ಹುಬ್ಬಳ್ಳಿ,ಫೆಬ್ರವರಿ,7,2026 (www.justkannada.in): ಅಮೆರಿಕಾ –ಭಾರತ ನಡುವಿನ ವ್ಯಾಪಾರ ಒಪ್ಪಂದ ವಿಚಾರದಲ್ಲಿ ಅಮೇರಿಕಾ ಅಧ್ಯಕ್ಷ ಟ್ರಂಪ್ ಹೇಳಿದಂತೆ ಕೇಳುವ ಪರಿಸ್ಥಿತಿ ಬಂದಿದೆ. ಟ್ರಂಪ್ ಬಾಬಾ ಹೇಳಿದ್ದನ್ನ ಮೋದಿ ಬಾಬಾ ಕೇಳಬೇಕು ಅಂತ ಪರಿಸ್ಥಿತಿ ಇದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಲೇವಡಿ ಮಾಡಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಅಮೆರಿಕಾದಿಂದ ಯಾವುದೇ ವಸ್ತು ಬಂದರೆ ತೆರಿಗೆ ಇಲ್ಲ. ಆದರೆ ನಮ್ಮ ರೈತರ ಉತ್ಪನ್ನಗಳಿಗೆ ತೆರಿಗೆ ಹಾಕುತ್ತಾರೆ. ಕೇಂದ್ರದ ಈ ನಿರ್ಧಾರದಿಂದ ರೈತರಿಗೆ ತೊಂದರೆ ಆಗಲಿದೆ. ಅಮೇರಿಕಾ ಭಾರತ ನಡುವಿನ ಒಪ್ಪಂದದಿಂದ ಯಾರಿಗೆ ಲಾಭ ಆಗುತ್ತದೆ. ಟ್ರಂಬ್ ಬಾಬಾ ಹೇಳಿದ್ದನ್ನ ಮೋದಿ ಬಾಬಾ ಕೇಳಬೇಕು ಎಂದು ವ್ಯಂಗ್ಯವಾಡಿದರು.
ಭಾರತ್ ಪಾಕ್ ಯುದ್ದ ನಿಲ್ಲಿಸಿದ್ದು ನಾನೇ ಅಂತಾ ಟ್ರಂಪ್ ಹೇಳುತ್ತಾರೆ ಟ್ರಂಪ್ ಹೇಳಿಕೆ ವಿಚಾರವಾಗಿ ಬಿಜೆಪಿಯ ಒಬ್ಬರೂ ಕೂಡ ಮಾತನಾಡಲ್ಲ. ಬಾಂಗ್ಲಾ ವಲಸಿಗರ ವಿಚಾರದಲ್ಲಿ ಮಾತನಾಡುತ್ತಾರೆ ಎಷ್ಟು ಬಾಂಗ್ಲಾ ವಲಸಿಗರನ್ನ ದೇಶದಿಂದ ಗಡಿಪಾರು ಮಾಡಿದ್ದಾರೆ. ದೇಶದ ಗಡಿಗಳನ್ನ ಕಾಪಾಡೋದು ರಾಜ್ಯಗಳಲ್ಲ ಕೇಂದ್ರ ಸರ್ಕಾರ. ಆದರೆ ಅವರೇ ಬಾಂಗ್ಲಾ ವಲಸಿಗರು ಒಳಗೆ ಬರ್ತಾರೆ ಅಂತಾರೆ ಹಾಗಾದರೆ ಇದರ ಹೊಣೆ ಹೊತ್ತು ಯಾರು ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಟಾಂಗ್ ಕೊಟ್ಟರು.
Key words: situation, Modi Baba, listen, Trump Baba, Santhosh lad
The post ಟ್ರಂಪ್ ಬಾಬಾ ಹೇಳಿದ್ದನ್ನ ಮೋದಿ ಬಾಬಾ ಕೇಳಬೇಕು ಅಂತ ಪರಿಸ್ಥಿತಿ- ಸಚಿವ ಸಂತೋಷ್ ಲಾಡ್ ವ್ಯಂಗ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




