4
March, 2026

A News 365Times Venture

4
Wednesday
March, 2026

A News 365Times Venture

ಮೈಸೂರಿನಲ್ಲಿ ನೂತನ ಶಾಲೆ ಕ್ವೈಸ್ಟ್ ಅಕಾಡೆಮಿ ಆರಂಭ

Date:

ಮೈಸೂರು ,ಜೂನ್,4,2025 (www.justkannada.in) : ಬೆಳಿಗ್ಗೆಯೇ ಎದ್ದು ತರಗತಿಗೆ ಹೋಗಲು  ಬಂದು ಕಾದು ಕುಳಿತಿದ್ದ ಮಕ್ಕಳು ಒಂದೆಡೆ ಇನ್ನೇನು ಮಳೆ ಸುರಿಸಿಯೇ ಬಿಡುತ್ತೇವೆ ಎಂಬಂತೆ ಆಗ್ಗಾಗ್ಗೆ ಸೂರ್ಯನನ್ನು ಮರೆಮಾಚುತ್ತಿದ್ದ ಮೋಡಗಳು ಇನ್ನೊಂದೆಡೆ. ಮಕ್ಕಳ ಮಾತುಕತೆ ಆಟದ ಮಧ್ಯೆ, ಅವರನ್ನು ಶಿಸ್ತಾಗಿ ಕೂರಿಸಲು ಶಿಕ್ಷಕರು ಹೊರಡಿಸುತ್ತಿದ್ದ ಆಜ್ಞೆಗಳು ವಿಶಾಲ ಬಯಲಿನಲ್ಲಿ ಚದುರಿಹೋದವು. ಇದು ಕಂಡು ಬಂದಿದ್ದು ಮೈಸೂರಿನ ಕ್ವೈಸ್ಟ್  ಅಕಾಡೆಮಿ ಶಾಲೆಯಲ್ಲಿ.

ಹೌದು,  ನಗರದ ಸುಭಾಷ್ ನಗರದಲ್ಲಿ ನೂತನವಾಗಿ ಆರಂಭವಾಗಿರುವ ಕ್ವೈಸ್ಟ್  ಅಕಾಡೆಮಿ ಶಾಲೆಯಲ್ಲಿ ಬುಧವಾರ ‘ಶಾಲಾ ಪ್ರಾರಂಭೋತ್ಸವ“ಆಯೋಜಿಸಲಾಗಿತ್ತು. ಶಾಲೆ ಪ್ರವೇಶಕ್ಕೆ ಕಾತರರಾಗಿದ್ದ ಮಕ್ಕಳಿಗೆ ಕಾರ್ಯದರ್ಶಿ ಕನ್ನಿಕಾ ಪರಮೇಶ್ವರಿ ಹಾಗೂ ಪ್ರಾಂಶುಪಾಲರಾದ ಎಚ್ ಸಿ ವೀಣಾ ಮಣಿ , ಮೈಸೂರು ವಿಶ್ವವಿದ್ಯಾನಿಲಯದ  ಸಿಂಡಿಕೇಟ್ ಮಾಜಿ ಸದಸ್ಯ ಎಚ್ .ಎ. ವೆಂಕಟೇಶ್, ಹಾಗೂ ಶಿಕ್ಷಕರು ಪೋಷಕರು ಸ್ವಾಗತ ಕೋರಿದರು

ಕ್ವೈಸ್ಟ್  ಅಕಾಡೆಮಿ ಕಾರ್ಯದರ್ಶಿ ಕನ್ನಿಕಾ ಪರಮೇಶ್ವರಿ ಮಾತಾನಾಡಿ, ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆ ಹಾಗೂ ಕ್ರೀಡಾ ಚಟುವಟಿಕೆ ಬಗ್ಗೆಯೂ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಾವು ಅಗಾಗ್ಗೆ ಅಯೋಜನೆ ಮಾಡಲಾಗಿದೆ. ತರಗತಿಯಲ್ಲಿ ಶಿಕ್ಷರಾದವರು ಸ್ಫೂರ್ತಿದಾಯಕವಾಗಿದ್ದರೆ ಮಕ್ಕಳು ಶ್ರದ್ಧೆಯಿಂದ ಪಾಠ ಕಲಿಯಲು ಸಾಧ್ಯ ಎಂದರು.

ನಮ್ಮ ಅಕಾಡೆಮಿ ವಾತವರಣ ಕಂಡು ಪೋಷಕರು ಕೂಡ ಸಂತೋಷ ಪಟ್ಟಿದ್ದಾರೆ  ಇನ್ನು ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಬರಲಿದ್ದು  ಈಗಾಗಲೇ ಎಲ್ ಕೆಜಿಯಿಂದ ಏಳನೇ ತರಗತಿವರೆಗೆ ದಾಖಲಾತಿ ಆರಂಭವಾಗಿದ್ದು  ಉತ್ತಮ ಪ್ರತಿಕ್ರಿಯೆ ಇದೆ. ಚೆನ್ನಾಗಿ ಓದಿದರೆ ರಾಜನಾಗುತ್ತೀರಿ. ಇಲ್ಲವೇ ಸೇವಕನಾಗುತ್ತೀರಿ. ಯಾರೂ ಕದಿಯಲಾಗದ ಬೆಂಕಿ ಸುಡಲಾರದ ನೀರಿನಲ್ಲಿ ನೆನೆಯದ ಸಂಪತ್ತು ಎಂದರೆ ಅದು ಶಿಕ್ಷಣ ಮಾತ್ರ. ನೀವು ರಾಜನಾಗುತ್ತೀರೋ ಅಥವಾ ಸೇವಕನಾಗುತ್ತೀರೋ ಎಂಬುದನ್ನು ನೀವೇ ನಿರ್ಧರಿಸಬೇಕು ಎಂದು ಸಲಹೆ ನೀಡಿದರು.

ನನ್ನ ಹಾಗೂ ಸಿದ್ದಾರ್ಥ ಸಂಸ್ಥೆಯ ಕನಸು ಮೈಸೂರಿನ ಮಕ್ಕಳಿಗೂ ಶಿಕ್ಷಣ ನೀಡಬೇಕೆಂಬ ಹಂಬಲ ಹೊಂದಿದ್ದು ಅದು ಇಂದು ನೆರವೇರಿದೆ. ನಮ್ಮ ಸಿದ್ದಾರ್ಥ ಸಂಸ್ಥೆ ಉನ್ನತ್ತ ಶಿಕ್ಷಣದ ಅಕಾಡೆಮಿಯನ್ನು ಸಹ ಹೊಂದಿದ್ದು  ಅಲ್ಲಿಯೂ ಸಹ ವಿದ್ಯಾರ್ಥಿಗಳು ಉತ್ತಮವಾದ ಶಿಕ್ಷಣ ಹಾಗೂ  ಶಿಸ್ತನ್ನು ಹೊಂದಿದ್ದಾರೆ. ಈ ಕ್ವೆಸ್ಟ್ ಅಕಾಡೆಮಿಯಲ್ಲೂ ನುರಿತ ಶಿಕ್ಷಕರಿದ್ದು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ವಿವಿಧ ಚಟುವಟಿಕೆಗಳನ್ನು ಅಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು

ವಿಶೇಷವಾಗಿ ನಮ್ಮ ಸಿದ್ದಾರ್ಥ ಸಂಸ್ಥೆಯಲ್ಲಿ ಒಂದನೇ ತರಗತಿಯಿಂದ ಉನ್ನತ್ತ ಶಿಕ್ಷಣದ ವರೆಗೆ ನಮ್ಮಲ್ಲಿ  ವ್ಯವಸ್ಥೆ ಇದ್ದು ಅದರಲ್ಲೂ ಹೆಚ್ಚು ಅಂಕ ಗಳಿಸಿದ ಬಡ ವಿದ್ಯಾರ್ಥಿಗಳಿಗೆ ಉನ್ನತ್ತ ವ್ಯಾಸಂಗಕ್ಕಾಗಿ ಉಚಿತವಾಗಿ ದಾಖಲಾತಿ ಕೂಡ ಮಾಡಲಾಗಿದ್ದು ಮುಂದೆಯು ಹೀಗೆ ಇರುತ್ತದೆ. ಇದ್ದಷ್ಟು ದಿನ ನಮ್ಮ ಕೈಯಲಾದಷ್ಟು ಸಹಾಯ ಮಾಡಿಕೊಂಡು ಬಂದಿದ್ದೇವೆ ಎಂದರು

ಹೆಚ್ಚೆಚ್ಚು ಭಾಷೆ ಕಲಿಯಬೇಕು. ಆದರೆ ಕನ್ನಡದಲ್ಲಿ ಸದಾ ಮುಂದಿರಬೇಕು. ಕನ್ನಡದಲ್ಲಿ ಕಲಿತರೆ ಮಕ್ಕಳು ಪ್ರತಿಭಾವಂತರಾಗುವುದಿಲ್ಲ ಎನ್ನುವುದು ತಪ್ಪು ಕಲ್ಪನೆ. ನಮ್ಮ ಅಕಾಡೆಮಿಯಲ್ಲಿ ಉತ್ತಮವಾದ ಶಿಕ್ಷಣ ನೀಡಲು ಮುಂದಾಗಿದ್ದು ಪೋಷಕರಿಂದಲೂ ಉತ್ತಮ ಪ್ರತಿಕ್ರಿಯೆ ಕೂಡ ಇದೆ. ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಕ್ರೀಡಾ ಮನೋಭಾವನೆ, ಸಾಂಸ್ಕೃತಿಕ ಚಟುವಟಿಕೆ ಬಗ್ಗೆ ಅರಿವೂ ಮೂಡಿಸಲಿದ್ದು ಉತ್ತಮ ಫಲಿತಾಂಶ ಬರುವ ನಿಟ್ಟಿನಲ್ಲಿ ನಮ್ಮ ಶಿಕ್ಷಕರು ಕೂಡ ಕೆಲಸ ಮಾಡಲಿದ್ದಾರೆ ಎಂದರು.

ಕ್ವೈಸ್ಟ್  ಅಕಾಡೆಮಿ ಪ್ರಾಂಶುಪಾಲರು ಮತ್ತು ನಿರ್ದೇಶಕರಾದ ಎಚ್.ಸಿ ವೀಣಾ ಮಣಿ, ಮಾತನಾಡಿ ದಾಖಲಾತಿ ತುಂಬಾ ಉತ್ತಮವಾಗಿದೆ ಇದುವರೆಗೂ 100 ಮಕ್ಕಳು ದಾಖಲಾತಿಯಾಗಿದ್ದು ಪೋಷಕರಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದೆ. ಶಿಕ್ಷಣದ ಜೊತೆಗೆ ಇತರೆ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಆಸಕ್ತಿ ತೋರುವಂತಹ ಕಾರ್ಯಕ್ರಮಗಳನ್ನು ಕೂಡ ಅಯೋಜನೆ ಮಾಡುತ್ತಿದ್ದೇವೆ ಎಂದರು.vtu

Key words: New school, Quest Academy, opens, Mysore

The post ಮೈಸೂರಿನಲ್ಲಿ ನೂತನ ಶಾಲೆ ಕ್ವೈಸ್ಟ್ ಅಕಾಡೆಮಿ ಆರಂಭ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕೊಡಗು ಜಿಲ್ಲೆಯಲ್ಲಿ ಏ.8 ರಿಂದ 3 ದಿನಗಳ ಕಾಲ ಪಾಸ್‌ ಪೋರ್ಟ್‌ ಮೇಳ

ಮೈಸೂರು, ಫೆಬ್ರವರಿ,4,2026 (www.justkannada.in): ಕಿತ್ತಳೆ ನಾಡು ಕೊಡಗು ಜಿಲ್ಲೆಯ ನಾಗರಿಕರಿಗೆ ಸಂತಸದ...

2022ನೇ ಸಾಲಿನ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಅವಕಾಶ

ಬೆಂಗಳೂರು, ಮಾರ್ಚ್, 3,2026 (www.justkannada.in): 2022ನೇ ವರ್ಷದಲ್ಲಿ ಪ್ರಥಮ ಮುದ್ರಣಗೊಂಡು ರಾಜ್ಯ...

ಮನುಷ್ಯನ ಶ್ರೇಷ್ಠತೆಯ ವ್ಯಸನಕ್ಕೆ ತಮ್ಮ ಅನುಭಾವದ ಮೂಲಕ ಮದ್ದು ಅರೆದವರು ಕೈವಾರ ತಾತಯ್ಯ- ಕೆ.ವಿ.ಪ್ರಭಾಕರ್

ಕೋಲಾರ ಮಾರ್ಚ್, 3,2026 (www.justkannada.in):   ಮನುಷ್ಯನ ಶ್ರೇಷ್ಠತೆಯ ವ್ಯಸನಕ್ಕೆ ತಮ್ಮ ಅನುಭವದ...

ಮನೆಗಳ ಮುಂದೆ ಅಳವಡಿಸಿದ್ದ ನೀರಿನ ಮೀಟರ್ ಕಳ್ಳತನ

ಮೈಸೂರು,ಮಾರ್ಚ್,3,2026 (www.justkannada.in): ಮೈಸೂರು ನಗರದ 50ನೇ ವಾರ್ಡ್‌ನ ಬೆಸ್ತಕೇರಿ ಪ್ರದೇಶದಲ್ಲಿ ನೀರಿನ...