ಮೈಸೂರು,ಜುಲೈ,14,2025 (www.justkannada.in): ಮೈಸೂರು ನಗರ ಪೊಲೀಸರು ಕಾರ್ಯಾಚರಣೆ ನಡೆಸಿ 42 ಸ್ವತ್ತು ಕಳುವು ಪ್ರಕರಣಗಳು ಪತ್ತೆ ಹಚ್ಚಿ ಸುಮಾರು ಒಟ್ಟು 63 ಲಕ್ಷ ಮೌಲ್ಯದ ಸ್ವತ್ತುಗಳನ್ನ ವಶ ಪಡೆದಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ , ಕಳೆದ 2 ತಿಂಗಳಲ್ಲಿ 8 ಸರಗಳ್ಳತನ, 2 ಮನೆ ಕಳ್ಳತನ, 1 ಮನೆ ಕೆಲಸದವರಿಂದ ಕಳ್ಳತನ, 28 ವಾಹನ ಕಳ್ಳತನ, 3 ಸಾಮಾನ್ಯ ಕಳ್ಳತನ ಸೇರಿದಂತೆ ಒಟ್ಟು 42 ಸ್ವತ್ತು ಕಳುವು ಪ್ರಕರಣಗಳು ಪತ್ತೆ ಮಾಡಲಾಗಿದೆ.
659 ಗ್ರಾಂ ಚಿನ್ನಾಭರಣ, 1 ಕೆ.ಜಿ ಬೆಳ್ಳಿ ಪದಾರ್ಥ, 27 ದ್ವಿಚಕ್ರ ವಾಹನಗಳು, 1 ಕಾರು, 2,57,000 ನಗದು ಹಣ, 1 ಲ್ಯಾಪ್ ಟಾಪ್ ಸೇರಿದಂತೆ ಒಟ್ಟು 63 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು ಪತ್ತೆಯಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 19 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಹಾಗೆಯೇ 11 NDPS ಪ್ರಕರಣಗಳಲ್ಲಿ 65 ಕೆ.ಜಿ 800 ಗ್ರಾಂ ಗಾಂಜಾ, 23 ಗ್ರಾಂ MDMA ಮಾದಕ ಪದಾರ್ಥಗಳನ್ನ ವಶಕ್ಕೆ ಪಡೆಯಾಗಿದೆ ಎಂದು ತಿಳಿಸಿದರು.
ಸರಸ್ವತಿಪುರಂ ಠಾಣೆ ವ್ಯಾಪ್ತಿಯ 01 ಮನೆ ಕಳ್ಳತನ ಪ್ರಕರಣವನ್ನು ಪತ್ತೆ ಮಾಡಿ, ರೂ. 26.16,000/- ಮೌಲ್ಯದ 287 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಓರ್ವನನ್ನ ಬಂಧಿಸಿದ್ದಾರೆ.
ದೇವರಾಜ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿ, ರೂ. 12.80.000 ರೂ. ಮೌಲ್ಯದ ಒಟ್ಟು 24 ದ್ವಿ ಚಕ್ರ ವಾಹನಗಳನ್ನು ಪತ್ತೆ ಮಾಡಿದ್ದು, ದೇವರಾಜ ಠಾಣೆಯ 21, ಲಷ್ಕರ್-1, ಉದಯಗಿರಿ-1 ಗುಂಡ್ಲುಪೇಟೆ ಠಾಣೆಯ-1 ದ್ವಿ ಚಕ್ರ ವಾಹನಗಳು ಪತ್ತೆಯಾಗಿರುತ್ತವೆ. ಅದೇ ರೀತಿ ಮತ್ತೊಂದು ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ ರೂ. 70,000 ಮೌಲ್ಯದ 2 ದ್ವಿ ಚಕ್ರ ವಾಹನಗಳನ್ನು ಪತ್ತೆ ಮಾಡಿದ್ದಾರೆ. ದೇವರಾಜ ಠಾಣೆ ವ್ಯಾಪ್ತಿಯಲ್ಲಿ 1, ಲಷ್ಕರ್ ಠಾಣೆ ವ್ಯಾಪ್ತಿಯಲ್ಲಿ 1 ದ್ವಿ ಚಕ್ರ ವಾಹನಗಳು ಪತ್ತೆಯಾಗಿವೆ.
ಲಷ್ಕರ್ ಠಾಣಾ ಪೊಲೀಸರು 03 ಆರೋಪಿಗಳನ್ನು ಬಂಧಿಸಿದ್ದು ಲಷ್ಕರ್ ಠಾಣೆಯ 03, ದೇವರಾಜ ಠಾಣೆಯ1 ಸರಗಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ, ರೂ. 11,40.000 ಮೌಲ್ಯದ 175 ಗ್ರಾಂ ತೂಕದ 04 ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.
ವಿದ್ಯಾರಣ್ಯಪುರಂ ಠಾಣಾ ಪೊಲೀಸರು 02 ಆರೋಪಿಗಳನ್ನು ಬಂಧಿಸಿ, ವಿದ್ಯಾರಣ್ಯಪುರಂ ಠಾಣೆಯ 03 ಸರಗಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ. ರೂ. 6,80.000 ಮೌಲ್ಯದ ಒಟ್ಟು 85 ಗ್ರಾಂ ತೂಕದ 03 ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಉಳಿದಂತೆ ಕುವೆಂಪುನಗರ ಠಾಣೆಯ-01 ಸರಗಳ್ಳತನ, ಉದಯಗಿರಿ ಠಾಣೆಯ-01 ಮನೆ ಕಳ್ಳತನ(ಚಿನ್ನಾಭರಣ), 01 ಸಾಮಾನ್ಯ ಕಳ್ಳತನ (ಲ್ಯಾಪ್ಟಾಪ್), ವಿ.ವಿ.ಪುರಂ ಠಾಣೆಯ-01 ದ್ವಿ ಚಕ್ರ ವಾಹನ ಕಳ್ಳತನ. ನಜರ್ ಬಾದ್ ಠಾಣೆಯ -01 ಸಾಮಾನ್ಯ ಕಳ್ಳತನ (ನಗದು 2.50.000/-), 01 ವಾಹನ ಕಳ್ಳತನ (ಮಹಿಂದ್ರಾ XUV 500), ಮೇಟಗಳ್ಳಿ ಠಾಣೆಯ ಮನೆ ಕೆಲಸದವರಿಂದ ಕಳ್ಳತನ (ಚಿನ್ನ ಬೆಳ್ಳಿ ಪದಾರ್ಥಗಳು), ವಿಜಯನಗರ ಠಾಣೆಯ 1 ಸಾಮಾನ್ಯ ಕಳ್ಳತನ (ಫ್ಯಾಕ್ಟರಿ ಆವರಣದಿಂದ ತಾಮ್ರದ ಪದಾರ್ಥಗಳು) ಪ್ರಕರಣಗಳು ಪತ್ತೆಯಾಗಿವೆ.
2025ನೇ ಸಾಲಿನ ಮೇ ಮಾಹೆಯಿಂದ ಈವರೆಗೆ ಮೈಸೂರು ನಗರದಲ್ಲಿ ಒಟ್ಟು 11 ಎನ್.ಡಿ.ಪಿ.ಎಸ್. ಕಾಯ್ದೆಯ ಪ್ರಕರಣಗಳನ್ನು ದಾಖಲಿಸಿದ್ದು, 13 ಆರೋಪಿಗಳನ್ನು ದಸ್ತಗಿರಿ ಮಾಡಿ ಸುಮಾರು 18.50.000 ಮೌಲ್ಯದ 65 ಕೆ.ಜಿ 800 ಗ್ರಾಂ ಗಾಂಜಾ, 23 ಗ್ರಾಂ ಎಂ.ಡಿ.ಎಂ.ಎ ಮಾದಕ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.
ಈ ವೇಳೆ ಡಿಸಿಪಿ ಗಳಾದ ಸುಂದರ್ ರಾಜ್, ಬಿಂದು ಮಣಿ ಉಪಸ್ಥಿತರಿದ್ದರು.
Key words: Mysore, Police, 42 theft cases, detected,
The post ಪೊಲೀಸರ ಕಾರ್ಯಾಚರಣೆ: 42 ಕಳುವು ಪ್ರಕರಣಗಳು ಪತ್ತೆ, 63 ಲಕ್ಷ ಮೌಲ್ಯದ ಸ್ವತ್ತುಗಳು ವಶಕ್ಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.