ಮೈಸೂರು,ಫೆಬ್ರವರಿ,14,2026 (www.justkannada.in): ಮೈಸೂರು ನಗರದಲ್ಲಿ ಅಕ್ರಮ ಮಾದಕ ವಸ್ತು ಮಾರಾಟ ಮತ್ತು ಸಾಗಾಟದ ಮೇಲೆ ಮಂಡಿ ಠಾಣಾ ಪೊಲೀಸರಿಂದ ಕಾರ್ಯಾಚರಣೆ ಮುಂದುವರೆದಿದ್ದು, ದಾಳಿ ನಡೆಸಿ 4 ಲಕ್ಷ ಮೌಲ್ಯದ 41.31 ಗ್ರಾಂ ಮಾದಕ ವಸ್ತು ಎಂ.ಡಿ.ಎಂ.ಎ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಮೈಸೂರು ನಗರದ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಅಕ್ರಮ ಮಾದಕ ವಸ್ತು ಮಾರಾಟ ಮತ್ತು ಸಾಗಾಟದ ಮೇಲೆ ನಗರದ ಮಂಡಿ ಠಾಣಾ ಪೊಲೀಸರು ದಾಳಿ ನಡಸಿದ್ದು , ಫೆ.11ರಂದು 3.14 ಗ್ರಾಂ ಎಂಡಿಎಂಎ ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಆರೋಪಿಗಳಾದ ಎಂ. ಮೊಹಮ್ಮದ್ ಕರೀಂ, ಎ2. ನಿಷಾದ್ ಪಾಷ ಬಂಧಿಸಿದ್ದರು. ಮೊ.ಸಂ 31/2026 ಕಲಂ: 22(ಬಿ) ಎನ್.ಡಿ.ಪಿ.ಎಸ್ ರೀತ್ಯಾ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಉಳಿದ ಆರೋಪಿಗಳ ದಸ್ತಗಿರಿಗೆ ಕ್ರಮ ಕೈಗೊಂಡು ಕಾರ್ಯಾಚರಣೆ ಮುಂದುವರೆಸಿದ್ದರು.
ಇದೀಗ ಮೊ.ಸಂ 31/2026 ರ 2ನೇ ಆರೋಪಿ ನಿಷಾದ್ ಪಾಷ ಎಂಬಾತನಿಗೆ ಮಾದಕ ವಸ್ತು ಎಂ.ಡಿ.ಎಂ.ಎ ಮಾರಾಟ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಮೊಹಮ್ಮದ್ ರೋಷನ್ ಎಂಬಾತನನ್ನು ಬಂಧಿಸಿದ್ದು ಬಂಧಿತನಿಂದ 4 ಲಕ್ಷ ರೂ ಮೌಲ್ಯದ 41.31 ಗ್ರಾಂ ಎಂ.ಡಿ.ಎಂ.ಎ ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಕ್ರಮ ಕೈಗೊಂಡಿದ್ದಾರೆ.
ಆರೋಪಿ ಮೊಹಮ್ಮದ್ ರೋಷನ್ ಈತನ ಮೇಲೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಮೊ.ಸಂ 194/2024 ಕಲಂ: 22(ಸಿ) ರೀತ್ಯಾ ಎನ್.ಡಿ.ಪಿ.ಎಸ್ ಪ್ರಕರಣಗಳು ದಾಖಲಾಗಿದೆ ಹಾಗೂ ಆರೋಪಿ ಮೊಹಮ್ಮದ್ ರೋಷನ್ ಇನ್ಸ್ ಸ್ಟಾಗ್ರಾಂ ಮೂಲಕ ಅಪರಿಚಿತ ವ್ಯಕ್ತಿಯಿಂದ ಎಂ.ಡಿ.ಎಂ.ಎನ್ನು ಬೆಂಗಳೂರು ನಗರದಲ್ಲಿ ಪಡೆದು ನಂತರ ಅದನ್ನು ಮೈಸೂರಿನಲ್ಲಿ ಮಾರಾಟ ಮಾಡುತ್ತಿದ್ದುದು ತನಿಖೆಯಿಂದ ತಿಳಿದುಬಂದಿದೆ.
ಈ ಕಾರ್ಯಾಚರಣೆಯಲ್ಲಿ ಮಂಡಿ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ದಿವಾಕರ್.ಆರ್, ಪಿ.ಎಸ್.ಐ ರಾಜು ಕೋನಕೇರಿ, ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದು, ಸದರಿ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವೈಖರಿಯನ್ನು ಮೈಸೂರು ನಗರ ಪೊಲೀಸ್ ಆಯುಕ್ತರು ಹಾಗೂ ಉಪ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.
Key words: Mysore ,Police, drugs ,seized, Accused, arrested
The post ಮೈಸೂರು ಪೊಲೀಸರ ಕಾರ್ಯಾಚರಣೆ: 4 ಲಕ್ಷ ಮೌಲ್ಯದ ಮಾದಕ ವಸ್ತು ವಶ: ಆರೋಪಿ ಬಂಧನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




