ಮೈಸೂರು,ಜುಲೈ,31, 2025 (www.justkannada.in):ನಾಳೆಯಿಂದ ಮೈಸೂರು ಮೃಗಾಲಯದ ಪ್ರವೇಶ ದರ ಶೇ 20 ರಷ್ಟು ಹೆಚ್ಚಳವಾಗಲಿದೆ.
ನಾಲ್ಕು ವರ್ಷಗಳ ನಂತರ ಮೃಗಾಲಯ ಆಡಳಿತ ಮಂಡಳಿ ದರ ಪರಿಷ್ಕರಣೆ ಮಾಡಿದ್ದು, ವಯಸ್ಕರಿಗೆ 100 ರೂ ಇದ್ದ ಟಿಕೆಟ್ ದರ 120 ರೂ, ಮಕ್ಕಳಿಗೆ 50 ರೂ ದರ 60 ರೂ.ಗೆ ಏರಿಕೆಯಾಗಲಿದೆ. ಮೃಗಾಲಯ, ಕಾರಂಜಿ ಕಾಂಬೋ 150 ರೂ. ಮಕ್ಕಳಿಗೆ 80 ರೂ ದರ ನಿಗದಿ ಮಾಡಲಾಗಿದೆ.
ಈ ಕುರಿತು ಮಾತನಾಡಿದ ಮೃಗಾಲಯ ಕಾರ್ಯ ನಿರ್ವಾಹಕ ಅಧಿಕಾರಿ ರಂಗಸ್ವಾಮಿ, ಒಂದು ದಿನಕ್ಕೆ ಮೃಗಾಲಯ ನಿರ್ವಹಣೆಗೆ 9 ಲಕ್ಷ ಹಣ ಖರ್ಚಾಗಲಿದ್ದು, ಮೃಗಾಲಯ ಪ್ರಾಣಿಗಳ ಖರ್ಚು ವೆಚ್ಚ ತುಟ್ಟಿ ಹಿನ್ನಲೆ, ನಾಲ್ಕು ವರ್ಷಗಳ ಬಳಿಕ ಪ್ರವೇಶ ದರದಲ್ಲಿ ಏರಿಕೆ ಮಾಡಲಾಗಿದೆ. ಇತ್ತೀಚಿನ ಜರ್ಮನ್, ಆಫ್ರಿಕಾದಿಂದ ತಂದಿರುವ ಹಂಟರ್ ಗೊರಿಲ್ಲ, ಹಂಡರ್ ಚೀತಾ, ಜಾಗ್ವಾರ್,ಪ್ರಾಣಿಗಳ ಸಾಕುವ ವೆಚ್ಚ ದುಬಾರಿಯಾದ ಹಿನ್ನಲೆ ಅನಿವಾರ್ಯವಾಗಿ ದರ ಏರಿಕೆ ಮಾಡಲಾಗುತ್ತಿದೆ. ಪ್ರವಾಸಿಗರು ದರ ಏರಿಕೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮೈಸೂರು ಮೃಗಾಲಯಕ್ಕೆ ಬಂದಿವೆ ಹೊಸ ಅತಿಥಿ.
ಆಫ್ರಿಕನ್ ಹಂಟರ್ ಚೀತಾ, ಜಾಗ್ವಾರ್ ಜರ್ಮನ್ ಗೊರಿಲ್ಲ ಸೇರಿದಂತೆ ಹಲವು ಪ್ರಾಣಿಗಳ ವಿನಿಮಯ ಪದ್ದತಿಯಲ್ಲಿ ಮೃಗಾಲಯಕ್ಕೆ ಬಂದ ಹೊಸ ಪ್ರಾಣಿಗಳಾಗಿವೆ.
Key words: Mysore Zoo, admission fee , increase , 20%
The post ನಾಳೆಯಿಂದ ಮೈಸೂರು ಮೃಗಾಲಯದ ಪ್ರವೇಶ ದರ ಶೇ 20 ರಷ್ಟು ಹೆಚ್ಚಳ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.