8
March, 2026

A News 365Times Venture

8
Sunday
March, 2026

A News 365Times Venture

ರಾಜ್ಯ  ಪೊಲೀಸರ ವೈಪಲ್ಯದ ಬಗ್ಗೆ ಸಂಸತ್ ನಲ್ಲಿ ಗಮನ ಸೆಳೆದ ಸಂಸದ ಯದುವೀರ್

Date:

ನವದೆಹಲಿ,ಜುಲೈ,30,2025 (www.justkannada.in): ಕರ್ನಾಟಕದಲ್ಲಿ ಪೊಲೀಸ್ ವೈಪಲ್ಯದ ಬಗ್ಗೆ ಮೈಸೂರು ಕೊಡಗು ಸಂಸದ ಯದುವೀರ್  ಕೃಷ್ಣದತ್ತ ಚಾಮರಾಜ ಒಡೆಯರ ್ಇಂದು ಇಂದು ಸಂಸತ್ ನಲ್ಲಿ ಗಮನ  ಸೆಳೆದರು.

ಸಂಸತ್‌ನಲ್ಲಿ‌ ಮೈಸೂರು ಡ್ರಗ್ಸ್ ಫ್ಯಾಕ್ಟರಿ ಜಾಲ ಸದ್ದು ಮಾಡಿದ್ದು ಲೋಕಸಭೆಯಲ್ಲಿ ಮಾತನಾಡಿದ ಸಂಸದ ಯದುವೀರ್ ಮೈಸೂರಲ್ಲಿ ಅನಧಿಕೃತ ಡ್ರಗ್ಸ್ ಜಾಲದ ಕುರಿತು ಕಳವಳ ವ್ಯಕ್ತಪಡಿಸಿದರು. ಪೊಲೀಸ್ ವೈಫಲ್ಯದ ಕುರಿತು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಕರ್ನಾಟಕದಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಸಾಂಸ್ಕೃತಿಕ ನಗರಿ ಎಂದು ಹೆಸರುವಾಸಿಯಾಗಿರುವ ಮೈಸೂರಿನಲ್ಲಿ ಡ್ರಗ್ಸ್ ತಯಾರಿಕಾ ಘಟಕದ ಮೇಲೆ ದಾಳಿ ಮಾಡಿ 390 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಆದರೆ ಇದು ಕರ್ನಾಟಕ ಪೊಲೀಸರು ನಡೆಸಿದ್ದ ಕಾರ್ಯಾಚರಣೆಯಿಂದ ಪತ್ತೆಯಾಗಿದ್ದಲ್ಲ. ಬದಲಾಗಿ ಮಹಾರಾಷ್ಟ್ರ ಪೊಲೀಸರು ಮೈಸೂರಿಗೆ ಆಗಮಿಸಿ  ಡ್ರಗ್ಸ್ ತಯಾರಿಕಾ ಘಟಕದ ದಾಳಿ ನಡೆಸಿ  ಪತ್ತೆ ಹಚ್ಚಿದ್ದಾರೆ. ಇದು ನಿಜಕ್ಕೂ ಶಾಕಿಂಗ್ ವಿಚಾರ ಎಂದು ಕಳವಳ ವ್ಯಕ್ತಪಡಿಸಿದರು.

ಈ ಬಗ್ಗೆ ಗೃಹಮಂತ್ರಿಗಳಿಗೆ ಪ್ರಶ್ನಿಸಿದರೆ  ಪೊಲೀಸ್ ಇಲಾಖೆ ವೈಪಲ್ಯದ ಬಗ್ಗೆ ವಿಳಂಬ ಕಾರ್ಯಾಚರಣೆ ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ. ರಾ ಹೀಗಾಗಿ ಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಹಾಗೆಯೇ ಮೈಸೂರಿನ ಉದಯಗಿರಿಯಲ್ಲಿ ಪೊಲೀಸ್ ಠಾಣೆ ಮೇಲೆ ಆದ ದಾಳಿ ಬಗ್ಗೆ  ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತದಿಂದ 11 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಇಂಟೆಲಿಜೆನ್ಸ್ ಫೇಲ್ ಆಗಿದೆ ಎಂದು‌ ಗಂಭೀರ ಆರೋಪ ಮಾಡಿದ ಯದುವೀರ್, ಗೃಹಸಚಿವ ಪರಮೇಶ್ವರ್ ಡ್ರಗ್ಸ್ ಸೀಜ್ ಕುರಿತು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಗುಲ್ಬರ್ಗಾದಲ್ಲಿ ಇತ್ತೀಚೆಗೆ ಡ್ರಗ್ಸ್ ಜಾಲ ಪತ್ತೆಯಾಗಿತ್ತು. ರಾಜ್ಯದ ಐಟಿ ಸಚಿವರು ಆ ಪ್ರಕರಣದಲ್ಲಿ ಇಂಟ್ರೆಸ್ಟ್ ತೋರಿಸಿದ್ದರು ಎಂದು  ಯದುವೀರ್ ತಿಳಿಸಿದರು.vtu

Key words: Mysore, MP, Yaduveer, Parliament , state police

The post ರಾಜ್ಯ  ಪೊಲೀಸರ ವೈಪಲ್ಯದ ಬಗ್ಗೆ ಸಂಸತ್ ನಲ್ಲಿ ಗಮನ ಸೆಳೆದ ಸಂಸದ ಯದುವೀರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

MDA ವಿಶೇಷ ತಹಶೀಲ್ದಾರ್ ವಿರುದ್ಧ ಶಿಸ್ತು ಕ್ರಮ: ಸರ್ಕಾರದಿಂದ ಮತ್ತೆ ಸೂಚನೆ

  ಮೈಸೂರು, ಮಾ.೦೮,೨೦೨೬ : ಅಧಿಕಾರ ದುರುಪಯೋಗದ ಆರೋಪ ಎದುರಿಸುತ್ತಿರುವ ಮೈಸೂರು ಅಭಿವೃದ್ಧಿ...

ಸಾಲ ಮಾಡದೆ ಅಭಿವೃದ್ಧಿ ಆಗಲ್ಲ; ಸಿಎಂ ಸಿದ್ದರಾಮಯ್ಯ

ಮೈಸೂರು,ಮಾರ್ಚ್,7,2026 (www.justkannada.in):  ಸಾಲದ ಬಗ್ಗೆ ಬಿಜೆಪಿಯವರು ಟೀಕೆ ಹಿನ್ನೆಲೆಯಲ್ಲಿ ಈ ಕುರಿತು...

ಕೇಂದ್ರದ ಅನ್ಯಾಯದಿಂದ ಇಷ್ಟೊಂದು ಸಾಲದ ಹೊರೆ : ಬಿಜೆಪಿ ಟೀಕೆ ಶೋಭೆ ತರಲ್ಲ- ಸಚಿವ ಪ್ರಿಯಾಂಕ್ ಖರ್ಗೆ

ಬೀದರ್,ಮಾರ್ಚ್,7,2026 (www.justkannada.in):  ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಹೀಗಾಗಿ ಇಷ್ಟೊಂದು...

ಯಾವುದೇ ಕಾರಣಕ್ಕೂ ರೇಷ್ಮೆ ಕಾರ್ಖಾನೆ ಮುಚ್ಚಲ್ಲ- MLC ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಮಾರ್ಚ್,7,2026 (www.justkannada.in): ಟಿ.ನರಸೀಪುರದಲ್ಲಿ ಕ್ರೀಡಾಂಗಣಕ್ಕಾಗಿ ಯಾವುದೇ ಕಾರಣಕ್ಕೂ ರೇಷ್ಮೆ ಕಾರ್ಖಾನೆ ಮುಚ್ಚುವುದಿಲ್ಲ...