23
March, 2026

A News 365Times Venture

23
Monday
March, 2026

A News 365Times Venture

ಮಾ.25 ರಂದು ರಾಜ್ಯಮಟ್ಟದ ‘ಅಂತರ್ ವಿದ್ಯುತ್ ಕಂಪನಿಗಳ ಕ್ರೀಡಾಕೂಟ’

Date:

ಮಂಡ್ಯ,ಮಾರ್ಚ್,23,2026 (www.justkannada.in):  ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಮೈಸೂರು ವತಿಯಿಂದ 2025 -26ನೇ ಸಾಲಿನ ರಾಜ್ಯಮಟ್ಟದ ಅಂತರ್ ವಿದ್ಯುತ್ ಕಂಪನಿಗಳ ಕಬ್ಬಡ್ಡಿ, ವಾಲಿಬಾಲ್,ಬ್ಯಾಸ್ಕೆಟ್ಬಾಲ್, ಬಾಲ್ ಬ್ಯಾಡ್ಮಿಂಟನ್ ಮತ್ತು ಲಾನ್ ಟೆನ್ನಿಸ್ ಕ್ರೀಡಾಕೂಟವನ್ನು ಮಾರ್ಚ್ 25 ರಂದು ಮಂಡ್ಯ ನಗರದ ಪಿ.ಇ.ಟಿ ಇಂಜಿನಿಯರಿಂಗ್ ಕಾಲೇಜು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಮೈಸೂರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಅಧ್ಯಕ್ಷರು ಹಾಗೂ  ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ಶಾಸಕ ಎ. ಬಿ. ರಮೇಶ್ ಬಂಡಿ ಸಿದ್ದೇಗೌಡ  ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಮುನಿ ಗೋಪಾಲರಾಜು ಕೆ.ಎಂ  ಅವರು ಅಂತರ ಕಂಪನಿ ಕ್ರೀಡಾಜ್ಯೋತಿ ಉದ್ಘಾಟಿಸಲಿದ್ದಾರೆ.

ಮೈಸೂರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಅಧ್ಯಕ್ಷರು ಹಾಗೂ ಮುಖ್ಯ ಇಂಜಿನಿಯರ್  ಸುನಿಲ್ ಕುಮಾರ್ ಎ.ಎ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನಿರ್ದೇಶಕರು ಹಾಗೂ ಅಧ್ಯಕ್ಷ  ಗಿರಿಧರ ಕುಲಕರ್ಣಿ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ನಿರ್ದೇಶಕ ದಿವಾಕರ್ ಡಿ.ಜೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನಿರ್ದೇಶಕರು ಹಾಗೂ ಹಿರಿಯ ಉಪಾಧ್ಯಕ್ಷ ಬಿಪಿ ವಿಜಯ, ಮುಖ್ಯ ಆರ್ಥಿಕ ಅಧಿಕಾರಿಗಳು ರೇಣುಕಾ.ಜಿ, ಪೋಲಿಸ್ ಅಧಿಕ್ಷಕರು ಸವಿತಾ ಹೂಗಾರ್, ಮುಖ್ಯ ಪ್ರಧಾನ ವ್ಯವಸ್ಥಾಪಕರು ಲಿಂಗರಾಜಮ್ಮ, ಮುಖ್ಯ ಪ್ರಧಾನ ವ್ಯವಸ್ಥಾಪಕರು ಶರಣಮ್ಮ ಜಂಗಿನ, ಪ್ರಧಾನ ವ್ಯವಸ್ಥಾಪಕರು ಬಿ.ಆರ್ ರೂಪ, ಮುಖ್ಯ ಇಂಜಿನಿಯರ್ ಗಳಾದ ನಾಗರಾಜು ಎಂ.ಎಲ್, ಸತೀಶ್ ಚಂದ್ರ ಎನ್. ಎಸ್, ಕೃಷ್ಣಪ್ಪ ಗುಂಡಿನಕೇರಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರ ಸಂಘದ ಅಧ್ಯಕ್ಷರು ಕೆ. ಬಲರಾಂ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇಂಜಿನಿಯರ್ ಗಳ ನಿರ್ದೇಶಕ ಮತ್ತು ಸಂಘದ ಅಧ್ಯಕ್ಷ ಬಸವಣ್ಣ ಸಿ, ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಎಸ್ ಗಿರೀಶ್, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಧಿಕಾರಿಗಳ ಸಂಘದ ಅಧ್ಯಕ್ಷ ಶೀಲಾ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಡಿಪ್ಲೋಮಾ ಇಂಜಿನಿಯರ್ ಗಳ ಸಂಘದ ಅಧ್ಯಕ್ಷರು ರಾಮಚಂದ್ರ ಎ, ಜನತಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಕೆ ಎಸ್ ವಿಜಯ್ ಆನಂದ್, ಪ್ರಧಾನ ಕಾರ್ಯದರ್ಶಿಗಳು ಮೈಕಲ್ ವಾಷಿಂಗ್ಟನ್  ಅವರು ಆಗಮಿಸಲಿದ್ದಾರೆ.

Key words: CESC, State-level, Inter-Electricity Company, Sports

The post ಮಾ.25 ರಂದು ರಾಜ್ಯಮಟ್ಟದ ‘ಅಂತರ್ ವಿದ್ಯುತ್ ಕಂಪನಿಗಳ ಕ್ರೀಡಾಕೂಟ’ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮಾ.28 ರಂದು ಮೇಲುಕೋಟೆ ವೈರಮುಡಿ ಜಾತ್ರಾ ಮಹೋತ್ಸವ: 140 ಬಸ್ ಬಸ್ ಗಳ ಕಾರ್ಯಾಚರಣೆ

ಮಂಡ್ಯ,ಮಾರ್ಚ್,23,2026 (www.justkannada.in): ಮಾರ್ಚ್ 28 ರಂದು ಮೇಲುಕೋಟೆ ವೈರಮುಡಿ ಜಾತ್ರಾ ಮಹೋತ್ಸವ...

ಉಪಚುನಾವಣೆ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆಗಳು ನಮ್ಮ ಕೈ ಹಿಡಿಯಲಿದೆ- ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ,ಮಾರ್ಚ್,23,2026 (www.justkannada.in): ಉಪಚುನಾವಣೆ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ. ಗ್ಯಾರಂಟಿ ಯೋಜನೆಗಳು ನಮ್ಮ...

ದಾವಣಗೆರೆ-ಬಾಗಲಕೋಟೆಯಲ್ಲಿ ಗೆಲುವು ನಮ್ಮದೇ : ಗೆದ್ದೇ ಗೆಲ್ಲುತ್ತೇವೆ- ಮಾಜಿ ಸಿಎಂ BSY

ದಾವಣಗೆರೆ,ಮಾರ್ಚ್,23,2026 (www.justkannada.in):  ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಬಗ್ಗೆ ಜನ...

ಜನಸೇವೆ ಮಾಡಲು ಕೈ ಅಭ್ಯರ್ಥಿ ಉಮೇಶ್ ಮೇಟಿಗೆ ವೋಟ್ ಮಾಡಿ-ಸಚಿವ ಎಂ. ಬಿ ಪಾಟೀಲ್ ಮನವಿ

ಬಾಗಲಕೋಟೆ,ಮಾರ್ಚ್,23,2026 (www.justkannada.in):   ಅನಿರೀಕ್ಷಿತವಾಗಿ ಬಾಗಲಕೋಟೆ ಉಪ ಚುನಾವಣೆ ಬಂದಿದೆ. ಜನರ ಸೇವೆ...