ಬೆಂಗಳೂರು,ಏಪ್ರಿಲ್,2,2025 (www.justkannada.in): ಹಾಲು ವಿದ್ಯುತ್ ದರ ಹೆಚ್ಚಳ ಬೆನ್ನಲ್ಲೇ ಇದೀಗ ರಾಜ್ಯದ ಜನತೆಗೆ ಮತ್ತೊಂದು ದರ ಏರಿಕೆಯ ಬರೆ ಬಿದ್ದಿದೆ. ಹೌದು ರಾಜ್ಯ ಸರ್ಕಾರ ಇದೀಗ ಡೀಸೆಲ್ ಬೆಲೆ ಏರಿಕೆ ಮಾಡಿದೆ.
ಮಧ್ಯರಾತ್ರಿಯಿಂದಲೇ ಡೀಸೆಲ್ ಲೀಟರ್ ಗೆ 2 ಹೆಚ್ಚಳ ಮಾಡಿದೆ. ಡೀಸಲ್ ಮೇಲಿನ ತೆರಿಗೆ ಶೇ 2.73 ರಷ್ಟು ಹೆಚ್ಚಳವಾಗಿದ್ದು, ಈ ಹಿಂದೆ ಶೇ 18.44 ರಷ್ಟು ಇದ್ದ ತೆರಿಗೆ ಶೇ 21.17 ಕ್ಕೇ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಡೀಸೆಲ್ ಬೆಲೆಯನ್ನ 2 ರೂಪಾಯಿ ಹೆಚ್ಚಳ ಮಾಡಿದ್ದು, ಪ್ರಸ್ತುತ 90 ರೂ. ಇದ್ದ ಡೀಸೆಲ್ 92 ರೂಪಾಯಿ ಆಗಲಿದೆ.
ಪರಿಷ್ಕೃತ ದರ ತಕ್ಷಣದಿಂದಲೇ ಜಾರಿಯಾಗಲಿದೆ ಎಂದು ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ. ಏಪ್ರಿಲ್ 1 ರಿಂದಲೇ ಹೊಸ ದರ ಅಸ್ತಿತ್ವಕ್ಕೆ ಬಂದಿದೆ. ಕಳೆದ ವರ್ಷ ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆಯನ್ನ ಸರ್ಕಾರ ಏರಿಕೆ ಮಾಡಿತ್ತು.
Key words: state, diesel, prices, increase
The post ರಾಜ್ಯದ ಜನತೆಗೆ ಮತ್ತೆ ದರ ಏರಿಕೆ ಬರೆ: ಹಾಲು, ವಿದ್ಯುತ್ ಬಳಿಕ ಡೀಸೆಲ್ ಬೆಲೆ ಹೆಚ್ಚಳ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.