ಬಾಗಲಕೋಟೆ,ಏಪ್ರಿಲ್,1,2026 (www.justkannada.in): ಬೆಲೆ ಏರಿಕೆ ಕಷ್ಟ ಕಾಲದಲ್ಲಿ ಗ್ಯಾರಂಟಿ ಯೋಜನೆಗಳು ಆಸರೆಯಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಇಂದು ಬಾಗಲಕೋಟೆಯಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಎರಡು ಕ್ಷೇತ್ರಗಳಲ್ಲೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಅತಿ ಹೆಚ್ಚು ಮತಗಳಿಂದ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ. ಬೈಲ ಎಲಕ್ಷನ್ ವರದಿ ನಮಗೆ ಬಂದಿದೆ ಎಂದರು.
ಕಾರ್ಯಕರ್ತರು ಮನೆ ಮನೆಗೆ ಹೋಗಿ ಗ್ಯಾರಂಟಿ ಬಗ್ಗೆ ತಿಳಿಸುತ್ತಿದ್ದಾರೆ. ಹಾಗಾಗಿ ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ. ಬಾಗಲಕೋಟೆ ದಾವಣಗೆರೆ ಜನ ದೊಡ್ಡ ಬದಲಾವಣೆ ಬಯಸಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಬೇಕಾದ 15,551 ಕೋಟಿ ರೂಪಾಯಿ ನೀಡಿಲ್ಲ. ಇಂದಿನಿಂದ ದೇಶದಲ್ಲಿ ಎಲ್ಲಾ ಬೆಲೆಗಳು ಹೆಚ್ಚಳವಾಗುತ್ತಿದೆ ಅಚ್ಚೇ ದಿನ್ ಕೂಡ ಾಯ್ತು ಈಗ ಸೌದೆ ಭಾಗ್ಯ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
Key words: Guarantees, support, price hike, DCM, DK Shivakumar
The post ಬೆಲೆ ಏರಿಕೆ ಕಷ್ಟ ಕಾಲದಲ್ಲಿ ಗ್ಯಾರಂಟಿಗಳು ಆಸರೆಯಾಗುತ್ತೆ- ಡಿಸಿಎಂ ಡಿಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




