ಮೈಸೂರು,ಜುಲೈ,15,2025 (www.justkannada.in): ಮೈಸೂರು ದಸರಾ ಹಿನ್ನೆಲೆಯಲ್ಲಿ ಬರುವ ಪ್ರವಾಸಿಗರನ್ನು ಅತಿಥಿಗಳೆಂದು ಗೌರವಿಸಿ ಉತ್ತಮ ಸೇವೆ ನೀಡಿ ಎಂದು ಹೋಟೆಲ್ ಮಾಲೀಕರಿಗೆ ಮೈಸೂರು ಅಪರ ಜಿಲ್ಲಾಧಿಕಾರಿ ಹಾಗೂ ದಸರಾ ಸ್ಥಳಾವಕಾಶ ಉಪಸಮಿತಿಯ ಉಪವಿಶೇಷಾಧಿಕಾರಿ ಡಾ.ಪಿ.ಶಿವರಾಜು ಸೂಚಿಸಿದರು.
ದಸರಾ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಅತಿಥಿಗಳ ಹಾಗೂ ಗಣ್ಯಮಾನ್ಯರ ಉತ್ತಮ ವಾಸ್ತವ್ಯಕ್ಕಾಗಿ ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮೈಸೂರಿನ ಎಲ್ಲಾ ಪ್ರಮುಖ ಹೋಟೆಲ್ ಮಾಲೀಕರ/ ವ್ಯವಸ್ಥಾಪಕರ ಸಭೆಯನ್ನು ಉದ್ಧೇಶಿಸಿ ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಸಭೆ ನಡೆಸಿ ಸಂಬಂಧಿಸಿದವರಿಗೆ ಅಗತ್ಯ ಮಾರ್ಗದರ್ಶನ ನೀಡಿದರು.
ಈ ಬಾರಿ ದಸರಾದಲ್ಲಿ ಕಳೆದ ಬಾರಿಗಿಂತ ಉತ್ತಮ ಸೇವೆ ನೀಡಿ ಪ್ರವಾಸಿಗರನ್ನು ನಮ್ಮ ಅತಿಥಿಗಳೆಂದು ತಿಳಿದು ಗೌರವಿಸಿ ಮೈಸೂರಿನ ಹಿರಿಮೆಯನ್ನು ಹೆಚ್ಚಿಸಬೇಕೆಂದು ಹೋಟೆಲ್ ಮಾಲೀಕರು ಹಾಗೂ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಹಾಜರಿದ್ದ ಸಂಬಂಧಿಸಿದ ಎಲ್ಲರೂ ಮೈಸೂರಿನ ಪರಂಪರೆಯನ್ನು ಹೆಚ್ಚಿಸುವ ರೀತಿಯಲ್ಲಿ ಉತ್ತಮ ಸೇವೆ ನೀಡುವುದಾಗಿ ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಆಶಪ್ಪ, ತಹಶೀಲ್ದಾರ್ ಮಹೇಶ್ ಹಾಗೂ ಮೈಸೂರಿನ ಪ್ರಮುಖ ಹೋಟೆಲ್ ಗಳ ಮಾಲೀಕರು ಹಾಗೂ ವ್ಯವಸ್ಥಾಪಕರು ಹಾಜರಿದ್ದರು.
Key words: Mysore dasara, Respect, tourists, ADC, Dr. P. Shivaraju
The post ಪ್ರವಾಸಿಗರನ್ನು ಅತಿಥಿಗಳೆಂದು ಗೌರವಿಸಿ ಉತ್ತಮ ಸೇವೆ ನೀಡಿ : ಡಾ.ಪಿ.ಶಿವರಾಜು ನಿರ್ದೇಶನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.