ಬೆಂಗಳೂರು,ಜುಲೈ,21,2025 (www.justkannada.in): ಇತ್ತೀಚೆಗೆ ದೆಹಲಿಗೆ ಪ್ರವಾಸ ಕೈಗೊಂಡು ಕೇಂದ್ರ ಸಚಿವರ ಭೇಟಿಯಾಗಿ ರಾಜ್ಯದ ಯೋಜನೆಗಳ ಬಗ್ಗೆ ಚರ್ಚಿಸಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಇದೀಗ ಜುಲೈ 25ಕ್ಕೆ ಮತ್ತೆ ದೆಹಲಿಗೆ ತೆರಳುತ್ತಿದ್ದಾರೆ.
ಜುಲೈ 25ರಂದು ದೆಹಲಿಗೆ ತೆರಳಲಿರುವ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಿಲಾಗುತ್ತದೆ.
ಈ ಕುರಿತು ಪ್ರತಿಕ್ರಿಯೆ ನೀಢಿರುವ ಡಿಸಿಎಂ ಡಿಕೆ ಶಿವಕುಮಾರ್, ಜುಲೈ 25ರಂದು ನಾನು ಮತ್ತು ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗುತ್ತಿದ್ದೇವೆ ಅಷ್ಟು ಮಾತ್ರ ನನಗೆ ಗೊತ್ತು ಮಿಕ್ಕಿದ್ದು ಅಧಿವೇಶನ ನಡೆಯುತ್ತಿದೆ ಎಂದರು.
ಬಿಬಿಎಂಪಿ ವಿಭಜನೆ ವಿರೋಧಿಸಿ ಪಿಐಎಲ್ ಸಲ್ಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಅವರ ಹಕ್ಕನ್ನು ನಾನು ಮೊಟಕುಗೊಳಿಸಲು ಆಗುತ್ತಾ? ಕೋರ್ಟ್ ನಲ್ಲಿ ಅವರು ಪ್ರಶ್ನಿಸಬಹುದು . ಕೋರ್ಟಿಗೆ ಹೋಗಬಹುದು ಅದು ತಪ್ಪಲ್ಲ ಅವರು ಪಿಐಎಲ್ ಹಾಕುವುದನ್ನು ಬೇಡ ಅನ್ನೋಕಾಗುತ್ತಾ? ಎಂದು ಪ್ರಶ್ನಿಸಿದರು.
Key words: CM Siddaramaiah, DCM, DK Shivakumar, Delhi, July 25
The post ಜು.25 ರಂದು ಮತ್ತೆ ದೆಹಲಿಗೆ ಸಿಎಂ ಮತ್ತು ಡಿಸಿಎಂ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.