ಮೈಸೂರು,ಆಗಸ್ಟ್,15,2025 (www.justkannada.in): ಧರ್ಮಸ್ಥಳ ಪ್ರಕರಣ ತನಿಖೆ ನಡೆಸುತ್ತಿರುವ ಎಸ್ಐಟಿ ಈ ಕುರಿತು ಮಧ್ಯಂತರ ವರದಿ ನೀಡಲಿ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗ್ರಹಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಯದುವೀರ್, ಈಗ ಧರ್ಮಸ್ಥಳ ಪ್ರಕರಣಗಳ ಕುರಿತು ತನಿಖೆ ನಡೆಯುತ್ತಿದೆ. ಈ ವೇಳೆ ಒಬ್ಬ ಜನಪ್ರತಿನಿಧಿಯಾಗಿ ಏನೇನೋ ಹೇಳಿಕೆ ಕೊಡುವುದು ಸೂಕ್ತ ಅಲ್ಲ. ಇದುವರೆಗೂ ಏನೆಲ್ಲಾ ತನಿಖೆ ನಡೆದಿದೆ ಅದರ ಮಧ್ಯಂತರ ವರದಿ ಬಿಡುಗಡೆ ಮಾಡಬೇಕು.. ಅದು ಜನರಿಗೆ ಗೊತ್ತಾಗಬೇಕು
ಅದನ್ನ ಹೊರತುಪಡಿಸಿ ಅಪಪ್ರಚಾರ ಮಾಡುವವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಜಾಲತಾಣಗಳು, ಯೂಟ್ಯೂಬ್ ಗಳ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಸಂಸದ ಯದುವೀರ್ ಒಡೆಯರ್ ಒತ್ತಾಯಿಸಿದರು.
Key words: Dharmasthala case, SIT, interim report, MP, Yaduveer
The post ಧರ್ಮಸ್ಥಳ ಕೇಸ್: SIT ಮಧ್ಯಂತರ ವರದಿ ನೀಡಲಿ- ಸಂಸದ ಯದುವೀರ್ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




