ಬೆಂಗಳೂರು,ಫೆಬ್ರವರಿ,10,2026 (www.justkannada.in): ದೆಹಲಿಗೆ ಹೋದ ಮೇಲೆ ಎಲ್ಲರನ್ನೂ ಭೇಟಿಯಾಗುತ್ತೇನೆ. ಯಾರ್ಯಾರು ಸಿಗುತ್ತಾರೋ ಎಲ್ಲರನ್ನೂ ಕೂಡ ಭೇಟಿ ಮಾಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಇಂದು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳುತ್ತಿದ್ದು ಇದಕ್ಕೂ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಧಿವೇಶನ ಸಹ ನಡೆಯುತ್ತಿದೆ. ಫ್ರಿ ಇದ್ದರೆ ಖಂಡಿತ ಎಲ್ಲರನ್ನೂ ಭೇಟಿ ಮಾಡುತ್ತೇನೆ ಪ್ರತಿ ದಿನ ಪ್ರತಿ ಕ್ಷಣವೂ ನನಗೆ ಒಳ್ಳೆಯದೇ. ಸಂತೋಷ, ಕಷ್ಟ ಯಾವುದೂ ಏನು ಇಲ್ಲ. ಜನರ ಸಮಸ್ಯೆ ಬಗೆಹರಿಸಬೇಕಾದರೇ ಆನೇಕ ತೊಂದರೆ, ತೊಡಕು ಇರುತ್ತೆ ಟೀಕೆಗಳು ಬರುತ್ತಲೇ ಇರುತ್ತೆ ಟೀಕೆಗಳನ್ನ ಎದುರಿಸಬೇಕು ಎಂದರು.
ಇಂದು ಸಂಜೆ ಎಐಸಿಸಿ ನಾಯಕರ ಜೊತೆ ಮೀಟಿಂಗ್ ಇದೆ. ವಿವಿಧ ರಾಜ್ಯಗಳ ಚುನಾವಣೆ ಸಂಬಂಧ ರಾಜಕೀಯ ಸಭೆ ಇದೆ. ಸಭೆಗೆ ನನ್ನನ್ನೂ ಕರೆದಿದ್ದಾರೆ. ಚುನಾವಣೆ ಸಹ ಘೋಷಣೆ ಆಗುತ್ತದೆ. ಕೇರಳಕ್ಕೂ ಹೋಗಿದ್ದೆ. ಈಗ ಅಸ್ಸಾಂಗೂ ಹೋಗಬೇಕು ಬಜೆಟ್ ಸಭೆ ಇತ್ತು ಸಿಎಂಗೆ ಮನವಿ ಮಾಡಿದ್ದೇನೆ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
Key words: Delhi ,tour, DCM, DK Shivakumar
The post ದೆಹಲಿಗೆ ಹೋದ ಮೇಲೆ ಎಲ್ಲರನ್ನೂ ಭೇಟಿಯಾಗ್ತೇನೆ- ಡಿಸಿಎಂ ಡಿಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




