ನವದೆಹಲಿ, ಏಪ್ರಿಲ್,2, 2025 (www.justkannada.in): ಮೈಸೂರು ವಿಶ್ವವಿದ್ಯಾಲಯದ ಜೆನಿಟಿಕ್ಸ್ ಮತ್ತು ಜೀನೋ ಮಿಕ್ಸ್ ವಿಭಾಗದ ಅಧ್ಯಕ್ಷೆ ಡಾ. ಸುತ್ತೂರು ಎಸ್ ಮಾಲಿನಿ ಅವರಿಗೆ ‘ಫಿನಾಮಿನಲ್ SHE’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಭಾರತೀಯ ರಾಷ್ಟ್ರೀಯ ಬಾರ್ ಅಸೋಸಿಯೇಷನ್ (INBA) ಆಯೋಜಿಸಿದ ಪ್ರತಿಷ್ಠಿತ ‘ಫಿನಾಮಿನಲ್ SHE ಪ್ರಶಸ್ತಿಗಳ ಏಳನೇ ಆವೃತ್ತಿ ವಿಜೃಂಭಣೆಯಿಂದ ನಡೆಯಿತು. ಇದರಲ್ಲಿ ದೇಶದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಮುಂಚೂಣಿಯವರನ್ನು ಗೌರವಿಸಲಾಯಿತು. ಈ ಸಮಾರಂಭಕ್ಕೆ ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರಾದ ಸಂಗೀತಾ ಧಿಂಗ್ರಾ ಹಾಜರಾಗಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಪ್ರತಿಷ್ಠಿತ ಪ್ರಶಸ್ತಿ ವಿಜೇತರ ಪೈಕಿ, ಮೈಸೂರು ವಿಶ್ವವಿದ್ಯಾಲಯದ ಜೆನಿಟಿಕ್ಸ್ ಮತ್ತು ಜೀನೋ ಮಿಕ್ಸ್ ವಿಭಾಗದ ಅಧ್ಯಕ್ಷೆಯಾದ ಡಾ. ಸುತ್ತೂರು ಎಸ್ ಮಾಲಿನಿ ಅವರಿಗೆ ಮಾನವ ತಳಿ ಶಾಸ್ತ್ರದ ಸಂಶೋಧನೆಯಲ್ಲಿ ಅಪೂರ್ವ ಸಾಧನೆ ಹಾಗೂ ಜನಸಾಮಾನ್ಯರಿಗೆ ಅನುವಂಶಿಯ ಕಾಯಿಲೆಗಳ ಬಗ್ಗೆ ಅರಿವನ್ನು ನೀಡುತ್ತಿರುವುದು, ಕನ್ನಡದಲ್ಲಿ ಅನುವಂಶ ಕಾಯಿಲೆಗಳ ಬಗ್ಗೆ ಪುಸ್ತಕಗಳ ರಚನೆ ಯೂಟ್ಯೂಬ್ ಮುಖಾಂತರ ಕರ್ನಾಟಕ ಜನತೆಗೆ ಪರಿಪೂರ್ಣ ಆರೋಗ್ಯದ ಬಗ್ಗೆ ಅರಿವನ್ನು ನೀಡುತ್ತಿರುವುದು, ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿರುವುದು ದೈಹಿಕ ಮಾನಸಿಕ ಸಾಮಾಜಿಕ ಲೈಂಗಿಕ ಮತ್ತು ಆಧ್ಯಾತ್ಮಿಕ ಆರೋಗ್ಯದ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುತ್ತಿರುವ ಅವರ ಸಮಾಜಮುಖಿ ಕೆಲಸಕ್ಕಾಗಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿ ಪ್ರಶಸ್ತಿಯನ್ನು ನೀಡಲಾಗಿದೆ.
ಹಾಗೇ, ಪ್ರಶಸ್ತಿಗೆ ಭಾಜನರಾದ ಮತ್ತೊಬ್ಬರು ಡಾ. ಅನಿತಾ ಪ್ರಸಾದ್, ಭಾರತದಲ್ಲಿ ನಾವೀನ್ಯತೆ ಮತ್ತು ಒಳಗೊಳ್ಳುವಿಕೆಗೆ (Inclusivity) ಪೂರಕವಾಗಿ ಕೆಲಸ ಮಾಡುವ ಪ್ರಭಾವಶಾಲಿ ವ್ಯಕ್ತಿ. ಅವರು ರೋಬೋಟಿಕ್ಸ್, ಕೈಗಾರಿಕಾ ಸ್ವಯಂಚಾಲನೆ (Industrial Automation) ಮತ್ತು ಹೊಸ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ್ದು, ಕಳೆದ ವರ್ಷ ಮಾತ್ರ 42 ಪೇಟೆಂಟ್ ಗಳನ್ನು ಪಡೆದುಕೊಂಡಿದ್ದಾರೆ.
ಫಿನಾಮಿನಲ್ ಶೀ’ ಪ್ರಶಸ್ತಿಗಳು ಕಾನೂನು, ವೈದ್ಯಕೀಯ, ಶಿಕ್ಷಣ, ಉದ್ಯಮಶೀಲತೆ ಮತ್ತು ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉತ್ತುಂಗ ಸಾಧನೆ ಮಾಡಿದ ಮಹಿಳೆಯರನ್ನು ಗೌರವಿಸುತ್ತವೆ.
Key words: Mysore University, Dr. Suttur S Malini, ‘Phenomenal SHE’ award
The post ಮೈಸೂರು ವಿವಿಯ ಡಾ. ಸುತ್ತೂರು ಎಸ್ ಮಾಲಿನಿ ಅವರಿಗೆ ‘ಫಿನಾಮಿನಲ್ SHE’ ಪ್ರಶಸ್ತಿ ಪ್ರದಾನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.