ಬೆಂಗಳೂರು,ಆಗಸ್ಟ್,8,2025 (www.justkannada.in): ನಾವು ಅನ್ಯಾಯದ ವಿರುದ್ದ ಹೋರಾಡಿದ್ದೇವೆ. ವರುಣ ಕ್ಷೇತ್ರವಾಗಲಿ, ಕನಕಪುರ ಕ್ಷೇತ್ರವೇ ಆಗಲಿ ಯಾವುದೇ ಕ್ಷೇತ್ರದಲ್ಲಿ ಮತದಾನ ಅಕ್ರಮವಾಗಿದ್ದರೇ ಕ್ರಮ ಕೈಗೊಳ್ಳಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಮುಖ್ಯ ಚುನಾವಣಾ ಕಚೇರಿಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಾವು ಅನ್ಯಾಯದ ವಿರುದ್ದ ಹೋರಾಡಿದ್ದೇವೆ. ಮುಖ್ಯ ಚುನಾವಣಾಧಿಕಾರಿ ಭೇಟಿ ಮಾಡಿದ್ದೇವೆ . ಇಂದು ಇಡೀ ದೇಶ ನೋಡುವ ಪ್ರತಿಭಟನೆ ಮಾಡಿದ್ದೇವೆ. ಇಂದು ಹಬ್ಬ ಇದ್ದರೂ ಮತದಾನದ ಹಕ್ಕಿಗಾಗಿ ಪ್ರತಿಭಟನೆ ಮಾಡಿದ್ದೇವೆ ಎಂದರು.
ಯಾವ ರೀತಿ ಅನ್ಯಾಯ ಆಗಿದೆ ಎಂದು ನಿನ್ನೆ ರಾಹುಲ್ ಗಾಂಧಿ ಮಾಹಿತಿ ನೀಡಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ದ ಕ್ರಮ ಆಗಬೇಕು. ಅಕ್ರಮ ನಡೆದಿರುವುದಕ್ಕೆ ಬೇಕಾದಷ್ಟು ದಾಖಲೆಗಳಿವೆ ಆಯೋಗಕ್ಕೆ ಮನವಿ ಪತ್ರ ನೀಡಿದ್ದೇವೆ ವಿಸ್ತೃತವಾಗಿ ನೀಡಿಲ್ಲ. ನಾವು ಕೂಡ ರಿಸರ್ಚ್ ಮಾಡಿದ್ದೇವೆ. ವರುಣ ಕ್ಷೇತ್ರ ಆಗಲಿ ಕನಕಪುರ ಕ್ಷೇತ್ರವೇ ಆಗಲಿ ಯಾವುದೇ ಕ್ಷೇತ್ರದಲ್ಲಿ ಅಕ್ರಮ ಆಗಿದ್ದರೂ ಕ್ರಮ ಕೈಗೊಳ್ಳಲಿ ಅಕ್ರಮ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಲಿ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
Key words: illegal Voting, DCM, DK Sivakumar, Election office, visit
The post ವರುಣ, ಕನಕಪುರ ಯಾವುದೇ ಕ್ಷೇತ್ರವಾಗಲಿ, ಅಕ್ರಮ ಆಗಿದ್ದರೆ ಕ್ರಮ ಕೈಗೊಳ್ಳಲಿ- ಡಿಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.