ಬೆಂಗಳೂರು,ಜೂನ್,13,2025 (www.justkannada.in): ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವು 11 ವರ್ಷಗಳಲ್ಲಿ ವಿಪಕ್ಷ ನಾಯಕರ ಮೇಲೆ IT, ED ದಾಳಿ ನಡೆಸಿರುವುದೇ ದೊಡ್ಡ ಸಾಧನೆಯಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಕೇಂದ್ರ ಸರ್ಕಾರವು ವಿಪಕ್ಷ ನಾಯಕರ ಮೇಲೆ ದುರುದ್ದೇಶ ಪೂರ್ವಕವಾಗಿ ಐಟಿ, ಇಡಿ ದಾಳಿ ನಡೆಸಿರುವುದೇ ದೊಡ್ಡ ಸಾಧನೆಯಾಗಿದೆ. ಈ 11 ವರ್ಷದಲ್ಲಿ ಬಿಜೆಪಿ ನೀಡಿದ್ದ ಯಾವುದೇ ಆಶ್ವಾಸನೆ-ಯನ್ನು ಈಡೇರಿಸಲಿಲ್ಲ. ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ ಅಕ್ರಮ ಪತ್ತೆ ಮಾಡುತ್ತಿಲ್ಲ. ಈ ಬಗ್ಗೆ ಐಟಿ, ಇಡಿ ಗಮನ ಕೊಡಬೇಕು ಎಂದು ತಿಳಿಸಿದರು.
ಉದ್ಯೋಗ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿಯ ಅವಧಿಯಲ್ಲಿ ನಿರುದ್ಯೋಗ ಸೃಷ್ಟಿದ್ದೇ ಹೆಚ್ಚು. ಉದ್ಯೋಗ ಸೃಷ್ಟಿ ಮಾಡಲಿಲ್ಲ. ವಿದೇಶದಲ್ಲಿರುವ ಕಪ್ಪು ಹಣ ವಾಪಸ್ ತರಲಿಲ್ಲ. ಡಿಸೇಲ್, ಪೆಟ್ರೋಲ್ ಮತ್ತು ಗ್ಯಾಸ್ ಸಿಲಿಂಡರ್ ಸೇರಿದಂತೆ ಎಲ್ಲಾ ಬೆಲೆಗಳು ಏರಿಕೆಯಾಗಿವೆ. ಗಾಳಿ ಬೆಳಕು ಬಿಟ್ಟು ಉಳಿದ ಎಲ್ಲಾ ಪದಾರ್ಥಗಳಿಗೂ ಜಿಎಸ್‌ಟಿ ಹಾಕಿದ ಕೀರ್ತಿ ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಲೇವಡಿ ಮಾಡಿದರು
ಸ್ವಾತಂತ್ರ್ಯ ಬಂದ ದಿನದಿಂದಲೂ ಎಲ್ಲಾ ಪ್ರಧಾನಿಗಳು ಸೇರಿ ₹52ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಆದರೆ ನರೇಂದ್ರ ಮೋದಿ ಅವರು ಅಧಿಕಾರ ನಡೆಸಿದ 11 ವರ್ಷದಲ್ಲಿ ₹150 ಲಕ್ಷ ಕೋಟಿ ರೂ ಸಾಲ ಮಾಡಿ ಸಾರ್ವಜನಿಕರ ಮೇಲೆ ಸಾಲದ ಭಾರ ಹೊರಿಸಿದ್ದಾರೆ. ಇದೇ ಅವರ ದೊಡ್ಡ ಸಾಧನೆ ಎಂದು ಚಾಟಿ ಬೀಸಿದರು.
Key words: Central government, biggest, achievement, IT, ED attack, Minister, Ramalingareddy
The post ವಿಪಕ್ಷ ನಾಯಕರ ಮೇಲೆ IT, ED ದಾಳಿ ನಡೆಸುವುದೇ ಕೇಂದ್ರದ ದೊಡ್ಡ ಸಾಧನೆ- ಸಚಿವ ರಾಮಲಿಂಗಾರೆಡ್ಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.