ಯದಿಂದಲೂ ಭೇಟಿ ನೀಡುತ್ತಿದ್ದ ನೆನಪನ್ನು ಮೆಲುಕು ಹಾಕಿದ  ಸಿಎಂ ಸಿದ್ದರಾಮಯ್ಯ, ದೇವರನ್ನು ಕಷ್ಟ ಬಂದಾಗ ನೆನಪಿಸಿಕೊಳ್ಳದೇ, ಎಲ್ಲ ಸಂದರ್ಭದಲ್ಲಿಯೂ ಸ್ಮರಿಸಬೇಕು ಎಂದರು. ‘ದೇವನೊಬ್ಬ ನಾಮ ಹಲವು’ ಎಂದು ನಂಬಿ, ದೇವರು ನಮ್ಮೊಳಗೂ ಸೇರಿದಂತೆ ಎಲ್ಲ ಕಡೆಯೂ ಇದ್ದಾನೆ.  ಎಲ್ಲರಿಗೂ ಒಳಿತನ್ನು ಬಯಸುವುದೇ ಮುಖ್ಯ.  ಯಾವೊಂದು ಧರ್ಮ ಜಾತಿಗಳು ಪ್ರೀತಿಯನ್ನು ಬೋಧಿಸುತ್ತದೆಯೇ ಹೊರತು ದ್ವೇಷಿಸುವುದನ್ನು ಬೋಧಿಸುವುದಿಲ್ಲ ಎಂದರು.

ಸಮಾನತೆ ಸ್ಥಾಪಿಸುವುದೇ ಸರ್ಕಾರದ ಯೋಜನೆಗಳ ಗುರಿ

ಸಮಾಜದ ಅಸಮಾನತೆ ಕಡಿಮೆಯಾಗಬೇಕು. ಸಮಾನತೆಯ ಸ್ಥಾಪಿಸುವ ಉದ್ದೇಶವನ್ನು ಸರ್ಕಾರದ ಎಲ್ಲ ಯೋಜನೆಗಳು ಹೊಂದಿವೆ. ಸಮಾಜದ ಎಲ್ಲ ಜಾತಿ ಧರ್ಮ, ವರ್ಗಗಳಿಗೆ ಆರ್ಥಿಕ ಸಾಮಾಜಿಕ ಶಕ್ತಿ ದೊರೆಯಬೇಕು. ಲಿಂಗ ತಾರತಮ್ಯ  ಹೋಗಲಾಡಿಸಿ, ಮಹಿಳೆಯರಿಗೆ ಶಕ್ತಿ ತುಂಬಲು ಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ. ಸಮಾಜದ ಬಡವರು, ಅಶಕ್ತರಿಗೆ ಶಕ್ತಿ ತುಂಬುವುದೇ ನನ್ನ ಉದ್ದೇಶ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ  ಸೌಲಭ್ಯಗಳು ದೊರೆತಾಗ ಮಾತ್ರ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words: CM,  blessings, people, CM Siddaramaiah

The post ಜನರ ಆಶೀರ್ವಾದವಿದ್ದರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ- ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಇರಾನ್-ಇಸ್ರೇಲ್ ಸಂಘರ್ಷ: ಬೆಂಗಳೂರಿನಲ್ಲಿ ಅಡುಗೆ ಎಣ್ಣೆ ದರ ಏರಿಕೆ

ಬೆಂಗಳೂರು,ಮಾರ್ಚ್,7,2026 (www.justkannada.in):  ಇರಾನ್ ಮೇಲೆ ಇಸ್ರೇಲ್,  ಅಮೆರಿಕಾ ಮತ್ತು ದಾಳಿ ನಡೆಸಿದ್ದು...

ಸಿಎಂ ಸಿದ್ದರಾಮಯ್ಯ ಅವರ ಸೌಜನ್ಯದ ನಡೆ: ದಿ. ಗೋಪಾಲಗೌಡರ ಪುತ್ರ ರಾಮಮನೋಹರ್ ಧನ್ಯವಾದ.

  ಬೆಂಗಳೂರು, ಮಾ.೦೭,೨೦೨೬ : ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಗೋಪಾಲಗೌಡರ ಹೆಸರನ್ನು ಇಡುವುದಾಗಿ...

ಹೈಕಮಾಂಡ್ ಅವಕಾಶ ಕೊಟ್ಟರೆ ಮತ್ತೆರಡು ಬಜೆಟ್ ಮಂಡಿಸುತ್ತೇನೆ- ಸಿಎಂ ಸಿದ್ದರಾಮಯ್ಯ

ಮೈಸೂರು, ಮಾರ್ಚ್,7,2026 (www.justkannada.in): ಅಧಿಕಾರ ಹಂಚಿಕೆ, ನಾಯಕತ್ವ ಬದಲಾವಣೆ ಚರ್ಚೆ ನಡುವೆ...

ಸಿಎಂರಿಂದ ಒಳ್ಳೆಯ ಬಜೆಟ್: ಕೇಂದ್ರ ಸಹಕಾರ ನೀಡುತ್ತಿಲ್ಲ- ಸಚಿವ ಎನ್.ಎಸ್ ಬೋಸರಾಜು

ಕಲಬುರುಗಿ,ಮಾರ್ಚ್,7,2026 (www.justkannada.in): ನಿನ್ನೆ ಸಿಎಂ ಸಿದ್ದರಾಮಯ್ಯ 2026-27ನೇ ಸಾಲಿನ ರಾಜ್ಯ ಬಜೆಟ್...