13
March, 2026

A News 365Times Venture

13
Friday
March, 2026

A News 365Times Venture

ಪತ್ರಿಕೆಗಳು ಇನ್ನೂ  ವಿಶ್ವಾಸಾರ್ಹತೆ ಉಳಿಸಿಕೊಂಡಿವೆ. ನಾನು ಟಿವಿ ನೋಡುವುದು ಕಡಿಮೆ : ಸಿಎಂ ಸಿದ್ದರಾಮಯ್ಯ.

Date:

 

ಬೆಂಗಳೂರು ಮಾ 13: ನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು. ಸರ್ಕಾರ ಕಟ್ಟ ಕಡೆಯ ಮನುಷ್ಯರ ಪರವಾಗಿ ಇದೆಯಾ ಎನ್ನುವ ಬಗ್ಗೆ ಗಮನ ಹರಿಸಿ, ವೃತ್ತಿಧರ್ಮವನ್ನು ಬಹಳ ಮುಖ್ಯವಾಗಿ  ಕಾಪಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

ಕರ್ನಾಟಕ ಮಾಧ್ಯಮ‌ ಅಕಾಡೆಮಿ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಯ್ಕೆಯಾದ ಪತ್ರಕರ್ತರಿಗೆ “2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು” ವಿತರಿಸಿ, ಸನ್ಮಾನಿಸಿ ಮಾತನಾಡಿದರು.

ಪತ್ರಕರ್ತರೂ ಆಗಿದ್ದ ಮಹಾತ್ಮಗಾಂಧಿಯವರ ಮಾತಿನಂತೆ ಸರ್ವೋದಯ, ಅಂತ್ಯೋದಯದ ಪರವಾಗಿ ಪತ್ರಕರ್ತರು ಇರಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಇನ್ನೂ ಅಸಮಾನತೆ ಕಾಣುತ್ತಿದ್ದೇವೆ. ಅಂಬೇಡ್ಕರ್ ಅವರೂ ಪತ್ರಕರ್ತರಾಗಿದ್ದರು.ಈ ಅಸಮಾನತೆ ಹೋಗದೆ ಹೋದರೆ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ ಎನ್ನುವ ಮಾತನ್ನು ಅಂಬೇಡ್ಕರ್ ಹೇಳಿದ್ದನ್ನು ಮುಖ್ಯಮಂತ್ರಿಗಳು ಉಲ್ಲೇಖಿಸಿದರು.

ನಾನು ನಿತ್ಯ ದಿನಪತ್ರಿಕೆಗಳನ್ನು ಓದಿದ ಬಳಿಕವೇ ಇತರೆ ಕಾರ್ಯಗಳಿಗೆ ಮುಂದಾಗುತ್ತೇನೆ. ಪತ್ರಿಕೆಗಳು ಇನ್ನೂ ಹೆಚ್ಚಿನ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿವೆ. ನಾನು ಟಿವಿ ನೋಡುವುದು ಕಡಿಮೆ ಎಂದರು.

ಈಗ ಊಹಾ ಪತ್ರಿಕೋದ್ಯಮದ ಹಾವಳಿ ಹೆಚ್ಚುತ್ತಿದೆ. ಸತ್ಯ ಬರೆಯುವ ಮತ್ತು ಸಂಶೋಧನೆ ನಡೆಸಿ ಬರೆಯುವ ಪತ್ರಕರ್ತರ ಸಂಖ್ಯೆ ಸುಳ್ಳು ಬರೆಯುವ ಪತ್ರಕರ್ತರ ಸಂಖ್ಯೆಗಿಂತ ಹೆಚ್ಚಾಗಬೇಕು. ಒಂದು ಗುಂಪು ಅಥವಾ ಒಂದು ಸಿದ್ಧಾಂತಕ್ಕೆ ಮಾರು ಹೋಗದೆ ವಾಸ್ತವಾಂಶಕ್ಕೆ ಕನ್ನಡಿ ಹಿಡಿಯಬೇಕು ಎಂದರು.

ಹೊಸ ತಂತ್ರಜ್ಞಾನದ ಜೊತೆಗೆ ಮಾಧ್ಯಮ ರಂಗ ಮತ್ತು ಪತ್ರಕರ್ತರೂ ತಮ್ಮನ್ನು ತಾವು ಉನ್ನತೀಕರಿಸಿಕೊಳ್ಳಬೇಕು. ಹೊಸ ಸವಾಲುಗಳಿಗೆ ತಮ್ಮನ್ನು ತಾವು ಸಜ್ಜುಗೊಳಿಸಿಕೊಂಡು ಹದಗೊಳ್ಳಬೇಕು ಎಂದರು.

ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ, ಹಿರಿಯ ಸಾಹಿತಿ ಹಂಪನಾ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ, ವಾರ್ತಾ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್, ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜಮೂರ್ತಿ ಸೇರಿ ಹಲವರು ಉಪಸ್ಥಿತರಿದ್ದರು.

key words: Newspapers, still retain credibility, I watch TV less, CM Siddaramaiah, Karnataka Media Academy

SUMMARY: 

Newspapers still retain credibility; I watch TV less: CM Siddaramaiah

Chief Minister Siddaramaiah said that newspapers still maintain their credibility and that he watches television less.

He was speaking after distributing the “Annual Awards for the year 2025” to selected journalists at a programme organized at the Karnataka Media Academy Banquet Hall, where the awardees were also honoured.

 

The post ಪತ್ರಿಕೆಗಳು ಇನ್ನೂ  ವಿಶ್ವಾಸಾರ್ಹತೆ ಉಳಿಸಿಕೊಂಡಿವೆ. ನಾನು ಟಿವಿ ನೋಡುವುದು ಕಡಿಮೆ : ಸಿಎಂ ಸಿದ್ದರಾಮಯ್ಯ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ವಾಟಾಳ್‌ ನಾಗರಾಜು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ಆಗ್ರಹ: ಸದನದಲ್ಲಿ ಉತ್ತರ ಕೊಟ್ಟ ಸಚಿವ ಶಿವರಾಜ್ ತಂಗಡಗಿ

ಬೆಂಗಳೂರು,ಮಾರ್ಚ್,13,2026 (www.justkannada.in): ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ...

ದೇಶದಲ್ಲಿ LPG ಗ್ಯಾಸ್, ಪೆಟ್ರೋಲ್ ಡಿಸೇಲ್ ಗೆ ಅಭಾವವಿಲ್ಲ- ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟನೆ

ನವದೆಹಲಿ,ಮಾರ್ಚ್,13,2026 (www.justkannada.in): ದೇಶದಲ್ಲಿ LPG ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಡಿಸೇಲ್ ಗೆ...

ಭೀಕರ ಅಪಘಾತದಲ್ಲಿ ಮೂವರು ಸಾವು.

ಮಂಗಳೂರು, ಮಾರ್ಚ್,13,2026 (www.justkannada.in): ಕೆಎಸ್ ಆರ್ ಟಿಸಿ ರಾಜಹಂಸ ಬಸ್ ಹಾಗೂ...

ಗ್ಯಾರಂಟಿ ಯೋಜನೆ ಹಿಂಪಡೆಯಿರಿ ಎಂದು ಬಿಜೆಪಿ ನಿರ್ಣಯ ಮಂಡಿಸಲಿ- ಡಿಸಿಎಂ ಡಿಕೆ ಶಿವಕುಮಾರ್ ಸವಾಲು

ಬೆಂಗಳೂರು,ಮಾರ್ಚ್,13,2026 (www.justkannada.in): ಗ್ಯಾರಂಟಿ ಯೋಜನೆಗಳನ್ನು ಮರುಪರಿಶೀಲನೆ ಮಾಡಿ ಅಥವಾ ಹಿಂಪಡೆಯಿರಿ ಎಂದು...