ಮೈಸೂರು, ಮಾರ್ಚ್,24,2026 (www.justkannada.in): ಮೈಸೂರಿನ ಸಾಂಸ್ಕೃತಿಕ ಮಹತ್ವ ಸಾರುವ ಅಂಗವಾಗಿ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಸಾಂಸ್ಕೃತಿಕ ಸಮಿತಿ ವತಿಯಿಂದ ಒಂದು ವಾರ ಮನೋರಂಜನೆ ವಾರವೆಂದು ಆಚರಿಸಲಾಗುತ್ತಿದೆ.
ಮನೋರಂಜನೆ ವಾರದ ಅಂಗವಾಗಿ ವಿದ್ಯಾರ್ಥಿಗಳು ಒಂದು ವಾರದ ಕಾಲ ತಮಗೆ ಇಷ್ಟವಾದ ಬಟ್ಟೆಗಳನ್ನು ಧರಿಸಿ ಸಂತೋಷ ಪಡುತ್ತಿದ್ದಾರೆ. 23ನೇ ಮಾರ್ಚ್ ಸೋಮವಾರ ಫಿಲ್ಮಿ/ರೆಟ್ರೋ ದಿನ, ಹಳೆಯ ಸಿನೆಮಾ ಅಥವಾ ಹಳೆಯ ಕಾಲದ ಶೈಲಿಯಲ್ಲಿ ಉಡುಪು ಧರಿಸುವುದು.
24ನೇ ಮಾರ್ಚ್ ಮಂಗಳವಾರ ಕಪ್ಪು ಮತ್ತು ಬಿಳಿ ದಿನ, ಕಪ್ಪು ಮತ್ತು ಬಿಳಿ ಬಣ್ಣದ ಉಡುಪು ಧರಿಸುವುದು, 25ನೇ ಮಾರ್ಚ್ (ಬುಧವಾರ) ಟ್ವಿನ್ನಿಂಗ್ ದಿನವಾಗಿದ್ದು ಒಬ್ಬ ಮಹಿಳಾ ಸ್ನೇಹಿತೆಯ ಜೊತೆ ಒಂದೇ ರೀತಿಯ ಉಡುಪು ಧರಿಸುವುದು.
26ನೇ ಮಾರ್ಚ್ (ಗುರುವಾರ) – ಮಿಸ್ಮ್ಯಾಚ್ ದಿನ ಅಂದರೆ ಹೊಂದಿಕೆಯಾಗದ ಬಣ್ಣಗಳು ಅಥವಾ ಬೇರೆಬೇರೆ ಶೈಲಿಯ ಉಡುಪು ಧರಿಸುವುದು. 27ನೇ ಮಾರ್ಚ್ (ಶುಕ್ರವಾರ) – ಪಿಂಕ್ ದಿನ, ಗುಲಾಬಿ ಬಣ್ಣದ ಉಡುಪು ಧರಿಸುವುದು. 28ನೇ ಮಾರ್ಚ್ (ಶನಿವಾರ) ಪಾರಂಪರಿಕ ದಿನ. ಪಾರಂಪರಿಕ/ಸಾಂಪ್ರದಾಯಿಕ ಉಡುಪು ಧರಿಸುವುದು.
ಹೀಗೆ ಪ್ರತಿದಿನ ವಿವಿಧ ರೀತಿಯ ದಿರಿಸನ್ನು ತೊಡುವ ಮೂಲಕ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನೀಯರು ಮನೋರಂಜನೆ ವಾರ ಆಚರಿಸಲಿದ್ದಾರೆ.
Key words: Entertainment Week, Mysore, Maharani Women’s College
The post ಮೈಸೂರು ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ‘ಮನೋರಂಜನೆ ವಾರ’ ಆಚರಣೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




