30
July, 2025

A News 365Times Venture

30
Wednesday
July, 2025

A News 365Times Venture

ಡ್ರೋನ್ ಮೂಲಕ ಏರಿಯಲ್ ಸರ್ವೆ ನಡೆಸುವ “ ನಕ್ಷಾ ಯೋಜನೆ” ಗೆ ಮೈಸೂರಲ್ಲಿ ಇಂದು ಚಾಲನೆ.

Date:

ಮೈಸೂರು ಫೆ. 18:  ಕಂದಾಯ ಇಲಾಖೆ ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ಪೌರಾಡಳಿತ ಇಲಾಖೆಯ ವತಿಯಿಂದ ನಡೆಯುವ “ನಕ್ಷಾ” ನಗರ ಪ್ರದೇಶಗಳಲ್ಲಿನ ಆಸ್ತಿಗಳಿಗೆ ಭೂ ದಾಖಲೆಗಳ ರಚನೆ ಯೋಜನೆ ಇಂದಿನಿಂದ ಜಾರಿ.

ಈ ಸಮಾರಂಭಕ್ಕೆ ಮೈಸೂರಿನ ಬೋಗಾದಿಯ ರಂಗಮoದಿರದಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಚಾಲನೆ ನೀಡಿ ಮಾತನಾಡಿದರು,

ಭೂಮಾಲೀಕತ್ವದ ನಿಖರವಾದ ದಾಖಲಾತಿಯನ್ನು ರಚಿಸಲು ಮತ್ತು ನವೀಕರಿಸಲು, ಭೂ ವಿವಾದಗಳನ್ನು ಪರಿಹರಿಸಲು, ಆಸ್ತಿ ದಾಖಲೆಗಳನ್ನು ಸುಗಮಗೊಳಿಸಲು ಮತ್ತು ನಗರ ಯೋಜನೆಯನ್ನು ಹೆಚ್ಚಿಸಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.

ಈ ಯೋಜನೆಯು 194 ಕೋಟಿ ರೂ. ಅಂದಾಜು ವೆಚ್ಚದೊಂದಿಗೆ ಕೇಂದ್ರದಿಂದ ಸಂಪೂರ್ಣವಾಗಿ ಹಣವನ್ನು ವಿನಿಯೋಗ ಮಾಡಿದೆ. ರಾಜ್ಯ ಸರ್ಕಾರವು ಸಹ ಸಾಕಷ್ಟು ಯೋಜನೆ ಜಾರಿಗೊಳಿಸುತ್ತಿರುವುದು ಸಂತಸದ ವಿಷಯ ಎಂದರು.

ಮೈಸೂರು ಪ್ರಾದೇಶಿಕ ಭೂ ದಾಖಲೆಗಳ ನಿರ್ದೇಶಕ ಇ. ಪ್ರಕಾಶ್ ಮಾತನಾಡಿ, ಸದರಿ ಪ್ರಾಯೋಗಿಕ ಯೋಜನೆಯು ಕರ್ನಾಟಕದ 10 ನಗರ ಪ್ರದೇಶ ಗಳನ್ನೊಳಗೊಂಡಂತೆ ಭಾರತ ದೇಶದಾದ್ಯಂತ 152 ನಗರ ಪ್ರದೇಶ (ULB)ಗಳಲ್ಲಿ ಇಂದಿನಿಂದ ಅಳತ ಪ್ರಕ್ರಿಯೆಯು ಪ್ರಾರಂಭವಾಗಲಿದ್ದು ಡ್ರೋನ್ ಮೂಲಕ ಏರಿಯಲ್ ಸರ್ವೆ ಮಾಡಿ ಸರ್ವೇ ಆಫ್ ಇಂಡಿಯಾ ಅವರಿಂದ ORI SHEET ಪಡೆದು ROVER ಅಳತೆ ಮಾಪನದ ಮೂಲಕ  GROUND TRUTHING ಕಾರ್ಯ ಪೂರ್ಣಗೊಳಿಸಿ, ಹಕ್ಕುದಾಖಲೆಗಳ ಕುರಿತು ವಿಚಾರಣೆ ನಡೆಸಿ, ಆಸ್ತಿದಾರರಿಗೆ ಅಂತಿಮವಾಗಿ ಪಾಪರ್ಟಿ ಕಾರ್ಡ್  ವಿತರಿಸಲಾಗುವುದು.

ಈ ಪ್ರಾಯೋಗಿಕ ನಕ್ಷಾ ಯೋಜನೆಯನ್ನು  ಸರ್ವೆ ಆಫ್ ಇಂಡಿಯಾ, ಕಂದಾಯ ಇಲಾಖೆ ಮತ್ತು ಭೂಮಾಪನ ಇಲಾಖೆ ಹಾಗೂ ಪೌರಾಡಳಿತ ಇಲಾಖೆಗಳ ಸಹ ಭಾಗಿತ್ವದಲ್ಲಿ ಜಾರಿಗೊಳಿಸಲಾಗುತ್ತಿದೆ. ನೀವು ಆಸ್ತಿ ಕೊಂಡು ಕೊಳ್ಳುವ ಸಿದ್ಧತೆ ಯಲ್ಲಿದರೆ ನಿಮ್ಗೆ ಡಾಕ್ಯುಮಂಟ್ಸ್ ವಿಷ್ಯದಲಿ ಸಾಕಷ್ಟು ಮೋಸ ಹೋಗುವ ಸಾಧ್ಯತ್ಯೆ ಇರುತದೆ ಆದರೆ ಪಿಆರ್ ಕಾರ್ಡ್ ಹೊಂದಿರುವ ಆಸ್ತಿ ಯಲ್ಲಿ ಯಾವುದೇ ವಂಚನೆ ಆಗುವ ಸಾಧ್ಯತೆ ಇರುವುದಿಲ್ಲ. ಕಂದಾಯ ಇಲಾಖೆ,ಭೂ ಮಾಪನ ಇಲಾಖೆ,ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ಪೌರಾಡಳಿತ ಇಲಾಖೆ ವತಿಯಿಂದ ಇಂದು ನಕ್ಷಾ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದರು.

ಕಾರ್ಯಕ್ರಮ ದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ವಿವೇಕಾನಂದ, ಭೂ ಮಾಪನ ಇಲಾಖೆಯ ಉಪ ನಿರ್ದೇಶಕರಾದ ಸೀಮಾತಿನಿ,  ಡಿಡಿಎಲ್ಆರ್ ಇಲಾಖೆಯ ರಮ್ಯಾ, ನಗರ ಯೋಜನಾ ಅಧಿಕಾರಿ ಹಾಗೂ ಮತ್ತಿತರು ಉಪಸ್ಥಿತರಿದ್ದರು.

key words: “Naksha Yojana”, aerial survey, drones, Mysuru today.

SUMMARY:

“Naksha Yojana” to conduct aerial survey through drones will be launched in Mysuru today. The project will cost Rs 194 crore. The funds have been fully utilized by the Centre with an estimated cost.

The post ಡ್ರೋನ್ ಮೂಲಕ ಏರಿಯಲ್ ಸರ್ವೆ ನಡೆಸುವ “ ನಕ್ಷಾ ಯೋಜನೆ” ಗೆ ಮೈಸೂರಲ್ಲಿ ಇಂದು ಚಾಲನೆ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಆರೋಪ: ಯಾವುದೇ ಸಾಕ್ಷಿ ನೀಡಿಲ್ಲ- ಸಚಿವ ಚಲುವರಾಯಸ್ವಾಮಿ

ಬೆಂಗಳೂರು,ಜುಲೈ,30,2025 (www.justkannada.in):  ರಸಗೊಬ್ಬರವನ್ನ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ವಿಪಕ್ಷದವರು ಆರೋಪ...

ಡ್ರಗ್ಸ್ ಮಾಫಿಯಾ ವಿರುದ್ದ ಕಾರ್ಯಾಚರಣೆ: ಖುದ್ದು ಫೀ‍ಲ್ಡ್ ಗಿಳಿದು ತಪಾಸಣೆ ನಡೆಸಿದ ಪೊಲೀಸ್ ಕಮಿಷನರ್

ಮೈಸೂರು,ಜುಲೈ,30,2025 (www.justkannada.in):  ಮೈಸೂರಿನಲ್ಲಿ ಡ್ರಗ್ಸ್ ಮಾಫಿಯಾ ವಿರುದ್ದ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು...

ರಾಜ್ಯದಲ್ಲಿ ರಸಗೊಬ್ಬರ ಕೊರತೆ: ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಸಂಸದ ಡಾ.ಕೆ. ಸುಧಾಕರ್

ನವದೆಹಲಿ,ಜುಲೈ,30,2025 (www.justkannada.in): ರಾಜ್ಯದಲ್ಲಿ ರಸಗೊಬ್ಬರದ ಕೊರತೆಯುಂಟಾಗಿದ್ದು ರೈತರು ಪರದಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ...

ಮೋದಿ, ಬಿಎಸ್ ವೈ ಸೇರಿ ಬಿಜೆಪಿಯಿಂದ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿಲ್ಲ- ಬಿವೈ ವಿಜಯೇಂದ್ರ

ಬೆಂಗಳೂರು,ಜುಲೈ,30,2025 (www.justkannada.in): ಪ್ರಧಾನಿ ಮೋದಿ , ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ...