ಮೈಸೂರು,ಫೆಬ್ರವರಿ,26,2026 (www.justkannada.in): ಮೊದಲ ಬಾರಿ ಗೆದ್ದವರು ಸಿಎಂ ಆಗುತ್ತಾರೆ, ಸಚಿವರು ಯಾಕೆ ಆಗಬಾರದು? ಮೊದಲ ಬಾರಿಗೆ ಗೆದ್ದವರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನು? ಎಂದು ಶಾಸಕ ಕೆ.ಹರೀಶ್ ಗೌಡ ಪ್ರಶ್ನಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಶಾಸಕ ಹರೀಶ್ ಗೌಡ, ಮೊದಲು ಗೆದ್ದ ಶಾಸಕರೂ ಚುನಾವಣೆಯನ್ನೇ ಗೆದ್ದು ಬಂದಿರುತ್ತಾರೆ. ಅವರಿಗೂ ಕೂಡ ಸಾಕಷ್ಟು ಅನುಭವ ಇರುತ್ತದೆ. ಮೊದಲ ಬಾರಿಗೆ ಗೆದ್ದವರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನು? ನಾನು ಪತ್ರಕ್ಕೆ ಸಹಿ ಹಾಕಿಲ್ಲ ಆದರೆ ನಾನು ಸ್ಥಳದಲ್ಲಿ ಇದ್ದಿದ್ದರೆ ಹಾಕುತ್ತಿದ್ದೆ. ಸಿಎಂ ಸಿದ್ದರಾಮಯ್ಯ ಮೊದಲ ಬಾರಿ ಗೆದ್ದವರಿಗೆ ಸಚಿವ ಸ್ಥಾನ ಇಲ್ಲ ಅಂದಿದ್ದಾರೆ. ಅದು ಯಾವ ಕಾರಣಕ್ಕೆ ಹಾಗೆ ಹೇಳಿದ್ದಾರೆ ಗೊತ್ತಿಲ್ಲ ನನಗೆ ಅವಕಾಶ ಸಿಗದಿದ್ದರೂ, ಮೊದಲು ಗೆದ್ದ ಯಾರಿಗಾದರೂ ಅವಕಾಶ ಸಿಗಲಿ ಎಂದರು.
ನೀವು ಡಿಕೆ ಬಣಾನಾ? ಸಿದ್ದು ಬಣಾನಾ ಅಂತ ಜನ ಕೇಳುತ್ತಿದ್ದಾರೆ. ಕ್ಷೇತ್ರದಲ್ಲಿ ಜನ ನೀವ್ಯಾವ ಬಣ ಅಂತ ಕೇಳುತ್ತಾರೆ. ಅಧಿಕಾರದ ಹಂಚಿಕೆ ವಿಚಾರ ಪ್ರಸ್ತಾಪಿಸಿದ್ದರೆ ಮೊದಲು ಗೊಂದಲ ನಿವಾರಿಸಿ. ನಾನು ಕಾಂಗ್ರೆಸ್ ಪಕ್ಷದ ಬಣ. ನನಗೆ ರಾಹುಲ್ ಗಾಂಧಿ ಭೇಟಿ ಮಾಡಲು ಆಗಲ್ಲ. ಸುರ್ಜೇವಾಲ ಭೇಟಿ ಮಾಡುವ ಅನಿವಾರ್ಯತೆ ಬಂದಿಲ್ಲ. ನಮಗೆ ಡಿಕೆ ಶಿವಕುಮಾರ್ , ಸಿದ್ದರಾಮಯ್ಯ ಅವರೇ ಸಾಕು. ಯಾವುದೇ ವಿಷಯ, ವಿಚಾರವಿದ್ದರೂ ಹೈಕಮಾಂಡ್ ಸ್ಪಷ್ಟಪಡಿಸಬೇಕು. ಜನರು ಗೊಂದಲದಲ್ಲಿದ್ದು, ಅಧಿಕಾರಿ ನಡೆಸಲು ತೊಂದರೆ ಆಗುತ್ತಿದೆ ಎಂದು ಶಾಸಕ ಹರೀಶ್ ಗೌಡ ತಿಳಿಸಿದರು.
Key words: first-time, MLAs, ministerial position, MLA, Harish Gowda
The post ಮೊದಲ ಬಾರಿಗೆ ಗೆದ್ದವರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನು? ಶಾಸಕ ಹರೀಶ್ ಗೌಡ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




