6
March, 2026

A News 365Times Venture

6
Friday
March, 2026

A News 365Times Venture

ರಾಜ್ಯ ಬಜೆಟ್ ಎಲ್ಲಾ ವರ್ಗಗಳಿಗೆ ನೆರವು ಒದಗಿಸುವ ಮಹತ್ವದ ಯೋಜನೆ ಘೊಷಿಸಿದ್ದಾರೆ- ಎಚ್.ಎ. ವೆಂಕಟೇಶ್

Date:

ಬೆಂಗಳೂರು,ಮಾರ್ಚ್,6,2026 (www.justkannada.in): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ ಬಜೆಟ್‌ ನಲ್ಲಿ ರಾಜ್ಯದ ಎಲ್ಲಾ ಜಾತಿ ವರ್ಗಗಳು, ಸಮುದಾಯಗಳಿಗೆ ನೆರವು ಒದಗಿಸುವ ಮಹತ್ವದ ಯೋಜನೆಗಳನ್ನು ಈ ಬಾರಿ ಪ್ರಕಟಿಸಿದ್ದಾರೆ. ಈ  ಮೂಲಕ ಸರ್ವಜನಾಂಗದ ಶಾಂತಿಯ ತೋಟ, ಪ್ರಗತಿಯತ್ತ ದಾಪುಗಾಲಿನ ಓಟ ಎಂಬ ವ್ಯಾಖ್ಯಾನದ ಮೂಲಕ ರಾಜ್ಯದ ಹಿರಿಮೆ ಕಾಪಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ತಿಳಿಸಿದ್ದಾರೆ.

ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಹೆಚ್.ಎ ವೆಂಕಟೇಶ್, ಶೋಷಿತ ಅಹಿಂದ ಸಮುದಾಯಗಳಿಗೆ ನ್ಯಾಯಯುತವಾಗಿ ದಕ್ಕಬೇಕಾಗಿರುವ ಹಕ್ಕು ಮತ್ತು ಸಮಾನ ಪಾಲಿನ ಆಶಯವನ್ನು ನಿಜಗೊಳಿಸುವತ್ತ ಸರ್ಕಾರ ದಿಟ್ಟ ಹೆಜ್ಜೆಯಿಟ್ಟಿದೆ ಎನ್ನುವುದು ಈ ಬಜೆಟ್‌ ನಲ್ಲಿ ಎದ್ದು ಕಾಣುತ್ತಿದೆ. ಬಹಳ ಮುಖ್ಯವಾಗಿ ರಾಜ್ಯದ ಎಲ್ಲಾ ಜನ ಸಮುದಾಯಗಳ ಏಳಿಗೆಗೆ ಪೂರಕವಾಗಿರುವ ಗ್ಯಾರಂಟಿ ಯೋಜನೆಗಳು ಯಾವುದೇ ಅಡೆ ತಡೆಯಿಲ್ಲದಂತೆ ಮುಂದುವರೆಯುತ್ತಿದ್ದು ಇದಕ್ಕೆ ಆರ್ಥಿಕ ಖಚಿತತೆ ಒದಗಿಸಲಾಗಿದೆ ಎಂದಿದ್ದಾರೆ.

ಕೇಂದ್ರದ ಜನವಿರೋಧಿ ಬಿಜೆಪಿ ಸರ್ಕಾರದ ಅಸಹಕಾರ ಮತ್ತು ಹೆಜ್ಜೆಹೆಜ್ಜೆಗೂ ಈ ಸರ್ಕಾರ ಮುಂದಿಡುತ್ತಿರುವ ಹತ್ತಾರು ತೊಡಕುಗಳ ನಡುವೆಯೂ ಸಮರ್ಥ ಆಡಳಿತ ಮತ್ತು ದೂರದೃಷ್ಟಿಯ ಆರ್ಥಿಕ ಸಮತೋಲನ ನೀತಿಯನ್ನು ಒಳಗೊಂಡಿರುವ ತಮ್ಮ ಬಜೆಟ್ ಮೂಲಕ ಮುಖ್ಯಮಂತ್ರಿಯವರು ಬಡ ಜನತೆಗೆ ಸಾಂತ್ವನ ಹೇಳಿದ್ದಾರೆ. 4.48 ಲಕ್ಷ ಕೋಟಿಯ ಈ ಬೃಹತ್ ಆಯವ್ಯಯದ ಮೂಲಕ ಮುಖ್ಯಮಂತ್ರಿಯವರು ತಾವು ಎಂದೆಂದಿಗೂ ಜನಪರ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಯಾವುದೇ ತೆರಿಗೆ ಹಾಗೂ ಸೆಸ್ ಹೊರೆ ಹೊರಿಸದೇ ತಾನೊಬ್ಬ ಸಮರ್ಥ ಆಡಳಿತಗಾರ ಎನ್ನುವ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ರೈತರ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಕೃಷಿ ಮತ್ತು ತೋಟಗಾರಿಕೆಗೆ ರೂ. ೮೩೭೩ ಕೋಟಿ ಮೀಸಲಿಡಲಾಗಿದೆ.  ನೀರಾವರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿಕ್ಷಣ, ಮಹಿಳಾ ಸಬಲೀಕರಣ, ಇನ್ನಿತರ ಪ್ರಮುಖ ಕ್ಷೇತ್ರಗಳಿಗೆ ಒತ್ತು ನೀಡಲಾಗಿದೆ. ಹೆಚ್ಚಿನ ಕೆಪಿಎಸ್ ಶಾಲೆಗಳನ್ನು ಆರಂಭಿಸುವ ಪ್ರಸ್ತಾವನೆ ಮೂಲಕ ಎಲ್ಲರಿಗೂ ಸಮಾನ ಮತ್ತು ಗುಣಮಟ್ಟದ ಶಿಕ್ಷಣ ಕಲ್ಪಿಸಲು ಸಿಎಂ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹವಾಗಿದೆ ಎಂದು ತಿಳಿಸಿದ್ದಾರೆ.

ನಗರ ಮತ್ತು ಗ್ರಾಮೀಣ ಬದುಕಿನ ಸುಸ್ಥಿರತೆಗೆ ಒತ್ತು, ಕಲ್ಯಾಣ ಕಾರ‍್ಯಗಳು ಮತ್ತು ಲಿಂಗಸಮಾನತೆಯ ಆಶಯ, ಕಾರ್ಮಿಕ ಕಲ್ಯಾಣಕ್ಕೆ ವಿಶೇಷ ಒತ್ತು, ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತಾರತಮ್ಯ ತಡೆಗೆ ರೋಹಿತ್ ವೇಮುಲ ಕಾಯ್ದೆ ಜಾರಿ, ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಒತ್ತು, ಪ್ರವಾಸೋದ್ಯದ ಮೂಲಕ ಆರ್ಥಿಕತೆ ಅಭಿವೃದ್ಧಿ, ಜನಸ್ನೇಹಿ ಆಡಳಿತ, ಸಮಗ್ರ ಆರೋಗ್ಯ ಕಾಪಾಡುವ ಮೂಲಕ ಸಶಕ್ತ ರಾಜ್ಯದ ನಿರ್ಮಾಣ, ವ್ಯಾಪಾರ ಮತ್ತು ಉದ್ಯಮ ಅಭಿವೃದ್ಧಿಗೆ ಆದ್ಯತೆ, ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ, ನೀರಾವರಿ ಇನ್ನಿತರ ಪ್ರಮುಖ ಕ್ಷೇತ್ರಗಳಿಗೆ ಎಲ್ಲಾ ಆದ್ಯತೆ ನೀಡುವ ಮೂಲಕ ಮುಖ್ಯಮಂತ್ರಿಯವರು ತಮ್ಮ ಅತ್ಯುತ್ತಮ ಹಾಗೂ ಈ ದೇಶದ ಎಲ್ಲಾ ರಾಜ್ಯಗಳ ಆಡಳಿತ ಮುಖ್ಯಸ್ಥರಿಗೆ ಮಾದರಿ ಎನಿಸುವ ಆಯವ್ಯಯವನ್ನು ಈ ಅವಧಿಯಲ್ಲಿ ಮುಂದಿಟ್ಟಿದ್ದಾರೆ ಎಂದು ಎಚ್.ಎ. ವೆಂಕಟೇಶ್ ತಿಳಿಸಿದರು.

Key words: budget, KPCC spokesperson, H.A. Venkatesh

The post ರಾಜ್ಯ ಬಜೆಟ್ ಎಲ್ಲಾ ವರ್ಗಗಳಿಗೆ ನೆರವು ಒದಗಿಸುವ ಮಹತ್ವದ ಯೋಜನೆ ಘೊಷಿಸಿದ್ದಾರೆ- ಎಚ್.ಎ. ವೆಂಕಟೇಶ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ರೈತರ ಪಾಲಿಗೆ ಬಜೆಟ್ ನಿರಾಸೆ ತಂದಿದೆ – ಕುರುಬೂರು ಶಾಂತಕುಮಾರ್

ಮೈಸೂರು,ಮಾರ್ಚ್,6,2026 (www.justkannada.in): ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ....

ಕೇಂದ್ರದಿಂದ ಮಲತಾಯಿ ಧೋರಣೆ: ರಾಜ್ಯದ ಬೆಳವಣಿಗೆ ಪ್ರಮಾಣ ಕಡಿಮೆಯಾಗಿದೆ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಮಾರ್ಚ್,6,2026 (www.justkannada.in):  ಕೇಂದ್ರ ಸರ್ಕಾರ ಜಿ.ಎಸ್ ಟಿ ಕೊಡದಿದ್ದರಿಂದ ರಾಜ್ಯದ ಬೆಳವಣಿಗೆ...

ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಸಮತೋಲಿತ ಬಜೆಟ್: MLC  ಕೆ.ಶಿವಕುಮಾರ್

ಮೈಸೂರು,ಮಾರ್ಚ್,6,2026 (www.justkannada.in):  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಇತಿಹಾಸದಲ್ಲಿ 17ನೇ ಬಜೆಟ್...

UPSC ಪರೀಕ್ಷೆ ಫಲಿತಾಂಶ ಪ್ರಕಟ: ಅನುಜ್​ ಅಗ್ನಿಹೋತ್ರಿ ದೇಶಕ್ಕೇ ನಂ.1

ನವದೆಹಲಿ,ಮಾರ್ಚ್,6,2026 (www.justkannada.in): ಕೇಂದ್ರ ಲೋಕಸೇವಾ ಸೇವಾ ಆಯೋಗದ (ಯುಪಿಎಸ್​ಸಿ) 2025ನೇ ಸಾಲಿನ ಪರೀಕ್ಷಾ...