14
February, 2026

A News 365Times Venture

14
Saturday
February, 2026

A News 365Times Venture

ಮೈಸೂರಿನಲ್ಲಿ ಫೆ.16 ರಂದು 38ನೇ ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮಾರಂಭ

Date:

ಮೈಸೂರು,ಫೆಬ್ರವರಿ,14,2026 (www.justkannada.in) :  ಮೈಸೂರಿನಲ್ಲಿ 38ನೇ ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮಾರಂಭ-2026 ವನ್ನು ಆಯೋಜಿಸಿದೆ ಎಂದು ಅಂಚೆ ಇಲಾಖೆ, ಮೈಸೂರು ವೃತ್ತದ ಸ್ಥಾನಿಕ ನಿರ್ದೇಶಕ ಸಂದೇಶ್ ಮಹಾದೇವಪ್ಪ ತಿಳಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಸಂದೇಶ್ ಮಹಾದೇವಪ್ಪ, ಕರ್ನಾಟಕ ಅಂಚೆ ವೃತ್ತವು ಫೆಬ್ರವರಿ 16 ರಿಂದ 20 ಫೆಬ್ರವರಿ 2026ರ ವರೆಗೆ ಮೈಸೂರಿನ ಅಂಚೆ ತರಬೇತಿ ಕೇಂದ್ರ (PTC), ಮೈಸೂರು ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಆವರಣದಲ್ಲಿ 38ನೇ ಎಐಪಿಸಿಎಂ-2026 ಯನ್ನು ಆಯೋಜಿಸಲಾಗಿದೆ.   ಉದ್ಘಾಟನಾ ಸಮಾರಂಭವು 16 ಫೆಬ್ರವರಿ 2026ರಂದು ಬೆಳಿಗ್ಗೆ 10.00 ಗಂಟೆಗೆ ನಡೆಯಲಿದ್ದು, ವಿದ್ವಾನ್ ಮೈಸೂರು ಎಂ. ನಾಗರಾಜ್ ಹಾಗೂ ವಿದ್ವಾನ್ ಡಾ. ಮೈಸೂರು ಎಂ. ಮಂಜುನಾಥ್ ಅಂತಾರಾಷ್ಟ್ರೀಯ ಖ್ಯಾತಿಯ ವಾದಕರಾದ “ಮೈಸೂರು ಸಹೋದರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮವು ದೇಶದಾದ್ಯಂತ ಅಂಚೆ ನೌಕರರ ನಡುವೆ ಸಾಂಸ್ಕೃತಿಕ ಸ್ಪರ್ಧೆ, ಸ್ನೇಹಭಾವ, ಏಕತೆ ಹಾಗೂ ಒಗ್ಗಟ್ಟಿನ ಮನೋಭಾವನೆ ಬೆಳೆಸುವ ಗುರಿಯನ್ನು ಹೊಂದಿದೆ. ಈ ಸಾಂಸ್ಕೃತಿಕ ಸಮಾರಂಭದಲ್ಲಿ ವಿವಿಧ ರೀತಿಯ ಪ್ರದರ್ಶನಗಳ ಮೂಲಕ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲಾಗುತ್ತಿದ್ದು, ಅಂಚೆ ಇಲಾಖೆಯೊಳಗಿನ ಸೃಜನಶೀಲತೆ, ಪರಂಪರೆ ಮತ್ತು ಒಗ್ಗಟ್ಟಿನ ಮನೋಭಾವವನ್ನು ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ. ದೇಶದ ವಿವಿಧ ಭಾಗಗಳಿಂದ 21 ಅಂಚೆ ವೃತ್ತಗಳನ್ನು ಪ್ರತಿನಿಧಿಸುವ ಒಟ್ಟು 335 ಸಿಬ್ಬಂದಿಗಳು ಮತ್ತು ಅವರ ಮಕ್ಕಳು ಈ ಐದು ದಿನಗಳ ಸಾಂಸ್ಕೃತಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.

ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು 21 ರಾಜ್ಯಗಳಿಂದ 32  ಕ್ಯಾಟಗರಿ. ಗಾಯನ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಕೂಚಿಪಲಕುಡಿ, ಸೋಲೊ ಗಾನ, ಕಿರುನಾಟಕ ಕಾರ್ಯಕ್ರಮಗಳು ಜರುಗಲಿದ್ದು ಪುರುಷ ಮತ್ತು ಮಹಿಳೆಯರು ಪಾಲ್ಗೊಳ್ಳುತ್ತಿದ್ದಾರೆ.

ಮಹಾ ನಿರ್ದೇಶಕ ಜಿತೇಂದ್ರ ಗುಪ್ತ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಮುಕ್ತ ವಿವಿಯ ಕಾವೇರಿ ಸಭಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಮೊದಲ ಎರಡು ಕಾರ್ಯಕ್ರಮ ನಳ-1, ನಳ-1 ರಲ್ಲಿ ಇರುತ್ತದೆ‌. ನಂತರದ ಕಾರ್ಯಕ್ರಮ ಪಿಟಿಸಿ ಸಭಾಂಗಣದಲ್ಲಿ ನಡೆಯಲಿದೆ. ಪಂಡಿತ ವೆಂಕಟೇಶ್ ಕುಮಾರ್ ಅವರು ಪಾಲ್ಗೊಂಡು ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸುವರು.

1987, 1995 ಮತ್ತು 2008ರಲ್ಲಿ ಮೈಸೂರಿನಲ್ಲಿ ಭಾರತೀಯ ಅಂಚೆ ಸಾಂಸ್ಕೃತಿಕ ಸಮ್ಮೇಳನ ನಡೆದಿತ್ತು.  ಇದೀಗ 20 ವರ್ಷದ ನಂತರ ಮೈಸೂರಿನಲ್ಲಿ ನಡೆಯುತ್ತಿದೆ.37ನೇ ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮಾರಂಭ(2024-25)ಮಾರ್ಚ್ 2025ರಲ್ಲಿ ಕೇರಳದ ಕೋಝಿಕ್ಕೋಡ್ ನಲ್ಲಿ ಆಯೋಜಿಸಲಾಗಿತ್ತು ಎಂದು ಸಂದೇಶ್ ಮಹಾದೇವಪ್ಪ ತಿಳಿಸಿದರು.

Key words: 38th, All India Postal Cultural Festival , Mysore, Feb. 16

The post ಮೈಸೂರಿನಲ್ಲಿ ಫೆ.16 ರಂದು 38ನೇ ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮಾರಂಭ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ರೈತರ ಆತ್ಮಹತ್ಯೆ, ಸರ್ಕಾರಿ ಹುದ್ದೆಗಳ ನೇಮಕಾತಿ ಇಲ್ಲ: ‘ಕೈ’ ಸರ್ಕಾರದ ಸಮಾವೇಶಕ್ಕೆ ಕುಟುಕಿದ JDS

ಹಾವೇರಿ,ಫೆಬ್ರವರಿ,14,2026 (www.justkannada.in):  ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಸಾವಿರ ದಿನಗಳನ್ನು...

ಫೆ.15 ರಂದು ಬೆಂಗಳೂರಿಲ್ಲಿ ಮಾಂಸ ಮಾರಾಟ ನಿಷೇಧ

ಬೆಂಗಳೂರು,ಫೆಬ್ರವರಿ,13,2026 (www.justkannada.in):  ಫೆಬ್ರವರಿ 15 ರಂದು ಮಹಾಶಿವರಾತ್ರಿ ಹಬ್ಬ ಹಿನ್ನೆಲೆಯಲ್ಲಿ ರಾಜ್ಯ...

ರಾಜ್ಯ ಬಜೆಟ್ ಮಂಡನೆಗೆ ದಿನಾಂಕ ಫಿಕ್ಸ್

ಬೆಂಗಳೂರು,ಫೆಬ್ರವರಿ,13,2026 (www.justkannada.in): ಸಿಎಂ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಜೆಟ್​​​ ಮಂಡಿಸಲು...

ಸರ್ಕಾರ ಹೋದ್ರೂ ತೊಂದರೆ ಇಲ್ಲ: ಡಿಕೆಶಿ ಶತಾಯಗತಾಯ ಸಿಎಂ ಆಗಲು ಹೊರಟಿದ್ದಾರೆ- ಶಾಸಕ ಯತ್ನಾಳ್

ಉಡುಪಿ.ಫೆಬ್ರವರಿ,13,2026 (www.justkannada.in): ಸರ್ಕಾರ ಹೋದರೂ ತೊಂದರೆ ಇಲ್ಲ ಡಿಕೆ ಶಿವಕುಮಾರ್  ಶತಾಯಗತಾಯ...