ಬೆಂಗಳೂರು,ಮಾರ್ಚ್,26,2026 (www.justkannada.in): ಇಂದು ವಿಧಾನಸಭೆಯಲ್ಲಿ ಬೆಂಗಳೂರು ನಗರ ಅಭಿವೃದ್ದಿ ಬಗ್ಗೆ ಉತ್ತರ ನೀಡುವ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಬಿಜೆಪಿ ಶಾಸಕ ಮುನಿರತ್ನ ನಡುವೆ ವಾಗ್ವಾದ ನಡೆಯಿತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಮುನಿರತ್ನ, ಬೆಂಗಳೂರು ಸಂಬಂಧಿಸಿದಂತೆ ಉತ್ತರ ನೀಡಲು ಡಿಕೆ ಶಿವಕುಮಾರ್ ಬಂದಿದ್ದರು. ಪ್ರಸ್ತಾಪಿಸಿದ ವಿಷಯಗಳಿಗೆ ಡಿಕೆ ಶಿವಕುಮಾರ್ ಉತ್ತರ ಕೊಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ನನ್ನ ಪ್ರಶ್ನೆಗಳ ಬಗ್ಗೆ ಮಾತನಾಡಲಿಲ್ಲ ಎಂದು ಕಿಡಿಕಾರಿದರು.
ಡಿಕೆ ಸುರೇಶ್ ಸೋತ ಬಳಿಕ ನನ್ನ ಮೇಲೆ ಸುಳ್ಳು ಕೇಸ್ ಹಾಕಿಸಿದ್ದಾರೆ. ಅದರ ದಾಖಲೆ ಬಗ್ಗೆ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ. ಡಿಕೆ ಶಿವಕುಮಾರ್ ನನ್ನ ಪ್ರಶ್ನೆಗಳಿಗೆ ಉತ್ತರ ಕೊಟ್ಟು ದೊಡ್ಡತನ ತೋರಬೇಕಿತ್ತು. ಅದನ್ನು ಬಿಟ್ಟು ಇವರೇ ಕೇಸ್ ಹಾಕಿಸಿ ಈಗ ಬಂದು ಮಾತನಾಡುತ್ತಿದ್ದಾರೆ ಇಂತಹವರಿಂದ ರಾಜ್ಯ ಏನು ಆಗುತ್ತೆ ಎಂದು ಯೋಚನೆ ಮಾಡಬೇಕು. ಉತ್ತರ ಕೊಡಲು ಆಗದೆ ಸದನ ಹಾಳು ಮಾಡಿದ್ದಾರೆ. ಭ್ರಷ್ಟಾಚಾರ ನಡೆಯುತ್ತಿದೆ ಅದರ ಬಗ್ಗೆ ನಾನು ಮಾತನಾಡಿದ್ದೇನೆ. ಡಿಕೆಶಿ ಇವತ್ತು ಉತ್ತರ ಕೊಡಬೇಕಿತ್ತು ಎಂದು ಶಾಸಕ ಮುನಿರತ್ನ ವಾಗ್ದಾಳಿ ನಡೆಸಿದರು.
Key words: DK Shivakumar, Session, answer, MLA, Munirathna
The post ಡಿಕೆ ಶಿವಕುಮಾರ್ ನನ್ನ ಪ್ರಶ್ನೆಗಳಿಗೆ ಉತ್ತರ ಕೊಟ್ಟು ದೊಡ್ಡತನ ತೋರಬೇಕಿತ್ತು- ಶಾಸಕ ಮುನಿರತ್ನ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




