ವಿಜಯಪುರ,ಮಾರ್ಚ್,2,2026 (www.justkannada.in): ಬಾಗಲಕೋಟೆ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿ ಮಠ ಬಿಎಸ್ ಯಡಿಯೂರಪ್ಪ ಗೋವಿಂದ ಕಾರಜೋಳ ಟೀಮ್. ಇವರ ಪರ ಪ್ರಚಾರಕ್ಕೆ ಹೊರಟಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ನಿಮ್ಮ ಸ್ವಾಭಿಮಾನ ಎಲ್ಲಿಗೆ ಹೋಯಿತು? ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಕುಟುಕಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಹೊರಟಿದ್ದಾರೆ. ಯತ್ನಾಳ್ ವಾಪಸ್ ಬಿಜೆಪಿಗೆ ಹೋಗಲು ನಾಟಕ ಮಾಡುತ್ತಿದ್ದಾರೆ . ಚರಂತಿಮಠ ಅವರು ಯಡಿಯೂರಪ್ಪ ಗೋವಿಂದ ಕಾರಜೋಳ ಅವರ ಟೀಂ. ಹೀಗಾಗಿ ಬಿಎಸ್ ವೈ ಟೀಮ್ ಪರ ಪ್ರಚಾರಕ್ಕೆ ಶಾಸಕ ಯತ್ನಾಳ್ ಹೊರಟಿದ್ದಾರೆ ಎಂದರು.
ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿ ಬಿಎಸ್ ವೈ ಟೀಮ್ ಅಲ್ಲ. ಶ್ರೀನಿವಾಸ್ ದಾಸ ಕರಿಯಪ್ಪ ಅವರು ಸಿದ್ದೇಶ್ವರ್ ಅವರ ಟೀಮ್ ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಶಾಸಕ ಯತ್ನಾಳ್ ಪ್ರಚಾರ ಮಾಡಬೇಕಿತ್ತು. ಆದರೆ ಯತ್ನಾಳ್ ಸುಮ್ಮನೆ ನಾಟಕ ಮಾಡುತ್ತಿದ್ದಾರೆ ಯಡಿಯೂರಪ್ಪ ಮಗ ಅಂತಾ ಸುಮ್ಮನೆ ಮಾತನಾಡುತ್ತಾರೆ. ಬಿಜೆಪಿಗೆ ವಾಪಸ್ ಕರೆಸಿಕೊಳ್ಳಿ ಎಂದು ಕೈಮುಗಿದು ಕೇಳಿಕೊಳ್ಳಿ. ಯತ್ನಾಳ್ ಮಾನ ಮರ್ಯಾದೆ ಸ್ವಾಭಿಮಾನ ಎಲ್ಲಿಗೆ ಹೋಯಿತು 2028ಕ್ಕೆ ಟೈಮ್ ಬರುತ್ತದೆ ಎಂದು ಸಚಿವ ಎಂ.ಬಿ ಪಾಟೀಲ್ ಮಾರ್ಮಿಕವಾಗಿ ನುಡಿದರು.
Key words: Campaigning, BSY team, MLA, Yatnal, Minister, M.B. Patil
The post ಬಿಎಸ್ ವೈ ಟೀಂ ಪರ ಪ್ರಚಾರ: ಯತ್ನಾಳ್ ಅವರೇ ಸ್ವಾಭಿಮಾನ ಎಲ್ಲೋಯ್ತು? ಸಚಿವ ಎಂ.ಬಿ ಪಾಟೀಲ್ ಟಾಂಗ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




