ಬೆಂಗಳೂರು,ಜುಲೈ,21,2025 (www.justkannada.in): ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಭಾರತಿ ನಗರ ಠಾಣೆ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಅನಿಲ್, ಅರುಣ್ ಹಾಗೂ ನವೀನ್ ಬಂಧಿತರು. ಬಂಧಿತ ಅನಿಲ್ ಶಾಸಕ ಭೈರತಿ ಬಸವರಾಜ್ ಅವರ ಸಹೋದರನ ಮಗ ಎನ್ನಲಾಗಿದೆ. ಬಿಕ್ಲು ಶಿವ ಕೊಲೆ ಪ್ರಕರಣದ ಬಳಿಕ ಆರೋಪಿಗಳಾದ ಅರುಣ್ ಹಾಗೂ ನವೀನ್ ತಲೆಮರೆಸಿಕೊಂಡಿದ್ದರು. ಸದ್ಯ ಮೂವರನ್ನು ಬಂಧಿಸಿರುವ ಭಾರತಿನಗರ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್ ಐದನೇ ಆರೋಪಿಯಾಗಿದ್ದು ಕಳೆದ ಎರಡು ದಿನದ ಹಿಂದೆ ವಿಚಾರಣೆಗೆ ಹಾಜರಾಗಿದ್ದರು.
Key words: Biklu Shiva, murder case, Three , accused, arrested
The post ಬಿಕ್ಲು ಶಿವ ಕೊಲೆ ಕೇಸ್: ಮತ್ತೆ ಮೂವರು ಆರೋಪಿಗಳು ಅಂದರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.