ಬೆಂಗಳೂರು,ಜುಲೈ,7,2025 (www.justkannada.in): 4 ತಿಂಗಳ ಪಡಿತರ ಸಾಗಾಣೆ ವೆಚ್ಚವನ್ನು ಬಾಕಿ ಉಳಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಪಡಿತರ ಸಾಗಾಟ ಲಾರಿ ಮಾಲೀಕರು ಮತ್ತು ಚಾಲಕರು ನಡೆಸಿದ ಮುಷ್ಕರಕ್ಕೆ ಸರ್ಕಾರ ಮಣಿದಿದ್ದು ಹಣ ಬಿಡುಗಡೆಗೆ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಅನ್ನ ಭಾಗ್ಯ ಅಕ್ಕಿಯನ್ನು ಸಾಗಿಸಿದ ಲಾರಿ ಮಾಲೀಕರಿಗೆ ಸಾಗಣೆ ವೆಚ್ಚದ ಬಾಕಿ ಹಣ ನೀಡದ ಕಾರಣಕ್ಕೆ ಲಾರಿ ಮಾಲೀಕರಿಂದ ಸರ್ಕಾರದ ವಿರುದ್ಧ ಅನಿರ್ದಿಷ್ಟಾವಧಿಗೆ ಮುಷ್ಕರ ಹೂಡಿದ್ದರು. ಇದೀಗ ಲಾರಿಮಾಲೀಕರ ಮುಷ್ಕರಕ್ಕೆ ಮಣಿದು 244 ಕೋಟಿ ರೂಪಾಯಿ ಬಾಡಿಗೆ ಹಣ ಬಿಡುಗಡೆ ಮಾಡಿ ಆದೇಶಿಸಲಾಗಿದೆ. ಫೆಬ್ರವರಿಯಿಂದ ಮೇ ತಿಂಗಳವರೆಗಿನ ಬಾಕಿ ಹಣ ಬಿಡುಗಡೆ ಮಾಡಿದೆ.
ಕಳೆದ ಫೆಬ್ರುವರಿಯಿಂದ ಹಣವನ್ನು ಸರ್ಕಾರ ಪಾವತಿ ಮಾಡಿಲ್ಲ. ಇದರಿಂದ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಾಗಿದೆ. ಲಾರಿ ಮಾಲೀಕರು ತಮ್ಮ ಸಾಲದ ಕಂತನ್ನು ಕಟ್ಟಲು ಆಗುತ್ತಿಲ್ಲ. ಹೀಗಾಗಿ ನಮ್ಮ ವಾಹನಗಳನ್ನು ಹಣಕಾಸು ಕಂಪನಿಗಳು ಸೀಜ್ ಮಾಡಿಕೊಳ್ಳುತ್ತಿವೆ. ಅಂದಾಜು 4 ಸಾವಿರ ಲಾರಿಗಳ ಮೇಲೆ ಈ ಕೆಟ್ಟ ಪರಿಣಾಮ ಬೀಳಲಿದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದರು.
Key words: Government, ration truck, owners, strike, release, funds
The post ಪಡಿತರ ಸಾಗಾಟ ಲಾರಿ ಮಾಲೀಕರ ಮುಷ್ಕರಕ್ಕೆ ಮಣಿದ ಸರ್ಕಾರ: ಬಾಕಿ ಹಣ ಬಿಡುಗಡೆಗೆ ಆದೇಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.