16
February, 2026

A News 365Times Venture

16
Monday
February, 2026

A News 365Times Venture

ದಸರಾ ಜಂಬೂಸವಾರಿ ಎಲ್ಲಾ ಆನೆಗಳು, ಕಾವಾಡಿ, ಮಾವುತರಿಗೆ ವಿಮೆ- ಡಿಸಿಎಫ್ ಪ್ರಭುಗೌಡ

Date:

ಮೈಸೂರು,ಆಗಸ್ಟ್,8,2025 (www.justkannada.in): ಮೈಸೂರು ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆಯ ಎಲ್ಲಾ 14 ಆನೆಗಳಿಗೂ ವಿಮೆ ಮಾಡಿಸಲಾಗಿದೆ ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದರು.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಫ್ ಪ್ರಭುಗೌಡ, ಗಜಪಡೆಯ ಗಂಡಾನೆಗಳಿಗೆ ತಲಾ 5 ಲಕ್ಷ ರೂ., ಹೆಣ್ಣು ಆನೆಗಳಿಗೆ 2.5 ಲಕ್ಷ ರೂ., ಕಾವಾಡಿ ಮತ್ತು ಮಾವುತರಿಗೆ ತಲಾ 2 ಲಕ್ಷ ರೂ. ವಿಮೆ ಮಾಡಿಸಲಾಗಿದೆ. ವಿಮೆ ಅವಧಿ ಗಜಪಯಣ ಆದಾಗಿನಿಂದ ಹಿಡಿದು ಗಜಪಡೆ ವಾಪಸ್ ಕ್ಯಾಂಪ್ ಗೆ ಹೋಗುವವರೆಗೂ ವಿಮೆ ಮಾಡಿಸಲಾಗಿದೆ. ಆನೆಗಳಿಂದ ಸಾರ್ವಜನಿಕರಿಗೆ ಯಾವುದೇ ಅನಾಹುತ ಆದರೂ ಅಥವಾ ಸಾರ್ವಜನಿಕರಿಂದ ಆನೆಗಳಿಗೆ ಏನಾದರೂ ಆದರೂ ವಿಮೆ ಅನ್ವಯವಾಗಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಆನೆಗಳಿಗೂ ಇನ್ಸೂರೆನ್ಸ್ ಮಾಡಿಸಲಾಗಿದೆ ಎಂದು ತಿಳಿಸಿದರು.

ಸದ್ಯಕ್ಕೆ ಅರಣ್ಯ ಭವನದಲ್ಲಿ ಎಲ್ಲಾ ಆನೆಗಳು ಆರೋಗ್ಯವಾಗಿವೆ. ನಾಡಿನ ವಾತಾವರಣಕ್ಕೆ ಹೊಂದಿಕೊಂಡಿವೆ. ಎಂದಿನಂತೆ ಹುಲ್ಲು, ಭತ್ತ ಹಸಿ ಮೇವು,ಆಲದ ಸೊಪ್ಪು ಆಹಾರವಾಗಿ ಕೊಡುತ್ತಿದ್ದೇವೆ ಅರಮನೆಗೆ ಹೋದ ಮೇಲೆ ವಿಶೇಷವಾದ ಆಹಾರ ಕೊಡಲಾಗುತ್ತದೆ ಎಂದು ಡಿಸಿಎಫ್ ಪ್ರಭುಗೌಡ ಹೇಳಿದರು.

ಈ ಬಾರಿ ಜಂಬೂಸವಾರಿಯಲ್ಲಿ ಮೂರು ಹೊಸ ಆನೆಗಳು ಪಾಲ್ಗೊಳ್ಳಲಿವೆ. ಎರಡನೇ ಹಂತದಲ್ಲಿ ಕ್ಯಾಪ್ಟನ್ ಅಭಿಮನ್ಯು ತಂಡ ಸೇರಿಕೊಳ್ಳಲಿರುವ ಐದು ಆನೆಗಳಲ್ಲಿ ಶ್ರೀಕಂಠ, ರೂಪ ಮತ್ತು ಹೇಮಾವತಿ ಹೊಸ ಆನೆಗಳು ಇರಲಿವೆ.  ಹೇಮಾವತಿ ವೆರಿ ಎಂಗೆಸ್ಟ್ ಫೀ ಮೇಲ್ ಎಲಿಫೆಂಟ್. 10 ನೇ ತಾರೀಖು ಸಂಜೆ ಅರಮನೆಗೆ ಸಾಂಪ್ರದಾಯಿಕ ಪೂಜೆಯೊಂದಿಗೆ ಅರಣ್ಯ ಭವನದಿಂದ ಅರಮನೆಗೆ ಬೀಳ್ಕೊಡಲಾಗುತ್ತದೆ ಎಂದು ಡಿಸಿಎಫ್ ಪ್ರಭುಗೌಡ ಮಾಹಿತಿ ನೀಡಿದರು.

ವರಮಹಾಲಕ್ಷ್ಮಿ ಹಬ್ಬ: ದಸರಾ ಗಜಪಡೆ ನೋಡಲು ಬಂದ ಸಾರ್ವಜನಿಕರು

ದಸರಾ ಜಂಬೂಸವಾರಿಗೆಂದು ಕಾಡಿನಿಂದ ನಾಡಿಗೆ ಬಂದಿರುವ ಗಜಪಡೆ ಆನೆಗಳನ್ನ ನೋಡಲು ವರ ಮಹಾಲಕ್ಷ್ಮಿ ಹಬ್ಬದಂದೂ  ಆನೆಗಳ ನೋಡಲಿಕ್ಕೆ ನಗರದ ಅರಣ್ಯ ಭವನದ ಬಳಿ ಸಾರ್ವಜನಿಕರು ಆಗಮಿಸಿದ್ದರು.  ನಗರದ ಅರಣ್ಯ ಭವನದ ಆವರಣದಲ್ಲಿ ಗಜಪಡೆ ಬೀಡು ಬಿಟ್ಟಿದ್ದು, ವರಮಹಾಲಕ್ಷ್ಮಿ ಹಬ್ಬದಂದೂ  ಆನೆಗಳ ನೋಡಲು ಸಾರ್ವಜನಿಕರು ಲಗ್ಗೆ ಇಟ್ಟಿದ್ದಾರೆ. ಅಶೋಕ್‌ ಪುರಂ, ಕುವೆಂಪುನಗರ, ಕೆ.ಜಿ ಕೊಪ್ಪಲ್ ಸೇರಿದಂತೆ ಸುತ್ತಮುತ್ತಲ ಬಡಾವಣೆ ಜನರು ಬಂದು ಆನೆಗಳನ್ನ ವೀಕ್ಷಣೆ ಮಾಡುತ್ತಿದ್ದಾರೆ.

ಸಾರ್ವಜನಿಕರನ್ನ ಆನೆಗಳ ಸನಿಹಕ್ಕೆ ಬಿಡದೆ ದೂರಲ್ಲೇ ನಿಂತು ನೋಡುವಂತೆ ಅರಣ್ಯ ಇಲಾಖೆ ಸಿಬ್ಬಂದಿ ಬ್ಯಾರಿಕೇಡ್ ವ್ಯವಸ್ಥೆ ಮಾಡಿದ್ದಾರೆ.

Key words: Mysore dasara,  elephants, Insurance, DCF, Prabhugowda

The post ದಸರಾ ಜಂಬೂಸವಾರಿ ಎಲ್ಲಾ ಆನೆಗಳು, ಕಾವಾಡಿ, ಮಾವುತರಿಗೆ ವಿಮೆ- ಡಿಸಿಎಫ್ ಪ್ರಭುಗೌಡ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ವಸೂಲಿಗಿಳಿದಿರುವ ಯತೀಂದ್ರಗೆ ತರಬೇತಿ ಕೊಡುವ ಮಾಸ್ಟರ್ ನಮ್ಮವನೇ- ಶಾಸಕ ಯತ್ನಾಳ್

ವಿಜಯಪುರ,ಫೆಬ್ರವರಿ,16,2026 (www.justkannada.in):  ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ವಸೂಲಿಗಿಳಿದಿದ್ದು ಯತೀಂದ್ರಗೆ ತರಬೇತಿ...

ರಾಜ್ಯಕ್ಕೆ ಪ್ರತ್ಯೇಕ ಎಂಎಸ್‌ ಎಂಇ ನೀತಿ ಮತ್ತು ಸಣ್ಣ, ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ಬಜೆಟ್ ನಲ್ಲಿ ಆದ್ಯತೆ ನೀಡಿ- FKCCI ಅಧ್ಯಕ್ಷೆ ಉಮಾ ರೆಡ್ಡಿ

ಬೆಂಗಳೂರು,ಫೆಬ್ರವರಿ,16,2026 (www.justkannada.in): ರಾಜ್ಯಕ್ಕೆ ಪ್ರತ್ಯೇಕ ಎಂಎಸ್‌ ಎಂಇ ನೀತಿ ಮತ್ತು ವಿಶೇಷ...

ಕಾಂಗ್ರೆಸ್ ಶಾಸಕನ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್

ಬೆಂಗಳೂರು, ಫೆಬ್ರವರಿ ,16,2026 (www.justkannada.in): ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಶಾಸಕ...

17 ಬಾರಿ ಬಜೆಟ್ ಮಂಡಿಸಿದ ಸಿಎಂಗೆ ಈಗ ಪ್ರವಾಸ ಬೇಕಾ? ಮಾಜಿ ಶಾಸಕ ಸಾ.ರಾ ಮಹೇಶ್ ಕಿಡಿ

ಮೈಸೂರು,ಫೆಬ್ರವರಿ,16,2026 (www.justkannada.in): ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆಯಾಗುತ್ತಿರುವ ವೇಳೆಯೇ ಕಾಂಗ್ರೆಸ್...