ಬೆಂಗಳೂರು,ಜೂನ್,24,2025 (www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ಸರ್ಕಾರದ ಬಳಿ ಹಣವೇ ಇಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸರ್ಕಾರದಲ್ಲಿ ವೇತನ ನೀಡಲು ಹಣವಿಲ್ಲ. ಕರ್ನಟಕದಲ್ಲಿ ಸರ್ಕಾರ ದಿವಾಳಿಯಾಗಿದೆ. ನಮ್ಮ ಬಳಿ ಹಣವಿಲ್ಲ ಎಂದು ಪರಮೇಶ್ವರ್ ಹೇಳುತ್ತಾರೆ. ಸರಕಾರಕ್ಕೆ ಮನೆ ಕೊಡುವ ಯೋಗ್ಯತೆ ಇಲ್ಲ. ಇನ್ನು ದೆಹಲಿ ಎಟಿಎಂ ಆಗಿ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಕೆಲಸ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಹೋರಾಟ ಮಾಡಿದ್ರೆ ಪ್ರಯೋಜನ ಆಗುತ್ತಿಲ್ಲ ಇದು ದಪ್ಪಚರ್ಮದ ಸರ್ಕಾರ. ಸಿಎಂ ಸಿದ್ದರಾಮಯ್ಯ ಬದಲಾಗಿದ್ದಾರೆ . ಕಾಂಗ್ರೆಸ್ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ . ಸಿದ್ದರಾಮಯ್ಯ ಇಮೇಜ್ ಅ ಮಟ್ಟಕ್ಕೆ ಹೋಗಿದೆ ಎಂದರು.
ವಸತಿ ಇಲಾಖೆಯಡಿ ಮನೆ ಹಂಚಿಕೆಯಲ್ಲಿ ಅಕ್ರಮವಾಗಿದೆ. ತಕ್ಷಣ ಸಚಿವ ಜಮೀರ್ ರಾಜೀನಾಮೆ ನೀಡಬೇಕು. ಪ್ರಕರಣ ಕುರಿತು ತನಿಖೆಯಾಗಬೇಕು ಎಂದು ಶೋಭಾ ಕರಂದ್ಲಾಜೆ ಆಗ್ರಹಿಸಿದರು.
Key words: CM, DCM, Delhi, ATM, Union Minister, Shobha Karandlaje
The post ದೆಹಲಿ ಎಟಿಎಂ ಆಗಿ ಸಿಎಂ,ಡಿಸಿಎಂ ಕೆಲಸ: ಸರ್ಕಾರದಲ್ಲಿ ಹಣವೇ ಇಲ್ಲ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.