ಬೆಂಗಳೂರು,ಮಾರ್ಚ್,3,2025 (www.justkannada.in): ಡಿಸಿಎಂ ಡಿಕೆ ಶಿವಕುಮಾರ್ ಅವರ ನಟ್ಟು ಬೋಲ್ಟ್ ಹೇಳಿಕೆಗೆ ತಿರುಗೇಟು ಕೊಟ್ಟಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ, ಮೊದಲು ಅವರ ಪಕ್ಷದಲ್ಲಿ ನಟ್ಟು ಬೋಲ್ಟ್ ಟೈಟ್ ಮಾಡಲಿ ಎಂದು ಕುಟುಕಿದ್ದಾರೆ.
ಈ ಕುರಿತು ಮಾತನಾಡಿದ ಎಂಎಲ್ ಸಿ ಸಿ.ಟಿ ರವಿ, ಡಿಕೆ ಶಿವಕುಮಾರ್ ಅವರ ಪಕ್ಷದಲ್ಲಿ ನಟ್ಟು ಬೋಲ್ಟ್ ಮೊದಲು ಟೈಟ್ ಮಾಡಲಿ. ಡಿ.ಕೆ ಶಿವಕುಮಾರ್ ಕಲಾವಿದರಿಗೆ ಅಪಮಾನ ಮಾಡುವಂತಹ ಕೆಲಸ ಮಾಡಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಒಂದು ಪಕ್ಷ ಕರೆ ಕೊಟ್ಟಾಗ ಕಲಾವಿದರು ಬರಬೇಕೆಂಬ ನಿಯಮವಿಲ್ಲ. ಈ ರೀತಿ ಹುಚ್ಚು ಹುಚ್ಚಾಗಿ ಮಾತನಾಡುವುದನ್ನ ಡಿಕೆ ಶಿವಕುಮಾರ್ ಬಿಡಬೇಕು ಎಂದು ಸಿಟಿ ರವಿ ಕಿಡಿಕಾರಿದರು.
16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭಕ್ಕೆ ನಟ ನಟಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸದಿದ್ದಕ್ಕೆ ಬೇಸರಗೊಂಡಿದ್ದ ಡಿಸಿಎಂ ಡಿಕೆ ಶಿವಕುಮಾರ್, “ಯಾವ ನಟನಿಗೆ, ಯಾವ ನಟಿಗೆ ಎಲ್ಲೆಲ್ಲಿ ನಟ್ಟು, ಬೋಲ್ಟು ಟೈಟ್ ಮಾಡಬೇಕು ಅಂತ ನನಗೆ ಗೊತ್ತಿದೆ ಎಂದು ಹೇಳಿದ್ದರು.
Key words: nuts and bolts, congress, party D.K Shivakumar, CT Ravi
The post ಮೊದಲು ಅವರ ಪಕ್ಷದಲ್ಲಿ ನಟ್ಟು ಬೋಲ್ಟ್ ಟೈಟ್ ಮಾಡಲಿ- ಡಿಕೆಶಿಗೆ ಕುಟುಕಿದ ಸಿಟಿ ರವಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.