27
March, 2026

A News 365Times Venture

27
Friday
March, 2026

A News 365Times Venture

ನಾಳೆಯಿಂದ IPL:  ಅಧಿಕಾರಿಗಳ ಜೊತೆ ಸಿಎಸ್ ಸುದೀರ್ಘ ಸಭೆ, ಸಲಹೆ ಸೂಚನೆ

Date:

ಬೆಂಗಳೂರು,ಮಾರ್ಚ್,27,2026 (www.justkannada.in): ನಾಳೆಯಿಂದ IPL ಪಂದ್ಯಾವಳಿಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಂಬಂಧಪಟ್ಟ ಅಧಿಕಾರಿಗಳು ಮತ್ತು KSCA ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಸುರಕ್ಷತೆ ಕುರಿತಾಗಿ ಸುದೀರ್ಘ ಸಭೆ ನಡೆಸಿ ಸಲಹೆ, ಸೂಚನೆಗಳನ್ನು ನೀಡಿದರು.

ಕ್ರಿಕೆಟ್ ಪ್ರೇಮಿಗಳ ಸುರಕ್ಷತೆಗೆ ಕ್ರೀಡಾಂಗಣದ ಒಳಗೆ ಮತ್ತು ಕ್ರೀಡಾಂಗಣದ ಸುತ್ತ ರೂಪಿಸಿರುವ ಭದ್ರತಾ ವ್ಯವಸ್ಥೆ, ನಗರದ ಸಂಚಾರ ವ್ಯವಸ್ಥೆಯಲ್ಲಿ ಮಾಡಿಕೊಳ್ಳಲಾಗಿರುವ ಬದಲಾವಣೆಗಳು, ಪಾರ್ಕಿಂಗ್ ವ್ಯವಸ್ಥೆ, ಕ್ರೀಡಾಂಗಣದ ಒಳಗೆ ಕುಡಿಯುವ ನೀರು ಸೇರಿದಂತೆ ಇತರೆ ಅತ್ಯಾವಶ್ಯಕ ಸಂಗತಿಗಳ ಕುರಿತಾಗಿ ಮಾಹಿತಿ ಪಡೆದುಕೊಂಡರು.

ಮೆಟ್ರೋ ರೈಲಿನ ಮೇಲೆ ಬೀಳುವ ಪ್ರಯಾಣಿಕರ ಸಾಂದ್ರತೆ, ಮೆಟ್ರೋ ಸಂಚರಿಸುವ ವೇಳಾಪಟ್ಟಿ, ಮೆಟ್ರೋ ನಿಲ್ದಾಣಗಳಲ್ಲಿ ಮಾಡಿಕೊಳ್ಳಲಾಗಿರುವ ಹೆಚ್ಚುವರಿ ಭದ್ರತೆ, ಸುರಕ್ಷತೆ ಕುರಿತಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದು ಸಣ್ಣ ಅಹಿತಕರ ಘಟನೆಗೂ ಅವಕಾಶ ಆಗದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಹಲವು ಸೂಚನೆಗಳನ್ನು ನೀಡಿದರು.

ಪಂದ್ಯಾವಳಿ ಆಯೋಜನೆಗೆ ಸರ್ಕಾರ ವಿಧಿಸಿರುವ ಷರತ್ತುಗಳು ಮತ್ತು ಎಚ್ಚರಿಕೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಭೆಯಲ್ಲಿ ಸೂಚನೆ ನೀಡಿದರು.

ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಂಸ್ಥೆಗಳು ಹೈ ಅಲರ್ಟ್ ಆಗಿರಬೇಕು. ಆಯಾ ಕ್ಷಣದ ಮಾಹಿತಿಗಳನ್ನು ಮೇಲಿನ ಅಧಿಕಾರಿಗಳಿಗೆ ನಿಯಮಿತವಾಗಿ ವಿನಿಮಯ ಮಾಡಿಕೊಳ್ಳಬೇಕು ಎನ್ನುವ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ KSCA ಸಂಸ್ಥೆಯ ಆಡಳಿತ ಮಂಡಳಿ, ಪದಾಧಿಕಾರಿಗಳು, RCB ಪದಾಧಿಕಾರಿಗಳು, ನಗರ ಪೊಲೀಸ್ ಆಯುಕ್ತರು, GBA ಅಯುಕ್ತರು, ಮೆಟ್ರೋ MD ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.

Key words: IPL, tomorrow,  meeting, CS, advisory, notice

The post ನಾಳೆಯಿಂದ IPL:  ಅಧಿಕಾರಿಗಳ ಜೊತೆ ಸಿಎಸ್ ಸುದೀರ್ಘ ಸಭೆ, ಸಲಹೆ ಸೂಚನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಉರುಳಿಗೆ ಸಿಲುಕಿ ಹುಲಿ ಬಲಿ

ಮೈಸೂರು,ಮಾರ್ಚ್,27,2026 (www.justkannada.in): ನಾಗರಹೊಳೆ ಹುಲಿ ಮೀಸಲು ಅರಣ್ಯದ ಮೆಟ್ಟಿಕುಪ್ಪೆ ಶ್ರೇಣಿಯ ಬಳಿ...

ಯುಪಿಎಸ್ ಪರೀಕ್ಷೆಗೆ ಕಠಿಣ ಪರಿಶ್ರಮ, ಸ್ಥಿರತೆ ಮತ್ತು ಸ್ಮಾರ್ಟ್ ಓದು ಅಗತ್ಯ- ಕಿರಣ್ ಕಾಮ್ಟೆ

ಮೈಸೂರು,ಮಾರ್ಚ್,27,2026 (www.justkannada.in):  ಯುಪಿಎಸ್ ಪರೀಕ್ಷೆ ಭೇದಿಸುವುದು ಸುಲಭವಲ್ಲ. ಅದಕ್ಕೆ ಕಠಿಣ ಪರಿಶ್ರಮ,...

ಅತಿವೃಷ್ಠಿ, ಹುಲಿ ದಾಳಿಯಾದ ಕುಟುಂಬಕ್ಕೆ ಪರಿಹಾರ ನೀಡಲಿಲ್ಲ, ಅದೇ ಕೇರಳಕ್ಕೆ 10 ಕೋಟಿ ಪರಿಹಾರ-ನಿಖಿಲ್ ಕುಮಾರಸ್ವಾಮಿ ಕಿಡಿ

ಮೈಸೂರು,ಮಾರ್ಚ್,27,2026 (www.justkannada.in): ರಾಜ್ಯದಲ್ಲಿ ಅತಿವೃಷ್ಠಿಯಾದಾಗ ಪರಿಹಾರ ನೀಡಲಿಲ್ಲ,  ಹುಲಿ ದಾಳಿಯಾದ ಕುಟುಂಬಕ್ಕೆ...

ಸಾದಿಕ್ ಪೈಲ್ವಾನ್ ಹುಟ್ಟು ಕಾಂಗ್ರೆಸ್ಸಿಗ: ಕಣದಿಂದ ಹಿಂದೆ ಸರಿದಿದ್ದಾರೆ-ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಮಾರ್ಚ್,27,2026 (www.justkannada.in): ದಾವಣಗೆರೆ ದಕ್ಷಿಣ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ದ ಬಂಡಾಯವೆದ್ದಿದ್ದ...