ಮೈಸೂರು,ಜುಲೈ,14,2025 (www.justkannada.in): ಕುಟುಂಬ ದತ್ತು ಕಾರ್ಯಕ್ರಮದ ಭಾಗವಾಗಿ, ಮೈಸೂರಿನ ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಶಾಸ್ತ್ರ ವಿಭಾಗದ ವತಿಯಿಂದ ಮೈಸೂರು ಜಿಲ್ಲೆ ವರುಣ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಬಿರದಲ್ಲಿ ಭಾಗವಹಿಸಿದ್ದ ಸುಮಾರು 200 ಫಲಾನುಭವಿಗಳಿಗೆ ವೈದ್ಯಕೀಯ ತಪಾಸಾಣೆ, ಬಿಪಿ ಪರೀಕ್ಷೆ, ಸಕ್ಕರೆ ಪರೀಕ್ಷೆ, ಮೂತ್ರದಲ್ಲಿನ ಗ್ಲೂಕೋಸ್ ಮತ್ತು ಕೀಟೋನ್ ಪರೀಕ್ಷೆಯನ್ನು ನಡೆಸಿ ಔಷಧಿಗಳನ್ನು ಸಹ ವಿತರಿಸಲಾಯಿತು.
ಇದೇ ವೇಳೆ ಪರಿಸರ ಪೋಷಣೆ ಚಟುವಟಿಕೆಯನ್ನು ಕೈಗೊಂಡಿದ್ದು, ಪ್ಲಾಸ್ಟಿಕ್ ನ ಆರೋಗ್ಯದ ಪರಿಣಾಮಗಳು ಮತ್ತು ಅದರ ತಡೆಗಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು. ಜನರಿಂದ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ ಪ್ರತಿಯಾಗಿ ಬಟ್ಟೆ ಚೀಲಗಳನ್ನು ವಿತರಿಸುವ ಉಪಕ್ರಮವನ್ನು ಕೈಗೊಳ್ಳಲಾಯಿತು.
Key words: Health camp, JSS Medical College, Mysore
The post ಜೆಎಸ್ಎಸ್ ವೈದ್ಯಕೀಯ ಕಾಲೇಜಿನಿಂದ ಆರೋಗ್ಯ ಶಿಬಿರ: ಪ್ಲಾಸ್ಟಿಕ್ ಬಗ್ಗೆ ಜಾಗೃತಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.