ರಾಮನಗರ,ಮಾರ್ಚ್,21,2026 (www.justkannada.in): ಮೊದಲ ಬಾರಿ ಗೆದ್ದವರಿಗೆ ಅವಕಾಶ ಕೊಡಬೇಕು ಸಿಎಂ ಸಿದ್ದರಾಮಯ್ಯ ಸ್ಪಂದಿಸುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಇಕ್ಬಾಲ್ ಹುಸೇನ್, ಮೂರ್ನಾಲ್ಕು ಬಾರಿ ಗೆದ್ದಂತಹ ಶಾಸಕರು ಸಭೆ ನಡೆಸಿದ್ದಾರೆ. ಸಚಿವ ಸ್ಥಾನದ ಬಗ್ಗ್ಗೆ ಸಿಎಂ ಮುಂದೆ ಬೇಡಿಕೆ ಇಟ್ಟಿದ್ದಾರೆ ಹೀಗಾಗಿ ನಾವು ಮೊದಲ ಬಾರಿ ಎರಡನೇ ಬಾರಿ ಗೆದ್ದವರು ಒಗ್ಗಟ್ಟಾಗಿ ಯಾಕೆ ಸೇರಬಾರದು ಎಂದು ಸಭೆ ಸೇರಿದ್ದೇವೆ ನೋವು ಅಹವಾಲು ಬಗ್ಗೆ ಚರ್ಚೆ ಮಾಡಿದ್ದೇವೆ. ಒಟ್ಟು 55 ಶಾಸಕರು ಸಭೆ ಸೇರಿದ್ದವು ಎಂದರು.
ಡಿಕೆ ಶಿವಕುಮಾರ್ ಮೊದಲ ಬಾರಿ ಶಾಸಕರಾದಾಗ ಬಂಗಾರಪ್ಪನವರ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಕೂಡ ಸಚಿವರಾಗಿದ್ದಾರೆ. ಹೀಗಾಗಿ ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
Key words: First-time, winners, Minister post, MLA, Iqbal Hussain
The post ಮೊದಲಬಾರಿ ಗೆದ್ದವರಿಗೆ ಅವಕಾಶ ಕೊಡಬೇಕು: ಸಿಎಂ ಸ್ಪಂದಿಸುವ ವಿಶ್ವಾಸವಿದೆ- ಶಾಸಕ ಇಕ್ಬಾಲ್ ಹುಸೇನ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




