ಮೈಸೂರು,ಮಾರ್ಚ್,18,2026 (www.justkannada.in): ಡಿವಿಜಿ ಬಳಗ ಪ್ರತಿಷ್ಠಾನದ ವತಿಯಿಂದ ಹಿರಿಯ ವಿಜ್ಞಾನಿ ಲೇಖಕ ಕೊಳ್ಳೆಗಾಲ ಶರ್ಮಾ ಅವರಿಗೆ ಬಿಜಿಎಲ್ ಸ್ವಾಮಿ ಪ್ರಶಸ್ತಿ’ ಹಾಗೂ ಜೀವನಧರ್ಮಯೋಗ, ಮಂಕುತಿಮ್ಮನ ಕಗ್ಗ ಅಂಗ್ಲ ಅನುವಾದಕರಾದ ಕೆ.ನಟರಾಜನ್ ಅವರಿಗೆ ಡಿವಿಜಿ ಪ್ರಶಸ್ತಿ ನೀಡಿ ಗೌರವವಿಸಲಾಗುತ್ತಿದೆ.
ಮಾರ್ಚ್ 22 ರಂದು ಮೈಸೂರಿನ ಕೃಷ್ಣಮೂರ್ತಿ ಪುರಂನಲ್ಲಿರುವ ಬಿಎಸ್ಎಸ್ ವಿದ್ಯೋದಯದಲ್ಲಿ ನಡೆಯುವ ಸಮಾರಂಭದಲ್ಲಿ ಕೊಳ್ಳೆಗಾಲ ಶರ್ಮಾ ಅವರಿಗೆ ಬಿಜಿಎಲ್ ಸ್ವಾಮಿ ಪ್ರಶಸ್ತಿ’ ಕೆ.ನಟರಾಜನ್ ಅವರಿಗೆ ಡಿವಿಜಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಳ್ಳಾರಿಯ ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರದ ಅಧ್ಯಕ್ಷ ಸ್ವಾಮಿ ಮಂಗಳನಾಥನಂದಜಿ ಆಗಮಿಸಲಿದ್ದು ವಾಣಿಜ್ಯ ಕೈಗಾರಿಕಾ ಇಲಾಖೆಯ ನಿವೃತ್ತ ತಾಂತ್ರಿಕ ನಿರ್ದೇಶಕ ಎಸ್.ಟಿ ರಾಧಕೃಷ್ಣ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ನ ಸಲಹೆಗಾರ ಡಾ.ಎಂ.ಆರ್ ಸೀತಾರಾಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಡಿವಿಜಿ ಬಳಕ ಪ್ರತಿಷ್ಠಾನದ ಸಂಸ್ಥಾಪಕ ಕನಕರಾಜು.ಸಿ ಅವರು ಉಪಸ್ಥಿತರಿರಲಿದ್ದಾರೆ.
Key words: DVG Award, BGL Swamy Award, Kollegal Sharma, K.Natarajan
The post ಮಾ.22 ರಂದು ‘ಡಿವಿಜಿ ಪ್ರಶಸ್ತಿ’ ಮತ್ತು ‘ಬಿಜಿಎಲ್ ಸ್ವಾಮಿ ಪ್ರಶಸ್ತಿ’ ಪ್ರದಾನ ಸಮಾರಂಭ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




