7
March, 2026

A News 365Times Venture

7
Saturday
March, 2026

A News 365Times Venture

ನೋಂದಣಿ ಮಾಡಿರುವ ರೈತರ ಜೋಳ ಖರೀದಿಸಿ- ಸಚಿವ ಕೆಎಚ್ ಮುನಿಯಪ್ಪರಿಗೆ ಮನವಿ

Date:

ಬೆಂಗಳೂರು. ಜೂನ್, 3,2025 (www.justkannada.in):  ಇಂದು ಆಹಾರ ಭವನದಲ್ಲಿ ರಾಯಚೂರು ಜಿಲ್ಲೆಯ ರೈತ ಮುಖಂಡರ ನಿಯೋಗದೊಂದಿಗೆ  ಆಹಾರ ಸಚಿವ ಕೆಹೆಚ್. ಮುನಿಯಪ್ಪ ಅವರು   ಸಭೆಯನ್ನು ನಡೆಸಿದರು.

ಬಸವಣಗೌಡ ಬಾದರ್ಲಿ ರವರ ನೇತೃತ್ವದಲ್ಲಿ ರೈತರ ನಿಯೋಗವು ಇಂದು  ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಅವರನ್ನ  ಭೇಟಿಯಾಗಿ ಚರ್ಚಿಸಿತು.

ಮುಂಗಾರು ಮತ್ತು ಹಿಂಗಾರಿನಲ್ಲಿ ರೈತರು  ಹೆಚ್ಚಾಗಿ ಜೋಳ ಬೆಳೆಯುವ ಕಾರಣದಿಂದ ಸರ್ಕಾರ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದರೆ ರೈತರಿಗೆ ಅನುಕೂಲಕರವಾಗುತ್ತದೆ  ಎಂದು ಸಭೆಯಲ್ಲಿ ಮುಖಂಡರು ಪ್ರಸ್ಥಾಪಿಸಿದರು.

ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಪ್ರಕ್ರಿಯೆಗೆ ಈಗಾಗಲೇ ಕೇಂದ್ರ ಸರ್ಕಾರದ ಗರಿಷ್ಠ ಮಿತಿಯನ್ನೂ ಮೀರಿದ್ದು ಇನ್ನೂ  ಎಂಎಸ್ ಪಿ ಯೋಜನೆಯಡಿ ಸರ್ಕಾರಕ್ಕೆ ನೀಡಲು  ನೋಂದಣಿ ಮಾಡಿದ ರೈತರ ಹೆಚ್ವುವರಿ ಜೋಳವನ್ನು  ಖರೀದಿಸಲು  ಮುಂದಿನ ಸಚಿವ ಸಂಪುಟದ ಉಪ ಸಮಿತಿ ಸಭೆಯಲ್ಲಿ ಈ ಕುರಿತು  ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು  ಎಂದು ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ನ ಶಾಸಕ ಬಸವನಗೌಡ ಬಾದರ್ಲಿ, ಸರ್ಕಾರದ ಕಾರ್ಯದರ್ಶಿ ಮನೋಜ್ ಜೈನ್, ಆಯುಕ್ತರಾದ ವಾಸಿ ರೆಡ್ಡಿ  ವಿಜಯ ಜೋತ್ನಾ, ನಿಗಮ ನಿರ್ದೇಶಕರಾದ ಚಂದ್ರಕಾಂತ್, ಹಾಗೂ ರೈತ ಮುಖಂಡರಾದ ಹನುಮನಗೌಡ, ರಾಜೇಶ್ ಪಾಟೇಲ್, ಮಲ್ಲೇಶ್ ಗೌಡ, ಉಪಸ್ಥಿತರಿದ್ದರು.vtu

Key words: Request, Minister,  KH Muniyappa, purchase, corn , registered farmers

The post ನೋಂದಣಿ ಮಾಡಿರುವ ರೈತರ ಜೋಳ ಖರೀದಿಸಿ- ಸಚಿವ ಕೆಎಚ್ ಮುನಿಯಪ್ಪರಿಗೆ ಮನವಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

LPG ಸಿಲಿಂಡರ್ ದರ ಏರಿಕೆ: ನೆಲಕ್ಕೆ ಬಿದ್ದವನಿಗೆ ಒದ್ದಂತಾಗಿದೆ-ಸಿಎಂ ಸಿದ್ದರಾಮಯ್ಯ ಕಿಡಿ

ಬೆಂಗಳೂರು,ಮಾರ್ಚ್,7,2026 (www.justkannada.in): ಭಾರತದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಹಣದುಬ್ಬರ...

ನಾಳೆ ದೆಹಲಿಗೆ ಡಿಸಿಎಂ ಡಿಕೆ ಶಿವಕುಮಾರ್..!

ಬೆಂಗಳೂರು,ಮಾರ್ಚ್,7,2026 (www.justkannada.in):  ಸಿಎಂ ಸಿದ್ದರಾಮಯ್ಯ ನಿನ್ನೆ 2026-27ನೇ ಸಾಲಿನ ರಾಜ್ಯ ಬಜೆಟ್...

ಮಧ್ಯಪ್ರಾಚ್ಯದಲ್ಲಿ ಇರಾನ್ ಅಧಿಪತ್ಯ ಸ್ಥಾಪಿಸಲು ಬಿಡುವುದಿಲ್ಲ-ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್,ಮಾರ್ಚ್,7,2026 (www.justkannada.in): ಇರಾನ್ ಮೇಲೆ ಇಸ್ರೇಲ್, ಅಮೇರಿಕಾ ಯುದ್ದ ಸಾರಿದ್ದು ಪರಸ್ಪರ...

ಪ್ರಕೃತಿ ಮಡಿಲಲ್ಲಿ ಚಿಕಿತ್ಸೆ:  AIISH ನಲ್ಲಿ ಮಕ್ಕಳ ಕನಸುಗಳಿಗೆ ಹೂವಿನ ದಾರಿ.

  ಮೈಸೂರು: ಮೈಸೂರಿನ ಸುಂದರ ಬೆಳಿಗ್ಗೆಯಲ್ಲಿ, All India Institute of Speech...