ಮೈಸೂರು,ಜುಲೈ,15,2025 (www.justkannada.in): ಜುಲೈ 19ಕ್ಕೆ ಮೈಸೂರಿನಲ್ಲಿ ಸಾಧನಾ ಸಮಾವೇಶಕ್ಕೆ ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ವಕ್ತಾರ ಎಂ.ಜಿ ಮಹೇಶ್ ಗುಡುಗಿದ್ದಾರೆ.
ಮೈಸೂರಿನಲ್ಲಿ ಮಾತನಾಡಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಬಿಜೆಪಿ ವಕ್ತಾರ ಎಂ. ಜಿ ಮಹೇಶ್, ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ಮಾಡ್ತಿದೀರಾ? ರಾಜ್ಯದ ಸಾಲವನ್ನ ಹೆಚ್ಚಿಸಿದ್ದೇ ನಿಮ್ಮ ಸಾಧನೆನಾ.? ಸಿದ್ದರಾಮಯ್ಯಗೆ ಗಂಡಾಂತರ ಬಂದಾಗ ಹಿಂದುಳಿದ ವರ್ಗದ ಟ್ಯಾಗ್ ಹಾಕುತ್ತಾರೆ. ಈ ರೀತಿ ಸಮಾವೇಶ ಮಾಡುವ ಮೂಲಕ ಹೈಕಮಾಂಡ್ ನಾಯಕರಿಗೆ ಭಯ ಹುಟ್ಟಿಸೋದು. ಸ್ವಾರ್ಥದ ಅಧಿಕಾರಕೋಸ್ಕರ ರಾಜಕಾರಣ ಮಾಡಿರೋ ರಾಜ್ಯದಲ್ಲಿ ಏಕೈಕ ಸಿಎಂ ಸಿದ್ದರಾಮಯ್ಯ. ಸಾಧನಾ ಸಮಾವೇಶ ಮಾಡುವ ಮುನ್ನ ನಿಮ್ಮ ಸಾಧನೆ ಬಹಿರಂಗಪಡಿಸಿ ಎಂದು ಸವಾಲು ಹಾಕಿದರು.
ಸುಳ್ಳು ಹೇಳಿ ಸೈಟ್ ಪಡೆದುಕೊಂಡಿದ್ದಷ್ಟೇ ನಿಮ್ಮ ಸಾಧನೆ. ಕಾಂಗ್ರೆಸ್ ಪಕ್ಷ ಭ್ರಷ್ಟರು, ಲೂಟಿಕೋರ ಪಾರ್ಟಿಯಾಗಿ ಪರಿವರ್ತನೆ ಆಗಿದೆ. ನಿಮ್ಮ ಪಕ್ಷದ ಅಧ್ಯಕ್ಷರು ಡ್ರಗ್ಸ್ ಪೆಡ್ಲರ್ಸ್ ಆಗಿದ್ದಾರೆ. ಕೊಲೆಗಾರರು, ಭ್ರಷ್ಟಾಚಾರರನ್ನ ಕಟ್ಟಿಕೊಂಡು ರಿಪಬ್ಲಿಕ್ ಕಲ್ಬುರ್ಗಿ ಮಾಡಿಕೊಂಡಿದ್ದೀರಾ. ಕೊಲೆಗಡುಗಕರಿಗೆ ನಿಮ್ಮ ಪಕ್ಷದಲ್ಲಿ ರಕ್ಷಣೆ ಸಿಗುತ್ತಿದೆ. ಅಧಿಕಾರಿಗಳು, ಗುತ್ತಿಗೆದಾರರು ನಿಮ್ಮ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಒಳ ಮೀಸಲಾತಿ ನೀಡದೆ ವಿಳಂಬ: ನಾಗಮೋಹನ್ ದಾಸ್, ಡಿ ಕುನ್ಹಾ ನಿಮ್ಮ ಆಸ್ಥಾನದ ವಿದ್ವಾಂಸರು..
ಇನ್ನು ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೆ ತೀರ ವಿಳಂಬ ಮಾಡುತ್ತಿದ್ದು ನೇಮಕಾತಿಗಳು ಸ್ಥಗಿತಗೊಂಡಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆಯೂ ಸರ್ಕಾರದ ವಿರುದ್ದ ಕಿಡಿಕಾರಿದ ಬಿಜೆಪಿ ವಕ್ತಾರ ಎಂ. ಜಿ ಮಹೇಶ್, ನ್ಯಾಯಧೀಶರಾದ ನಾಗಮೋಹನ್ ದಾಸ್, ಡಿ ಕುನ್ಹಾ ಇಬ್ಬರು ನಿಮ್ಮ ಆಸ್ಥಾನದ ವಿದ್ವಾಂಸರಾಗಿದ್ದಾರೆ. ಯಾವುದೇ ವಿಚಾರ ಬಂದರೂ ಇವರ ನೇತೃತ್ವದಲ್ಲೇ ಆಯೋಗ ರಚನೆ ಮಾಡಿ ಸುಳ್ಳು ವರದಿ ಪಡೆಯೋದು ನಿಮ್ಮ ಕೆಲಸ. ಎಸ್ಸಿ ಸಮುದಾಯಕ್ಕೆ ಒಳ ಮೀಸಲಾತಿ ನೀಡದೆ ವಿಳಂಬ ಮಾಡುತ್ತಿದ್ದೀರಾ. ನಾಗಮೋಹನ್ ದಾಸ್, ಡಿ ಕುನ್ಹಾ ಬಗ್ಗೆಯೂ ರಾಜ್ಯದಲ್ಲಿ ಚರ್ಚೆ ಆಗಬೇಕು ಎಂದು ಡಿ ಕುನ್ಹಾ, ನಾಗಮೋಹನ್ ದಾಸ್ ವಿರುದ್ಧವೂ ಹರಿಹಾಯ್ದರು.
ಹಾಗೆಯೇ ಪ್ರಿಯಾಂಕ್ ಖರ್ಗೆ ರನ್ನ ಬಂದಿಸಬೇಕು ಅವರ ವಿಚಾರಣೆ ಆಗಬೇಕು ಎಂದು ಎಂ.ಜಿ ಮಹೇಶ್ ಆಗ್ರಹಿಸಿದರು.
Key words: congress, State Government, Sadhana conference, BJP, spokesperson, Mysore
The post ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ..? ಸರ್ಕಾರದ ವಿರುದ್ದ ಗುಡುಗಿದ ಬಿಜೆಪಿ ವಕ್ತಾರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.