ದಾವಣಗೆರೆ,ಫೆಬ್ರವರಿ,9,2026 (www.justkannada.in): ಬಜೆಟ್ ಮಂಡನೆ ಯಾವತ್ತು ಅಂತ ನಾನೇ ಅನೌನ್ಸ್ ಮಾಡುತ್ತೇನೆ ನಾಳೆ ಅಥವಾ ನಾಡಿದ್ದರಲ್ಲಿ ಘೋಷಣೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ವಾಲ್ಮೀಕಿ ಜಾತ್ರೆ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮ್ಮ ಸರ್ಕಾರ ಸರ್ವರಿಗೂ ಗ್ಯಾರಂಟಿ ಯೋಜನೆಗಳನ್ನ ನೀಡಿದೆ. ಯಾವುದೇ ಜಾತಿ ಧರ್ಮ, ಪಕ್ಷ ನೋಡದೇ ಗ್ಯಾರಂಟಿ ಕೊಟ್ಟಿದ್ದೇವೆ ಎಂದರು.
ಮೆಟ್ರೋ ದರ ಏರಿಕೆ ವಿಚಾರ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಮೆಟ್ರೋಗೆ ದರ ನಿಗದಿ ಮಡೋದು ಚೇರ್ಮನ್. ಕೇಂದ್ರ ಸರ್ಕಾರದಿಂದ ಚೇರ್ಮನ್ ಆಯ್ಕೆ ಆಗುತ್ತದೆ. ಮೆಟ್ರೋ ಟಿಕೆಟ್ ದರದ ಬಗ್ಗೆ ಅವರು ನಿರ್ಧರಿಸುತ್ತಾರೆ. ನಾನಂತೂ ಮೆಟ್ರೋ ದರ ಏರಿಕೆ ಮಾಡಿ ಅಂತಾ ಹೇಳಿಲ್ಲ ಎಂದರು.
Key words: Budget, announced, CM Siddaramaiah
The post ಬಜೆಟ್ ಯಾವಾಗ ಎಂದು ನಾಳೆ ಅಥವಾ ನಾಡಿದ್ದರಲ್ಲಿ ಘೋಷಣೆ- ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




