ಮೈಸೂರು,ಫೆಬ್ರವರಿ,12,2026 (www.justkannada.in): ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ ಆರೋಪದ ಮೇಲೆ ಬಿಜೆಪಿ ಐಟಿ ಸೆಲ್ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ದ ಕಾಂಗ್ರೆಸ್ ನಿಯೋಗ ದೂರು ದಾಖಲಿಸಿದೆ.
ಇಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಬಿಜೆಪಿ ಐಟಿ ಸೆಲ್ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ದ ದೂರು ದಾಖಲಿಸಿದೆ.
ದೂರು ದಾಖಲು ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಬಿಜೆಪಿ ಐಟಿ ಸೆಲ್ ನವರು ಡಾ.ಯತೀಂದ್ರ ಸಿದ್ದರಾಮಯ್ಯ ಅವರ ವಿಚಾದಲ್ಲಿ ಕೆಟ್ಟದಾಗಿ ಪೋಸ್ಟ್ ಹಾಕಿ ತಂದೆ ಖಾತೆಯ ಸಚಿವರುಎಂದು ಬಿಂಬಿಸಿ ಅವರು ಸಚಿವರ ಹಾಲಿನಲ್ಲಿ ಕುಳಿತು ಚಾರ್ಜ್ ತೆಗೆದುಕೊಳ್ಳವ ರೀತಿ ಫೋಟೊ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಇಡೀ ರಾಜ್ಯದಲ್ಲಿ ಯತೀಂದ್ರ ಸಿದ್ದರಾಮಯ್ಯರನ್ನ ಬಹಳ ಕೆಟ್ಟದಾಗಿ ಬಿಂಬಿಸುವಂತಹ ಕೆಲಸ ಮಾಡಿದ್ದಾರೆ. ಇದರ ವಿರುದ್ದ ಸೈಬರ್ ಪೊಲೀಸ್ ಠಾಣೆಗೆ ಮತ್ತು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇವೆ ಎಂದರು.
ಹಾಗೆಯೇ ಮಾಜಿ ಸಂಸದರೊಬ್ಬರಿಗೆ ಮಾನ ಮರ್ಯಾದೆ ಇದ್ದರೆ ಲೋಕಸಭೆ ಚುನಾವಣೆಯಲ್ಲಿ ಯಾಕೆ ಟಿಕೆಟ್ ಸಿಗಲಿಲ್ಲ ಎಂದು ಹೇಳಲು ಆಗುತ್ತಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಅವರನ್ನ ಕುಟುಂಬದವರನ್ನ ದಿನನಿತ್ಯ ಬಾಯಿಗೆ ಬಂದ ಹಾಗೆ ಬೈಯುತ್ತಿದ್ದಾರೆ. ಇದರ ವಿರುದ್ದವೂ ನಾನು ದೂರು ಕೊಟ್ಟಿದ್ದೇವೆ ಎಂದರು.
ಸಿದ್ದರಾಮಯ್ಯನವರು 2ನೇ ಬಾರಿ ಸಿಎಂ ಆದ ಮೇಲೆ ಬಿಜೆಪಿಯವರಿಗೆ ಹೊಟ್ಟ ಕಿಚ್ಚು. ಹೀಗಾಗಿ ಅಹಿಂದಾ ನಾಯಕ ಸಿದ್ದರಾಮಯ್ಯರನ್ನ ಸಿಎಂ ಸ್ಥಾನದಿಂದ ತೆಗೆಯಬೇಕು ಎಂಬ ಉದ್ದೇಶದಿಂದ ವಿಪಕ್ಷ ನಾಯಕರಾದ ಆರ್ ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ಸೇರಿ ಬಿಜೆಪಿ ನಾಯಕರು ದಿನನಿತ್ಯ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸುಳ್ಳನ್ನ ನಂಬುವ ರೀತಿ ಪೋಸ್ಟ್ ಹಾಕುತ್ತಿದ್ದಾರೆ. ನಾವೇನಾದರೂ ಪ್ರತಿಕ್ರಿಯಿಸಿದರೇ ನಮ್ಮ ವಿರುದ್ದವೇ ದೂರು ಕೊಡುತ್ತಾರೆ. ಸ್ನೇಹಮಯಿ ಕೃಷ್ಣ ಎಂಬ ಜೋಕರ್ ಕರೆದುಕೊಂಡು ಬಂದು ಸಿದ್ದರಾಮಯ್ಯ ವಿರುದ್ದ ಪಿತೂರಿ ಮಾಡಿದರು. ಆದರೂ ನಮ್ಮ ಕಾರ್ಯಕರ್ತರು ತಾಳ್ಮೆಯಿಂದ ಇದ್ದಾರೆ. ಹೀಗಾಗಿ ಪೊಲೀಸ್ ಅಧಿಕಾರಿಗಳು ಈ ಬಿಜೆಪಿ ನಾಯಕರ ವಿರುದ್ದ ಪ್ರಕರಣ ದಾಖಲಿಸಿ ಜೈಲಿಗಟ್ಟಬೇಕು ಎಂದು ಲಕ್ಷ್ಮಣ್ ಆಗ್ರಹಿಸಿದರು.
Key words: Congress , M Lakshman, Complaint, against, BJP, Mysore
The post ಯತೀಂದ್ರ ಬಗ್ಗೆ ಕೆಟ್ಟದಾಗಿ ಪೋಸ್ಟ್ ಆರೋಪ: ಬಿಜೆಪಿ ಐಟಿ ಸೆಲ್ ವಿರುದ್ದ ಕಾಂಗ್ರೆಸ್ ದೂರು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




