4
March, 2026

A News 365Times Venture

4
Wednesday
March, 2026

A News 365Times Venture

ಪುಲ್ವಾಮ ಘಟನೆ ಬಳಿಕ ಸ್ವಲ್ಪವೂ ವಿಶ್ರಮಿಸಬಾರದಿತ್ತು: ಉಗ್ರರ ದಾಳಿಗೆ ಇಂಟಲಿಜೆನ್ಸ್ ವೈಫಲ್ಯ ಕಾರಣ-ಸಿಎಂ ಸಿದ್ದರಾಮಯ್ಯ

Date:

ಚಾಮರಾಜನಗರ,ಏಪ್ರಿಲ್,24,2025 (www.justkannada.in):  ಈ ಹಿಂದೆ ಪುಲ್ವಾಮ ದಾಳಿಯಲ್ಲಿ 40 ಸೈನಿಕರು ಜೀವ ತೆತ್ತಿದ್ದರು. ಆ ನಂತರ ಸ್ವಲ್ಪವೂ ವಿಶ್ರಮಿಸಬಾರದಿತ್ತು. ಉಗ್ರರ ದಾಳಿಗೆ ಇಂಟಲಿಜೆನ್ಸ್ ವೈಫಲ್ಯ ಕಾರಣ ಅನ್ನಿಸುತ್ತೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಉಗ್ರರು ಎಲ್ಲೇ ಇರಲಿ, ಯಾವುದೇ ರಾಜ್ಯದಲ್ಲಿರಲಿ ಅವರನ್ನ ಮಟ್ಟ ಹಾಕಬೇಕು. ಉಗ್ರ ಚಟುವಟಿಕೆ ಬೆಳೆಯಲು, ನಡೆಸಲು ಕೇಂದ್ರ ಸರ್ಕಾರ ಅವಕಾಶ ಕೊಡಬಾರದು. ಮೊನ್ನೆ ನಡೆದ ಘಟನೆ ಅತ್ಯಂತ ಅಮಾನವೀಯ  ಹೇಯ ಕೃತ್ಯ. ಪುಲ್ವಾಮ ಘಟನೆ ನಡೆದಿತ್ತು, ಈಗ ಇದು ನಡೆದಿದೆ, ಮತ್ತೊಮ್ಮೆ ಈ ರೀತಿ ಘಟನೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಮುನ್ನೆಚ್ಚರಿಕೆ ಬೇರೆ- ಘಟನೆ ನಡೆದ ನಂತರ ತೆಗೆದುಕೊಳ್ಳುವ ಕ್ರಮ ಬೇರೆ ಪುಲ್ವಾಮ ಬಳಿಕ ಸ್ವಲ್ಪವೂ ವಿಶ್ರಮಿಸಬಾರದಿತ್ತು. ಕೇಂದ್ರ ಸರ್ಕಾರದ ಇಂಟಲಿಜೆನ್ಸ್ ವೈಫಲ್ಯ ಇದೆ ಅನ್ಸುತ್ತೆ. ಉಗ್ರರು ಯಾವುದೇ ಜಾತಿ ಧರ್ಮಕ್ಕೆ ಸೇರಿದವರಾಗಲಿ ಅವರನ್ನ ಮಟ್ಟ ಹಾಕಬೇಕು. ಈ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ನಮ್ಮ ಸರ್ಕಾರ, ಪಕ್ಷ ಬೆಂಬಲ ನೀಡಲಿದೆ. ಎಲ್ಲರ ಜೊತೆ ನಾವೀದ್ದೇವೆ ಎಂದರು.

ಉಗ್ರರ ದಾಳಿಯಲ್ಲಿ ಮೃತರಾತ ಕನ್ನಡಿಗರ ಕುಟುಂಬಕ್ಕೆ  10 ಲಕ್ಷ ರೂ. ಪರಿಹಾರ ಕೊಟ್ಟಿದ್ದೇವೆ. ಬಹಳ ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words: Pahalgam, terrorist attack, Intelligence, failure, CM Siddaramaiah

The post ಪುಲ್ವಾಮ ಘಟನೆ ಬಳಿಕ ಸ್ವಲ್ಪವೂ ವಿಶ್ರಮಿಸಬಾರದಿತ್ತು: ಉಗ್ರರ ದಾಳಿಗೆ ಇಂಟಲಿಜೆನ್ಸ್ ವೈಫಲ್ಯ ಕಾರಣ-ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

KPSC ಫಲಿತಾಂಶ ಅಕ್ರಮ ಆರೋಪ: ಬಜೆಟ್ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ- ಬಿವೈ ವಿಜಯೇಂದ್ರ

ಬೆಂಗಳೂರು,ಮಾರ್ಚ್,4,2026 (www.justkannada.in): ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಕೆಎಎಸ್ ಮುಖ್ಯ ಪರೀಕ್ಷೆಯ...

ಭೀಕರ ಅಪಘಾತದಲ್ಲಿ ಐವರು ದುರ್ಮರಣ

ಚಿತ್ತೂರು,ಮಾರ್ಚ್,4,2026 (www.justkannada.in): ಹಿಂಬದಿಯಿಂದ ಲಾರಿಗೆ ಕಾರು ಡಿಕ್ಕಿಯಾಗಿ ಬೆಂಗಳೂರು ಮೂಲದ ಐವರು...

ಕೊಡಗು ಜಿಲ್ಲೆಯಲ್ಲಿ ಏ.8 ರಿಂದ 3 ದಿನಗಳ ಕಾಲ ಪಾಸ್‌ ಪೋರ್ಟ್‌ ಮೇಳ

ಮೈಸೂರು, ಫೆಬ್ರವರಿ,4,2026 (www.justkannada.in): ಕಿತ್ತಳೆ ನಾಡು ಕೊಡಗು ಜಿಲ್ಲೆಯ ನಾಗರಿಕರಿಗೆ ಸಂತಸದ...

2022ನೇ ಸಾಲಿನ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಅವಕಾಶ

ಬೆಂಗಳೂರು, ಮಾರ್ಚ್, 3,2026 (www.justkannada.in): 2022ನೇ ವರ್ಷದಲ್ಲಿ ಪ್ರಥಮ ಮುದ್ರಣಗೊಂಡು ರಾಜ್ಯ...