ಮೈಸೂರು,ಜೂನ್,14,2025 (www.justkannada.in): ಮೈಸೂರು ದಸರಾ ಲೆಕ್ಕವನ್ನು 8 ತಿಂಗಳ ಬಳಿಕ ಕೊಟ್ಟಿದ್ದಾರೆ, 49.61ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಸರ್ಕಾರದ ಹಣವನ್ನು ಇಷ್ಟೊಂದು ಖರ್ಚು ಮಾಡುವ ಅವಶ್ಯಕತೆ ಇತ್ತಾ? ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಹೆಚ್.ವಿಶ್ವನಾಥ್, 40% ಹಣವನ್ನು ಬರೀ ಯುವ ದಸರಾ ಎಂದು ಖರ್ಚು ಮಾಡಿದ್ದಾರೆ. 2003ರಲ್ಲಿ ನಾವು ದಸರಾ ಮಾಡುವಾಗ ಸರ್ಕಾರದಿಂದ ಅನುದಾನ ಸಿಕ್ಕಿರಲಿಲ್ಲ. ಖಾಸಗಿ ಕಂಪನಿಗಳಿಂದ ಸ್ಪಾನ್ಸರ್ ಶಿಪ್ ಪಡೆದು ದಸರಾ ಮಾಡಿದ್ದೆವು. ಮಾವುತರನ್ನು ಸನ್ಮಾನಿಸಿ ಆನೆಗಳನ್ನು ಕ್ಯಾಂಪ್ ನಿಂದ ಕಾಲು ನಡಿಗೆಯಲ್ಲಿ ಮೈಸೂರಿಗೆ ಕರೆ ತರುತ್ತಿದ್ದೆವು. ಹೀಗೇ ಮುಂದುವರೆದರೆ ಮುಂದಿನ ದಿನಗಳಲ್ಲಿ 100 ಕೋಟಿ ರೂಪಾಯಿಯಲ್ಲಿ ದಸರಾ ಮಾಡುತಾರೆ.
ಇವೆಲ್ಲವನ್ನು ಬಿಟ್ಟು ಮೊದಲು ಅರಮನೆ ಲೂಟಿಯಾಗುವುದನ್ನು ತಡೆಯಿರಿ. ಸುಬ್ರಹ್ಮಣ್ಯ ಎಂಬ ಅಧಿಕಾರಿ ಅರಮನೆಯನ್ನು ಲೂಟಿ ಮಾಡುತ್ತಿದ್ದಾರೆ. ಮೈಸೂರು ಉಸ್ತುವಾರಿ ಸಚಿವ ಮಹದೇವಪ್ಪ, ಸುಬ್ರಹ್ಮಣ್ಯನನ್ನು ತೆಗೆಯಲು ಕಷ್ಟ ಎಂದು ಹೇಳುತ್ತಿದ್ದಾರೆ. ದುಡ್ಡು ಕೊಟ್ಟು ಎಲ್ಲರನ್ನೂ ಕೊಂಡುಕೊಂಡಿದ್ದಾರೆ ಎಂದು ಹೇಳುತ್ತಾರೆ. ಅರಮನೆಯಲ್ಲಿ ಆಗುತ್ತಿರುವ ಅಕ್ರಮವನ್ನು ಮೊದಲು ತಡೆಯಿರಿ ಎಂದು ಎಚ್ ವಿಶ್ವನಾಥ್ ಆಗ್ರಹಿಸಿದರು.
Key words: Mysore Dasara, spent, Rs 49.61 crore, MLC, H.Vishwanath
The post ದಸರಾಗೆ 49.61ಕೋಟಿ ರೂಪಾಯಿ ಖರ್ಚು ಮಾಡುವ ಅವಶ್ಯಕತೆ ಇತ್ತಾ..? MLC ಹೆಚ್.ವಿಶ್ವನಾಥ್ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.