ತುಮಕೂರು,ಏಪ್ರಿಲ್,10,2025 (www.justkannada.in): ತುಮಕೂರು ರೈಲ್ವೆ ನಿಲ್ದಾಣಕ್ಕೆ ಶಿವಕುಮಾರ ಶ್ರೀಗಳ ಹೆಸರಿಡಲು ಪ್ರಸ್ತಾವನೆ ಬಂದಿದೆ. ಈ ಕುರಿತು ಸಿಎಂ ಜೊತೆ ಚರ್ಚಿಸಿ ಆದೇಶ ಹೊರಡಿಸುತ್ತಾರೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.
ತುಮಕೂರಿನ ಸಿದ್ದಗಂಗಾಮಠದಲ್ಲಿ ಇಂದು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ , ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರಿಟ್ಟರೇ ಶಾಶ್ವತವಾಗಿರುತ್ತೆ ಶ್ರೀಗಳ ಹೆಸರಿಡುವಂತೆ ಕೇಂದ್ರ ಸಚಿವ ಸೋಮಣ್ಣ ಕೂಡ ಮನವಿ ಮಾಡಿದ್ದಾರೆ.
ಶ್ರೀಗಳ ಹೆಸರಿಡಲು ಕೇಂದ್ರದಿಂದ ಮಂಜೂರು ಆಗಬೇಕು. ಶ್ರಿಗಳ ಹೆಸರಿಡುವ ವಿಚಾರದಲ್ಲಿ ವಿಳಂಬವಾಗಿಲ್ಲ. ಸಾರ್ವಜನಿಕ ಸ್ಥಳಗಳಿಗೆ ಹೆಸರಿಡಬೇಕಾದರೆ ಪ್ರೊಸಿಜರ್ ಇರುತ್ತೆ ಪ್ರಸ್ತಾವನೆಗಳು ಬಂದಾಗ ಸಾಧಕ ಬಾಧಕ ನೋಡಬೇಕಾಗುತ್ತೆ ಎಲ್ಲವನ್ನೂ ಪರಿಶೀಲಿಸಿದ ಬಳಿಕ ಪ್ರೊಸಿಜರ್ ಆಗಬೇಕಲ್ಲ. ಹಾಗಾಗಿ ವಿಳಂಬವಾಗಿದೆ ಎಂದರು.
Key words: Tumkur Railway Station, named, Shivakumar Shri, Home Minister, Parameshwar
The post ತುಮಕೂರು ರೈಲ್ವೆ ನಿಲ್ದಾಣಕ್ಕೆ ಶಿವಕುಮಾರ ಶ್ರೀಗಳ ಹೆಸರು: ಪ್ರಸ್ತಾವನೆ ಕುರಿತು ಚರ್ಚಿಸಿ ಆದೇಶ- ಗೃಹ ಸಚಿವ ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.