10
March, 2026

A News 365Times Venture

10
Tuesday
March, 2026

A News 365Times Venture

ಬಿಟ್ಟು ಹೋಗಿದ್ದ ಚಿನ್ನಾಭರಣವಿದ್ದ ಬ್ಯಾಗ್ ಮಹಿಳೆಗೆ ಯಶಸ್ವಿಯಾಗಿ ಮರಳಿಸಿದ RPF

Date:

ಮೈಸೂರು,ಮೇ,24,2025 (www.justkannada.in): ನೈಋತ್ಯ ರೈಲ್ವೆ, ಮೈಸೂರು ವಿಭಾಗದ, ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್)ಯ ತ್ವರಿತ ಹಾಗೂ ಪ್ರಾಮಾಣಿಕ ಕಾರ್ಯಾಚರಣೆಯಿಂದ ಒಬ್ಬ ಮಹಿಳಾ ಪ್ರಯಾಣಿಕರಿಗೆ ₹1,49,465/- ಮೌಲ್ಯದ ಚಿನ್ನಾಭರಣ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಒಳಗೊಂಡ ವ್ಯಾನಿಟಿ ಬ್ಯಾಗ್ ಅನ್ನು ಯಶಸ್ವಿಯಾಗಿ ಮರಳಿಸಿದ್ದಾರೆ.

ದಿನಾಂಕ 21 ಮೇ 2025 ರಂದು, ಕಡೂರು ನಿವಾಸಿ ತೇಜಾ ಅವರು ರೈಲು ಸಂಖ್ಯೆ 16589 ರಲ್ಲಿ ಕಡೂರು ರೈಲ್ವೆ ನಿಲ್ದಾಣದಲ್ಲಿ ಇಳಿಯುವಾಗ ತಮ್ಮ ಬ್ಯಾಗ್ ಅನ್ನು ಆಕಸ್ಮಿಕವಾಗಿ ಬಿಟ್ಟು ಹೋಗಿದ್ದರು. ದೂರನ್ನು ಸ್ವೀಕರಿಸಿದ ತಕ್ಷಣ, ಆರ್‌ಪಿಎಫ್ ಎಸ್ಕಾರ್ಟ್ ತಂಡವು ತಕ್ಷಣವೇ ರೈಲಿನಲ್ಲಿ ಹುಡುಕಾಟ ನಡೆಸಿ ಬ್ಯಾಗ್ ಅನ್ನು ಪತ್ತೆಹಚ್ಚಿದ್ದು. ಆ ಬ್ಯಾಗ್ ಅನ್ನು ದಾವಣಗೆರೆಯ ಆರ್‌ಪಿಎಫ್ ಪೋಸ್ಟ್‌ಗೆ ಹಸ್ತಾಂತರಿಸಲಾಯಿತು.

ಸೂಕ್ತ ಪರಿಶೀಲನೆಯ ನಂತರ, 15 ಗ್ರಾಂ ಚಿನ್ನಾಭರಣ ಮತ್ತು ಎರಡು ಐಫೋನ್ ಚಾರ್ಜರ್‌ ಗಳನ್ನು ಒಳಗೊಂಡ ವಸ್ತುಗಳನ್ನು ದಿನಾಂಕ 22 ಮೇ 2025 ರಂದು ಮಾಲೀಕರಿಗೆ ಹಿಂದಿರುಗಿಸಲಾಯಿತು.

ಮೈಸೂರು ವಿಭಾಗದ ಹಿರಿಯ ವಿಭಾಗೀಯ ಆಯುಕ್ತ, ಆರ್‌ಪಿಎಫ್, ಸ್ಯಾಮ್ ಪ್ರಸಾಂತ್ ಜೆ.ಆರ್, ಆಪರೇಷನ್ “ಅಮಾನತ್” ಅಡಿಯಲ್ಲಿ ತಂಡದ ಪ್ರಾಮಾಣಿಕ ಕರ್ತವ್ಯವನ್ನು ಶ್ಲಾಘಿಸಿದರು. ಈ ವಿಶೇಷ ಕಾರ್ಯಾಚರಣೆಯಡಿ ಪ್ರಯಾಣಿಕರು ಕಳೆದುಕೊಂಡ ವಸ್ತುಗಳನ್ನು ಮರಳಿಸುವ ಗುರಿಯನ್ನು ಹೊಂದಿದೆ. ಅವರು ಇದೇ ಸಂದರ್ಭದಲ್ಲಿ 2024-25ನೇ ಆರ್ಥಿಕ ವರ್ಷದಲ್ಲಿ ಆರ್‌ಪಿಎಫ್ ಸಿಬ್ಬಂದಿ 197 ಕಳೆದುಹೋದ ಸಾಮಾನುಗಳನ್ನು ಮರಳಿಸಿದ್ದು, 52.62 ರೂ. ಲಕ್ಷ ಮೌಲ್ಯದ ವಸ್ತುಗಳನ್ನು ಮರಳಿಸಿದ್ದಾರೆ ಎಂದು ತಿಳಿಸಿದರು.

ಪ್ರಯಾಣಿಕರು ಆರ್‌ಪಿಎಫ್‌ನ ಸತ್ಯನಿಷ್ಠೆ ಮತ್ತು ತ್ವರಿತ ಸ್ಪಂದನೆಗಾಗಿ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

Key words: RPF, successfully, returns, jewellery bag, woman

The post ಬಿಟ್ಟು ಹೋಗಿದ್ದ ಚಿನ್ನಾಭರಣವಿದ್ದ ಬ್ಯಾಗ್ ಮಹಿಳೆಗೆ ಯಶಸ್ವಿಯಾಗಿ ಮರಳಿಸಿದ RPF appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಭಾರತಕ್ಕೆ ಯುದ್ದದ ಎಫೆಕ್ಟ್: 56 ಇಂಚಿನ ಎದೆಯ ಪ್ರಧಾನಿ ಉತ್ತರಕ್ಕಾಗಿ ಕಾಯುತ್ತಿದ್ದೇವೆ- ಸಚಿವ ಸುಧಾಕರ್ ಟಾಂಗ್

ಬೆಂಗಳೂರು,ಮಾರ್ಚ್,10,2026 (www.justkannada.in):  ಇರಾನ್ ಮೇಲೆ ಇಸ್ರೇಲ್ ಮತ್ತು ಅಮೇರಿಕಾ ದಾಳಿಯಿಂದಾಗಿ ಭಾರತ...

ಲಂಚ ಸ್ವೀಕಾರ: ಜಿಲ್ಲಾಸ್ಪತ್ರೆ ವೈದ್ಯೆ ಲೋಕಾಯುಕ್ತ ಬಲೆಗೆ

ತುಮಕೂರು,ಮಾರ್ಚ್,9,2026 (www.justkannada.in):  ಲಂಚ ಸ್ವೀಕರಿಸುತ್ತಿದ್ದ ವೇಳೆ ಜಿಲ್ಲಾಸ್ಪತ್ರೆ ವೈದ್ಯೆ ಲೋಕಾಯುಕ್ತ ಬಲೆಗೆ...

ಅವಧಿ ಮೀರಿದ ಆಹಾರ ಪದಾರ್ಥ ವಿತರಣೆ ಆಗಿದ್ದರೆ ಕ್ರಮ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು,ಮಾರ್ಚ್,9,2026 (www.justkannada.in): ಅಂಗನವಾಡಿಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥ ವಿತರಣೆ ಆರೋಪ...

KSIC ಫಿಲೇಚರ್ ಕಾರ್ಖಾನೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಯೋಜನೆ ಕೈಬಿಟ್ಟ ಸರ್ಕಾರ

ಮೈಸೂರು,ಮಾರ್ಚ್,9.2026 (www.justkannada.in): ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಇರುವ KSIC ಫಿಲೇಚರ್...