ಹಾಸನ,ಆಗಸ್ಟ್,16,2025 (www.justkannada.in): ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕನನ್ನು ಮಂಪರುಪರೀಕ್ಷೆಗೊಳಪಡಿಸಿ ಸುಳ್ಳು ಹೇಳಿದ್ದರೆ ಕ್ರಮ ಆಗಲಿ ಎಂದು ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಆಗ್ರಹಿಸಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಶಾಸಕ ಎಸ್ ಆರ್ ವಿಶ್ವನಾಥ್, ಧರ್ಮಸ್ಥಳದ ಬುಡಕ್ಕೆ ಕೈ ಹಾಕುವ ಕೆಲಸ ಮಾಡಿದ್ದಾರೆ. ಧರ್ಮಸ್ಥಳದ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ. ಸರ್ಕಾರ ಕೊಡುವ ಶಿಕ್ಷೆ ಬೇರೆ ದೇವರು ಕೊಡುವ ಶಿಕ್ಷೆ ಬೇರೆ. ಅಪಪ್ರಚಾರ ಮಾಡುವವರ ವಿರುದ್ದ ಶಿಕ್ಷೆಯಾಗಲಿ ಎಂದರು.
ಅನಾಮಿಕನ ಮಾತು ಕೇಳಿದರೆ ಇಡೀ ಧರ್ಮಸ್ಥಳ ಅಗೆಯಬೇಕಾಗುತ್ತದೆ. ಅನಾಮಿಕನ ಮಾತು ಕೇಳಿ ಸರ್ಕಾರ ತಪ್ಪುಮಾಡಿದೆ. ಅಧಿವೇಶನದಲ್ಲಿ ಸೋಮವಾರ ತನಿಖಾ ವರದಿ ಮಂಡಿಸಬೇಕು ನಾಳೆಯಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಜನರು ದೇವರ ಮೇಲೆವಿಶ್ವಾಸ ಕಳೆದುಕೊಳ್ಳಬಾರದು ಎಂದು ಎಸ್ ಆರ್ ವಿಶ್ವನಾಥ್ ಹೇಳಿದರು.
Key words: Dharmasthala case, BJP, MLA, SR Vishwanath
The post ಧರ್ಮಸ್ಥಳ ಕೇಸ್ : ಅನಾಮಿಕನ ಮಂಪರು ಪರೀಕ್ಷೆಗೆ ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.