4
March, 2026

A News 365Times Venture

4
Wednesday
March, 2026

A News 365Times Venture

ಪಹಲ್ಗಾಮ್ ಉಗ್ರರ ದಾಳಿ: ಮಾಹಿತಿ ಕೊರತೆ, ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯ- ಸಿಎಂ ಸಿದ್ದರಾಮಯ್ಯ

Date:

ಬೆಂಗಳೂರು, ಏಪ್ರಿಲ್, 23 ,2025 (www.justkannada.in):  ಕಾಶ್ಮೀರದ ಪಹಲ್ಗಾಮ್ ನ ಉಗ್ರರ ದಾಳಿಯ ಸಂದರ್ಭದಲ್ಲಿ ಕಾಶ್ಮೀರದಿಂದ  ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಸರ್ಕಾರ ಸಕಲ ವ್ಯವಸ್ಥೆ ಮಾಡಲಾಗಿದೆ ಹಾಗೂ ಉಗ್ರರ ದಾಳಿಯ ಮಾಹಿತಿ ಕೊರತೆ ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಮಾಧ್ಯಮದವರೊಂದಿಗೆ ಮಾತನಾಡಿ ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ ಸಿಎಂ ಸಿದ್ದರಾಮಯ್ಯ,  ಕರ್ನಾಟಕದ ಪ್ರವಾಸಿಗರಲ್ಲಿ  ಮಂಜುನಾಥ್ ಹಾಗೂ ಭರತ್ ಭೂಷಣ್ ಎಂಬುವರು ಮೃತರಾಗಿರುವ ಬಗ್ಗೆ ಮಾಹಿತಿ ನೀಡಿದರು. ಕನ್ನಡಿಗರ ರಕ್ಷಣೆ ಹಾಗೂ ಇನ್ನಿತರ ವ್ಯವಸ್ಥೆಗಳಿಗಾಗಿ ಅಧಿಕಾರಿಗಳ ತಂಡವನ್ನು ಕಾಶ್ಮೀರಕ್ಕೆ ರವಾನಿಸಲಾಗಿದೆ. ಅಲ್ಲದೇ, ಕಾಶ್ಮೀರಕ್ಕೆ ತೆರಳಿರುವ 40 ಕ್ಕೂ ಅಧಿಕ ಕನ್ನಡಿಗರನ್ನು ವಿಶೇಷ ವಿಮಾನ ವ್ಯವಸ್ಥೆ ಮಾಡಿ ಸುರಕ್ಷಿತವಾಗಿ ಕರೆತರಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನೂ ಕಾಶ್ಮೀರಕ್ಕೆ ಕಳಿಸಲಾಗಿದೆ ಎಂದರು.

ಕಾಶ್ಮೀರದ ಪಹಲ್ಗಾಮ್ ನಡೆದಿರುವ ಉಗ್ರರ ದಾಳಿ ಪೂರ್ವಯೋಜಿತ ಸಂಚು. ಪ್ರಾಣಹತ್ಯೆ ಮಾಡಿರುವ ಈ ಘಟನೆ ಅತ್ಯಂತ ಖಂಡನೀಯ. ಘಟನೆಯಲ್ಲಿ ಸುಮಾರು 28 ಜನ ಮೃತಪಟ್ಟಿರುವ ಭೀಕರವಾದ ಉಗ್ರರ ದಾಳಿ ನಡೆಯುವ ಮಾಹಿತಿ ಮೊದಲೇ ತಿಳಿಯದಿರುವುದು ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯವಾಗಿದೆ. ಈ ಹಿಂದೆ ನಡೆದ ಪುಲ್ವಾಮಾ ಘಟನೆಯಲ್ಲಿ ಗುಪ್ತಚರ ಮಾಹಿತಿಯ ವೈಫಲ್ಯವಿದೆ ಎಂದರು.

ದೇಶದ ಜನರಿಗೆ ಕೇಂದ್ರ ಭದ್ರತೆ ಒದಗಿಸಬೇಕು

ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಸರ್ಕಾರ, ಸಕಾರಾತ್ಮಕವಾಗಿ ಚಿಂತಿಸಿ ಪರಿಶೀಲಿಸಲಿದೆ. ಪಹಲ್ಗಾಮಿನ ಉಗ್ರರ ದಾಳಿ ಪ್ರಕರಣದಲ್ಲಿ ಕೇಂದ್ರ ಗುಪ್ತಚರ ಇಲಾಖೆ ವಿಫಲವಾಗಿದೆ. ಭಯೋತ್ಪಾದಕರನ್ನು ನಿರ್ಮೂಲನೆಗೊಳಿಸುವ ಜೊತೆಗೆ ದೇಶದ ಜನರಿಗೆ ಭದ್ರತೆ ನೀಡುವ ಕಾರ್ಯವನ್ನು ಕೇಂದ್ರ ಸಮರ್ಥವಾಗಿ ನಿರ್ವಹಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

Key words: terrorist attack, failure, Central Intelligence Agency, CM Siddaramaiah

The post ಪಹಲ್ಗಾಮ್ ಉಗ್ರರ ದಾಳಿ: ಮಾಹಿತಿ ಕೊರತೆ, ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯ- ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೈಸೂರು ವಿಭಾಗ ಬಿಜೆಪಿ ಸಹ ಪ್ರಭಾರಿಯಾಗಿ ಡಾ.ಈ.ಸಿ.ನಿಂಗರಾಜ್ ಗೌಡ ನೇಮಕ.

ಮೈಸೂರು,ಮಾರ್ಚ್,4,2026 (www.justkannada.in): ಭಾರತೀಯ ಜನತಾ ಪಾರ್ಟಿಯ ಮೈಸೂರು ವಿಭಾಗದ ಸಹ ಪ್ರಭಾರಿಯಾಗಿ...

ಒಂದೇ ಕೊಠಡಿಯ 10 ಜನ ಪಾಸಾಗಿದ್ದು ಭ್ರಷ್ಟಾಚಾರವಲ್ಲ,ಇತಿಹಾಸ-KPSC ಕಾರ್ಯದರ್ಶಿ ಜ್ಯೋತಿ

ಬೆಂಗಳೂರು,ಮಾರ್ಚ್, 4,2026 (www.justkannada.in): ಕೆಪಿಎಸ್‌ ಸಿ ಪ್ರಕಟಿಸಿದ ಕೆಎಎಸ್ ಮುಖ್ಯ ಪರೀಕ್ಷಾ...

ಮೈಸೂರು: ಕುದುರೆಗೆ ಕೃತಕ ಕಾಲು ಜೋಡಣೆ ಯಶಸ್ವಿ

ಮೈಸೂರು,ಮಾರ್ಚ್,4,2026 (www.justkannada.in): ಮೈಸೂರು ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಗಂಭೀರವಾಗಿ ಗಾಯಗೊಂಡಿದ್ದ...

ಕೆಪಿಎಸ್ ಸಿಯಲ್ಲಿ ಅಕ್ರಮ:  ಭಾಸ್ಕರ್ ರಾವ್ ತೀವ್ರ ಕಳವಳ

ಬೆಂಗಳೂರು, ಮಾರ್ಚ್​,4,2026 (www.justkannada.in):  ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಮತ್ತೆ ಅಕ್ರಮ ಆರೋಪ...