3
March, 2026

A News 365Times Venture

3
Tuesday
March, 2026

A News 365Times Venture

ಬಜೆಟ್ ನಲ್ಲಿ ಬರೀ ಕೇಂದ್ರ ಸರ್ಕಾರ ಬಯ್ಯುವ ಕೆಲಸವಾಗಿದೆ – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ

Date:

ಹುಬ್ಬಳ್ಳಿ, ಮಾರ್ಚ್,8,2025 (www.justkannada.in):  ನಿನ್ನೆ ಸಿದ್ಧರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಬರೀ ಕೇಂದ್ರ ಸರ್ಕಾರವನ್ನೇ ಬಯ್ಯುವ ಕೆಲಸವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಪ್ರಹ್ಲಾದ್ ಜೋಶಿ,  ಕುಣಿಯಲು ಬಾರದಿದ್ರೆ ನೆಲ ಡೊಂಕು ಅನ್ನುವ ಹಾಗೆ ಎಲ್ಲಕ್ಕೂ ಕೇಂದ್ರದ ಮೇಳೆ ಬೊಟ್ಟು ಮಾಡುತ್ತಿದ್ದಾರೆ. ಇದು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಲ್ಲ. ಪ್ರತಿಯೊಂದಕ್ಕೂ ಕೇಂದ್ರದ ಬಗ್ಗೆ ಮಾತನಾಡುತ್ತಾರೆ. ಕೋವಿಡ್ ನಂತರ ನಾವು ಬಡ್ಡಿ ರಹಿತ ಸಾಲ ಕೊಟ್ಟಿದ್ದೇವೆ. ಇವತ್ತು ಕೇಂದ್ರದಲ್ಲಿ 50 ಲಕ್ಷ ಕೋಟಿ ಬಜೆಟ್ ತಲುಪಿದೆ.  ಇವರ ಕಾಲದಲ್ಲಿ 15 ಲಕ್ಷ ಕೋಟಿ ಇತ್ತು.  ನಾವು ಕರ್ನಾಟಕಕ್ಕೆ ಬಡ್ಡಿ ರಹಿತ ಸಾಲ ನೀಡಿದ್ದೇವೆ. ಸಿಎಂ ಇದನ್ನ ಅರ್ಥ ಮಾಡಿಕೊಳ್ಳಬೇಕು.  ಸಿಎಂ ಸಿದ್ದರಾಮಯ್ಯ ಹೋಗುವ ಮುನ್ನ ಸತ್ಯ ಮಾತಾಡಿ ಎಂದು ವಾಗ್ದಾಳಿ ನಡೆಸಿದರು.

ಬಜೆಟ್ ಓದಿದ್ದು ಪಾಕ್ ನವರಿಗೂ ಅರ್ಥ ಆಗಿಲ್ಲ ಅನ್ನಿಸುತ್ತೆ. ಗುತ್ತಿಗೆಯಲ್ಲಿ ಮುಸ್ಲೀಮರಿಗೆ ಮೀಸಲಾತಿ ಏಕೆ..?  ಉಳಿದ ಸಣ್ಣಪುಟ್ಟ ಗುತ್ತಿಗೆದಾರರು ಏನು ಮಾಡಬೇಕು ಎಂದು ಪ್ರಹ್ಲಾದ್ ಜೋಶಿ ಪ್ರಶ್ನಿಸಿದರು.

Key words: state budget, central government, Union Minister, Prahlad Joshi

The post ಬಜೆಟ್ ನಲ್ಲಿ ಬರೀ ಕೇಂದ್ರ ಸರ್ಕಾರ ಬಯ್ಯುವ ಕೆಲಸವಾಗಿದೆ – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪೋನ್ ಕದ್ದಾಲಿಕೆ ಆರೋಪ: ಇದೊಂದು ಅತೃಪ್ತ ಆತ್ಮಗಳ ಹತಾಶ ಹೇಳಿಕೆ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಮಾರ್ಚ್,3,2026 (www.justkannada.in): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲೆ ಕಣ್ಣಿಡಲು ಪೋನ್ ಕದ್ದಾಲಿಕೆ...

‘ನಾವು ಭಾರತಕ್ಕೆ ಜೀವಂತವಾಗಿ ಬರ್ತೇವೆ ಅಂದುಕೊಂಡಿರಲಿಲ್ಲ..!’ ದುಬೈ ಪರಿಸ್ಥಿತಿ ಬಗ್ಗೆ ವಿವರಿಸಿದ MLC ಭೊಜೇಗೌಡ

ಬೆಂಗಳೂರು,ಮಾರ್ಚ್,3,2026 (www.justkannada.in):  ಇರಾನ್ ಮೇಲೆ ಇಸ್ರೇಲ್ ,ಅಮೇರಿಕಾ ದಾಳಿ ಬೆನ್ನಲ್ಲೆ ಮಧ್ಯ...

ಖಮನೈ ಹತ್ಯೆ ಖಂಡಿಸಿ ಪ್ರತಿಭಟನೆ ವಿಚಾರ: ತಪ್ಪಾಗಿದ್ರೆ ಪರಿಶೀಲಿಸಿ ಕ್ರಮ-ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಮಾರ್ಚ್,3,2026 (www.justkannada.in): ಇರಾನ್ ಸರ್ವೋಚ್ಚ ನಾಯಕ ಖಮನೈ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ...

ಒಳಮೀಸಲಾತಿ ಅನುಷ್ಠಾನಕ್ಕೆ ಎಲ್ಲಾ ಸಮುದಾಯಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಿ- ಮಾಜಿ ಸಿಎಂ ಬೊಮ್ಮಾಯಿ

ಬೆಂಗಳೂರು,ಮಾರ್ಚ್,2,2026 (www.justkannada.in): ರಾಜ್ಯ ಸರ್ಕಾರ ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳಮೀಸಲಾತಿ...