ಬೆಂಗಳೂರು,ಜುಲೈ,28,2025 (www.justkannada.in): ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಬೇರೆಯವರನ್ನ ಹೋಲಿಕೆ ಮಾಡಲು ಆಗಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಗಿಂತ ಸಿಎಂ ಸಿದ್ದರಾಮಯ್ಯ ಅಭಿವೃದ್ದಿ ಕಾರ್ಯಗಳನ್ನ ಮಾಡಿದ್ದಾರೆ ಎಂದು ಹೋಲಿಕೆ ಮಾಡಿದ್ದ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯಗೆ ಪರೋಕ್ಷ ಟಾಂಗ್ ಕೊಟ್ಟ ಸಚಿವ ಹೆಚ್.ಸಿ ಮಹದೇವಪ್ಪ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಎಲ್ಲರ ಗೌರವ ಪ್ರೀತಿಗೆ ಪಾತ್ರರಾದವರು ರಾಜ್ಯದ ಹಿತ ಕಾಪಾಡುವಲ್ಲಿ ನಾಲ್ವಡಿ ಕೃಷ್ಣರಾಜರು ಸಾಕಷ್ಟು ಶ್ರಮಿಸಿದ್ದಾರೆ. ಶ್ರೇಷ್ಟ ಆಡಳಿತ ನೀಡಿದ್ದಾರೆ.
ಬೇರೆಯವರನ್ನ ನಾಲ್ವಡಿ ಅವರಿಗೆ ಹೋಲಿಕೆ ಮಾಡಲು ಆಗಲ್ಲ ಒಡೆಯರ್ ಆಡಳಿತ ನಿಲುವು ನಡೆ ಬದ್ದತೆ ನಮ್ಮೆಲ್ಲರಿಗೆ ಸ್ಪೂರ್ತಿ. ಸಾಮಾಜಿಕ ನ್ಯಾಯ ಆನೇಕ ವಿಷಯಗಳಲ್ಲಿ ಅವರಿಗೆ ಬದ್ದತೆ ಇತ್ತು ಎಂದು ಸಚಿವ ಹೆಚ್ ಸಿ ಮಹದೇವಪ್ಪ ತಿಳಿಸಿದರು.
Key words: compare, Nalvadi Krishnaraja wodeyar, Minister, H.C. Mahadevappa
The post ನಾಲ್ವಡಿ ಕೃಷ್ಣರಾಜರಿಗೆ ಬೇರೆಯವರನ್ನ ಹೋಲಿಕೆ ಮಾಡಲು ಆಗಲ್ಲ- ಸಚಿವ ಹೆಚ್.ಸಿ ಮಹದೇವಪ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.