5
March, 2026

A News 365Times Venture

5
Thursday
March, 2026

A News 365Times Venture

ಮೇಲಾಧಿಕಾರಿಗಳ ಕಿರುಕುಳ ಆರೋಪ: ಡೆತ್ ನೋಟ್ ಬರೆದಿಟ್ಟು ಅರಣ್ಯ ವೀಕ್ಷಕ ಆತ್ಮಹತ್ಯೆ

Date:

ಮೈಸೂರು,ಏಪ್ರಿಲ್,30,2025 (www.justkannada.in):  ನನ್ನ ಸಾವಿಗೆ ಎಸಿಎಫ್ ಮೇಡಮ್  ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಅರಣ್ಯ ವೀಕ್ಷಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆ ಸರಗೂರು ತಾಲೂಕಿನಲ್ಲಿ ನಡೆದಿದೆ.

ಮೇಲಾಧಿಕಾರಿಗಳು ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಅರಣ್ಯ ವೀಕ್ಷಕ ಪಿ.ಸುರೇಶ್ (34) ಆತ್ಮಹತ್ಯೆಗೆ ಶರಣಾಗಿದ್ದಾರೆ.  ಎಸಿಎಫ್ ಅಮೃತ ಮಾಯಪ್ಪನವರ್ ವಿರುದ್ಧ ಈ ಆರೋಪ ಕೇಳಿ ಬಂದಿದೆ

ಸುರೇಶ್, ಗುಂಡ್ಲುಪೇಟೆ ತಾಲೂಕು ಬೆರಂಬಾಡಿ ಗ್ರಾಮದ ನಿವಾಸಿಯಾಗಿದ್ದು, ಅರಣ್ಯ ಸಿಬ್ಬಂದಿಗೆ ನೀಡಿದ ಕ್ವಾರ್ಟರ್ಸ್ ನಲ್ಲಿಯೇ ಸಾವನ್ನಪ್ಪಿದ್ದು ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಸುರೇಶ್ ಸಾವಿಗೆ ಎಸಿಎಫ್ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಸರಗೂರು ಪೊಲೀಸ್  ಠಾಣೆಯಲ್ಲಿ ಹೊಟ್ಟೆನೋವು ತಾಳಲಾರದೇ ಸಾವು ಎಂದು ಪ್ರಕರಣ ದಾಖಲಾಗಿದೆ. ಡೆತ್ ನೋಟ್ ಇದ್ದರೂ ಹೊಟ್ಟೆ ನೋವು ಎಂದು ಎಫ್ ಐ ಆರ್‌ನಲ್ಲಿ ಉಲ್ಲೇಖ ಮಾಡಿದ್ದು ಹಿರಿಯ ಅಧಿಕಾರಿಗಳ ರಕ್ಷಣೆಗೆ ಮುಂದಾದ್ರಾ ಪೊಲೀಸ್ ಅಧಿಕಾರಿಗಳು ಎಂಬ ಅನುಮಾನ ಹುಟ್ಟಿಕೊಂಡಿದೆ. ಇನ್ನು ಸುರೇಶ್ ಸಾವಿಗೆ ನ್ಯಾಯ ಕೊಡಿಸಿ ಎಂದು ಕುಟುಂಬಸ್ಥರು, ಸ್ಥಳೀಯರು ಆಗ್ರಹಿಸಿದ್ದಾರೆ.

Key words: Forest Watcher, commits, suicide ,  death note

The post ಮೇಲಾಧಿಕಾರಿಗಳ ಕಿರುಕುಳ ಆರೋಪ: ಡೆತ್ ನೋಟ್ ಬರೆದಿಟ್ಟು ಅರಣ್ಯ ವೀಕ್ಷಕ ಆತ್ಮಹತ್ಯೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಳೆ ‘ರಾಜ್ಯ ಬಜೆಟ್’ ಮಂಡನೆಗೆ ಸಿಎಂ ಸಿದ್ದರಾಮಯ್ಯ ಸಜ್ಜು

ಬೆಂಗಳೂರು, ಮಾರ್ಚ್,5, 2026 (www.justkannada.in):  ನಾಳೆ 2026-27ನೇ ಸಾಲಿನ ರಾಜ್ಯ ಬಜೆಟ್‌...

ಸರ್ಕಾರಿ ವೈದ್ಯರು ಮುಷ್ಕರ ಮಾಡಲ್ಲ ಎಂಬ ವಿಶ್ವಾಸವಿದೆ- ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು,ಮಾರ್ಚ್,5,2026 (www.justkannada.in): ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ವೈದ್ಯರಯ ಮಾರ್ಚ್...

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ, ಪರಿಶೀಲನೆ

ಬೆಂಗಳೂರು, ಮಾರ್ಚ್​, 5,2026 (www.justkannada.in):  ಬೆಳ್ಳಂಬೆಳಿಗ್ಗೆ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್...

ಫೋನ್ ಕದ್ದಾಲಿಕೆ ಅವಶ್ಯಕತೆ ಏನಿದೆ? ಸಚಿವ ರಾಮಲಿಂಗರೆಡ್ಡಿ

ರಾಮನಗರ,ಮಾರ್ಚ್,4,2026 (www.justkannada.in): ಕಾಂಗ್ರೆಸ್ ಸರ್ಕಾರದಲ್ಲಿ ಫೋನ್ ಕದ್ದಾಲಿಕೆ ಇದೆ ಎಂದು ಕೇಂದ್ರ...