31
March, 2026

A News 365Times Venture

31
Tuesday
March, 2026

A News 365Times Venture

ಮಿಡಿದ ಮಾನವೀಯ ಸ್ಪಂದನೆ:  ಮತ್ತಿಗೋಡು ಶಿಬಿರಕ್ಕೆ “ಗಜೇಂದ್ರ “ ಸ್ಥಳಾಂತರ

Date:

 

ಬೆಂಗಳೂರು, ಮಾ.31: ಒಂಟಿತನದಲ್ಲಿ ಕಳೆಯುತ್ತಿದ್ದ ವೃದ್ಧ ಗಜೇಂದ್ರನಿಗೆ ಇಂದು ಹೊಸ ಜೀವನದ ಅಧ್ಯಾಯ ಆರಂಭವಾಗಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಮಾನವೀಯ ಸ್ಪಂದನೆಯಿಂದ, ಚಾಮರಾಜನಗರ ಜಿಲ್ಲೆಯ ಬೂದಿಪಡಗ ಆನೆ ಶಿಬಿರದಲ್ಲಿದ್ದ 63 ವರ್ಷದ ಗಜೇಂದ್ರನನ್ನು ನಾಗರಹೊಳೆ ವ್ಯಾಪ್ತಿಯ ಮತ್ತಿಗೋಡು ಶಿಬಿರಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ರಾಜ್ಯದ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಹಲವು ಬಾರಿ ಭಾಗವಹಿಸಿ ಜನಮನ ಗೆದ್ದಿದ್ದ ಗಜೇಂದ್ರ, ಕಳೆದ ಕೆಲ ಸಮಯದಿಂದ ಒಂಟಿತನದಲ್ಲಿ ಬದುಕುತ್ತಿದ್ದ. ಗುಂಪಿನಲ್ಲಿ ವಾಸಿಸುವ ಸೂಕ್ಷ್ಮ ಮನಸ್ಸಿನ ಪ್ರಾಣಿ ಆಗಿರುವ ಆನೆಗೆ, ಈ ಏಕಾಂತ ಜೀವನ ನೋವಿನದ್ದಾಗಿತ್ತು. ಒಂಟಿತನದಿಂದ ಗಜೇಂದ್ರ ದೇಹಶಕ್ತಿ ಕಳೆದುಕೊಂಡು, ಕಾಡಿನಲ್ಲಿ ಬದುಕುವ ಸಾಮರ್ಥ್ಯದಿಂದ ಕ್ಷೀಣಿಸಿದ್ದ.

ಗಜೇಂದ್ರನ ಸ್ಥಿತಿ ಕಂಡು ಕಳವಳಗೊಂಡ ಸಾರ್ವಜನಿಕರು ಮತ್ತು ಪ್ರಾಣಿ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಿ, “ಅವನಿಗೆ ಸಂಗಾತಿ ಬೇಕು, ಸುರಕ್ಷಿತ ಆಶ್ರಯ ಬೇಕು” ಎಂದು ಮನವಿ ಸಲ್ಲಿಸಿದರು. ಈ ಮನವಿಗೆ ಹೃದಯಪೂರ್ವಕವಾಗಿ ಸ್ಪಂದಿಸಿದ ಸಚಿವರು, ಕಳೆದ ಮಾ.26ರಂದು ತಕ್ಷಣ ಕ್ರಮ ಕೈಗೊಳ್ಳುವಂತೆ ಲಿಖಿತ ಆದೇಶ ನೀಡಿದ್ದರು.

ಇಂದು ಮಧ್ಯಾಹ್ನ, ಬೂದಿಪಡಗ ಶಿಬಿರದಲ್ಲಿ ಗಜೇಂದ್ರನಿಗೆ ಪೂಜೆ ಸಲ್ಲಿಸಿ, ಅರಣ್ಯ ಇಲಾಖೆಯ ವಿಶೇಷ ವಾಹನದಲ್ಲಿ ಮತ್ತಿಗೋಡು ಶಿಬಿರಕ್ಕೆ ಕರೆದೊಯ್ಯಲಾಯಿತು.

ಈ ಸ್ಥಳಾಂತರವು ಕೇವಲ ಆಡಳಿತಾತ್ಮಕ ಕ್ರಮವಲ್ಲ, ಒಂದು ಜೀವಿಗೆ ಮತ್ತೆ ಸಂತೋಷ, ಸಂಗಾತಿ ಮತ್ತು ಭದ್ರತೆ ನೀಡಿದ ಮಾನವೀಯ ಹೆಜ್ಜೆಯಾಗಿದೆ.

ಗಜೇಂದ್ರನ ಹೊಸ ಬದುಕಿಗೆ ಶುಭ ಹಾರೈಸುತ್ತಾ, ಸಾರ್ವಜನಿಕರು ಸಚಿವರ ಈ ಕರುಣೆಯ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೃತಜ್ಞತೆ ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.

Key words: Gajendra, gets a New Life, Shifted to Safer Camp, Forest Minister Eshwar Khandre, elephant Gajendra, Budipadaga camp, Mattigodu camp, Nagarahole.

SUMMARY:

Gajendra Gets a New Life: Shifted to Safer Camp

Bengaluru, March 31: Responding to public appeals, Forest Minister Eshwar Khandre ordered the relocation of 63-year-old elephant Gajendra from the Budipadaga camp in Chamarajanagar to the Mattigodu camp in Nagarahole.

Gajendra, once a proud participant in the famous Mysuru Dasara, had been living alone and growing weak. As elephants are social animals, his isolation raised concerns among the public and animal lovers, who urged authorities to shift him to a safer, more suitable environment.

Acting swiftly on these appeals, the minister directed officials to take action. On Tuesday, after a brief पूजा, Gajendra was safely transported to Mattigodu camp.

The move is widely appreciated as a humane step, giving the aging elephant a chance to live with care, safety, and companionship.

The post ಮಿಡಿದ ಮಾನವೀಯ ಸ್ಪಂದನೆ:  ಮತ್ತಿಗೋಡು ಶಿಬಿರಕ್ಕೆ “ಗಜೇಂದ್ರ “ ಸ್ಥಳಾಂತರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳಾಗಿದ್ದಾರೆ- ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ ಮಾರ್ಚ್,30,2026 (www.justkannada.in): ನಮ್ಮ ಜನಪರವಾದ ಗ್ಯಾರಂಟಿ ಯೋಜನೆಗಳನ್ನು ಪ್ರಧಾನಿ ಮೋದಿ...

ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು ನಿವೃತ್ತಿ: ಆತ್ಮೀಯ ಬೀಳ್ಕೊಡುಗೆ

ಮೈಸೂರು, ಮಾರ್ಚ್, 31,2026 (www.justkannada.in):  ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ...

ಜನಗಣತಿ–2027: ಸ್ವಯಂ-ಗಣತಿಯಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಅವಕಾಶ

ಮೈಸೂರು, ಮಾರ್ಚ್,31,2026 (www.justkannada.in): ಜನಗಣತಿ-2027 ರ ಅಂಗವಾಗಿ ಸಾರ್ವಜನಿಕರು ಸುರಕ್ಷಿತ ವೆಬ್...

KSOU: ಏ.2 ರಂದು IAS, KAS ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಶಿಬಿರ ಸಮಾರೋಪ ಸಮಾರಂಭ ಮತ್ತು ಪುಸ್ತಕ ಬಿಡುಗಡೆ

ಮೈಸೂರು,ಮಾರ್ಚ್,31,2026 (www.justkannda.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ...